ನವದೆಹಲಿ: ಇಸ್ರೋದ ಹೆಮ್ಮೆಯ ಚಂದ್ರಯಾನ 2 ಯೋಜನೆಯಲ್ಲಿ ಕೆಲವು ವೈಫಲ್ಯವಾಗಿರಬಹುದು. ಆದರೆ ಅದೇ ಮುಕ್ತಾಯವಾಗಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ಭಾರತ ಈಗಾಗಲೇ ಹಲವು ಸುಧಾರಿತ ಉಪಗ್ರಹಗಳ ಉಡಾವಣೆಗೆ ಚಿಂತನೆ ನಡೆಸುತ್ತಿದೆ. ಚಂದ್ರಯಾನ 2 ರ ಬಗ್ಗೆ ನೀವೆಲ್ಲ ಕೇಳಿದ್ದೀರಿ. ಅದು ತಾಂತ್ರಿಕವಾಗಿ ಕೆಲವು ವೈಫಲ್ಯಗಳನ್ನು ಕಂಡಿರಬಹುದು. ಆದರೆ ಅದರ ಅಧ್ಯಾಯ ಇನ್ನೂ ಮುಕ್ತಾಯವಾಗಿಲ್ಲ. ನಮ್ಮಲ್ಲಿ ಭರವಸೆ ಉಳಿದಿದೆ ಎಂದು ಶಿವನ್ ಹೇಳಿದರು. ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಸಂಶೋಧನೆ ನಡೆಸಲು ಇಸ್ರೋ ತನ್ನೆಲ್ಲ ಅನುಭವ, ಜ್ಞಾನವನ್ನೂ ಉಪಯೋಗಿಸಲಿದೆ, ಜೊತೆಗೆ ಆ ವೈಫಲ್ಯ ಮುಂದೆಂದೂ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲಿದೆ ಎಂದು ಶಿವನ್ ಹೇಳಿದರು. ದೆಹಲಿ ಐಐಟಿಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು.
ಚಂದ್ರಯಾನ 2 ರ ನಮ್ಮ ಯೋಜನೆಯ ಉದ್ದೇಶ ಸಂಪೂರ್ಣ ಯಶಸ್ವಿಯಾಗದೆ ಇದ್ದರೂ 95 % ಅದು ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದ ಉದ್ದಕ್ಕೂ ಸುತ್ತುತ್ತಿರುವ ಆರ್ಬಿಟರ್ ಈಗಲೂ ಚಂದ್ರನ ಅಧ್ಯಯನ ನಡೆಸುತ್ತಿದೆ. ಸಾಕಷ್ಟು ಅಗತ್ಯ ಮಾಹಿತಿಯನ್ನು ರವಾನಿಸುತ್ತಿದೆ ಎಂದು ಕೆ ಶಿವನ್ ಹೇಳಿದರು.
ಇಸ್ರೋದ ಮುಂದಿನ ಮಹತ್ವಾಕಾಂಕ್ಷಿ ಯೋಜನೆ ಎಂದರೆ ಚಂದ್ರನ ಸಮೀಪಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳಿಸುವುದು, ಜೊತೆಗೆ ಮಾನವ ಸಹಿತ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳಿಸುವುದು. ಸದ್ಯದಲ್ಲೇ ಈ ಎರಡು ಮಹತ್ವಾಕಾಂಕ್ಷಿ ಯೋಜನೆಯನ್ನು ಇಸ್ರೋ ಸಾಕಾರಗೊಳಿಸಲಿದೆ ಎಂದು ಅವರು ಹೇಳಿದರು.
ಯಶಸ್ವಿಯಾಗಲು ಟಾಪರ್ ಆಗಬೇಕಿಲ್ಲ: ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಶಿವನ್, “ಜೀವನದಲ್ಲಿ ಯಶಸ್ವಿಯಾಗಲು ನೀವು ಅತೀ ಬುದ್ಧಿವಂತರಾಗಬೇಕಿಲ್ಲ, ಟಾಪರ್ ಆಗಬೇಕಿಲ್ಲ, ನೀವು ಅತ್ಯುತ್ತಮ ಗ್ರೇಡ್ ಪಡೆಯಬೇಕಿಲ್ಲ. ನಿಮ್ಮ ಮುಂದಿರುವ ಅಡೆತಡೆ, ವೃಥಾ ಕಾಲಹರಣದ ಕೆಲಸಗಳನ್ನು ಬದಿಗಿಟ್ಟು ಒಂದೇ ಕಡೆ ಗಮನವಿಡುವುದನ್ನು ಕಲಿಯಬೇಕು” ಎಂದು ಶಿವನ್ ಹೇಳಿದರು. ನಿಮ್ಮ ಆಸಕ್ತಿ ಪ್ರತಿಭೆಯನ್ನು ಗುರುತಿಸಿ. ಮತ್ತೊಬ್ಬರನ್ನು ನಕಲು ಮಾಡಬೇಡಿ. ನಿಮಗೆ ಯಾವುದು ಆಸಕ್ತಿಯೋ ಅದನ್ನು ಮಾಡಿ, ಮತ್ತೊಬ್ಬರು ಮಾಡಿದ್ದನ್ನು ಮಾಡಿದರೆ ನೀವೂ ಕಾಮೆಡಿಯನ್ ಆಗುತ್ತೀರಿ ಅಷ್ಟೆ. ನಿಮಗೆ ಯಾವುದು ಇಷ್ಟ, ಮತ್ತು ನಿಮಗೆ ಯಾವುದು ಸೂಕ್ತ ಎಂಬುದನ್ನು ಅರ್ಥ ಮಾಡಿಕೊಂಡು ಆ ಹಾದಿ ಹಿಡಿಯಿರಿ ಎಂದು ಸಹ ಶಿವನ್ ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…
ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…
ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…