ಸುಳ್ಯ : ನೀರು ನಿಂತಲ್ಲೇ ನಿಂತರೆ ಅದು ಕಲ್ಮಶಗೊಳ್ಳುತ್ತದೆ. ಇದು ಬದುಕಿಗೂ ಅನ್ವಯಿಸುತ್ತದೆ. ಚಲನಶೀಲತೆ ಇರುವಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ. ಆ ಮೂಲಕ ಬದುಕಿಗೊಂದು ಅರ್ಥ ಬರುತ್ತದೆ. ಸಂಘಟನೆಗಳಲ್ಲಿ ಚಲನಶೀಲತೆ ಇದ್ದರೆ ಅದು ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಎಂದು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಹೇಳೀದರು.
ಅವರು ಶ್ರೀಗುರುರಾಘವೇಂದ್ರ ಮಠದಲ್ಲಿ ಜರಗಿದ ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ರತ್ನಾವತಿ ಸೋಮಯಾಗಿ, ಅಜ್ಜಾವರ ಸರಸ್ವತಿ ಬೈಪಾಡಿತ್ತಾಯ ಮತ್ತು ಕಮಲಮ್ಮ ಕಾಯಂಬಾಡಿ ಇವರನ್ನು ಬೃಂದಾವನ ಸೇವಾ ಸಮಿತಿ ಟ್ರಸ್ಟಿ ಸುಮಾ ಸುಬ್ಬಾರಾವ್ ಸಮ್ಮಾನಿಸಿದರು. ಮುರಳೀಕೃಷ್ಣ ಕಣ್ಣರಾಯ ಸಭಾಧ್ಯಕ್ಷತೆ ವಹಿಸಿದ್ದರು.
ಪ್ರತಿಭಾ ಪುರಸ್ಕಾರ :
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ಕೃಪಾ ಅಮ್ಮಣ್ಣಾಯ ಹಾಗೂ ಸಿಇಟಿ ನೀಟ್ ಪರೀಕ್ಷೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ಅಮಿಷಾ ಸೋಮಯಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಬೃಂದಾವನ ಸೇವಾಟ್ರಸ್ಟ್ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮೂಡಿತ್ತಾಯ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಮಕುಮಾರ್ ಹೆಬ್ಬಾರ್ ಸ್ವಾಗತಿಸಿ, ಮಹಿಳಾ ಘಟಕದ ಕಾರ್ಯದರ್ಶಿ ಸೌಮ್ಯ ಸೋಮಯಾಗಿ ವರದಿ ವಾಚಿಸಿದರು. ಯುವ ಘಟಕದ ಅಧ್ಯಕ್ಷ ಪ್ರಥಮ ಮೂಡಿತ್ತಾಯ ವಂದಿಸಿದರು. ಶರಣ್ಯ ಮತ್ತು ಅರ್ಜುನ್ ಆಚಾರ್ ನಿರೂಪಿಸಿದರು. ಪೂರ್ವಾಧ್ಯಕ್ಷ ಪ್ರಕಾಶ್ ಮೂಡಿತ್ತಾಯ ಅಭಿನಂದನಾ ಮಾತುಗಳನ್ನಾಡಿದರು.
ಮಹಾಸಭೆಯಲ್ಲಿ ಮುಂದಿನ ಸಾಲಿನ ಅಧ್ಯಕ್ಷರಾಗಿ ರಾಮಕೃಷ್ಣ ಮಾಳತ್ತಾಯ ಅಧಿಕಾರ ಸ್ವೀಕರಿಸಿದರು. ಪ್ರವೀಣಾ ಸೋಮಯಾಗಿ, ಸಂಜನಾ ಸೋಮಯಾಗಿ, ಪ್ರಣವ್ ಮೂಡಿತ್ತಾಯ, ರೂಪಾ ಕಣ್ಣರಾಯ, ಹೇಮ ವೈಲಾಯ ಸಹಕರಿಸಿದರು. ಬಳಿಕ ದುರ್ಗಾಪೂಜೆ ನಡೆಯಿತು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…