ಕೊರೋನಾ ವೈರಸ್ ಇಡೀ ಪ್ರಪಂಚದಲ್ಲಿ ತಲೆ ಎತ್ತಿ ನಿಂತಿದೆ. ಕೊರೋನಾ ವೈರಸ್ ಇದೆ-ಇಲ್ಲ ಎಂಬ ಚರ್ಚೆ ಹೆಚ್ಚಾಗಿರುವ ನಡುವೆಯೇ ಚಳಿಗಾಲದಲ್ಲಿ ಮತ್ತೆ ಸಾಂಕ್ರಾಮಿಕ ರೋಗ ಬಾಧೆ ಕಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳು ಈ ಪರಿಸ್ಥಿತಿಯನ್ನು ‘ಟ್ವೈನೆಡೆಮಿಕ್’ ಎಂದು ಹೆಸರಿಸಿದ್ದಾರೆ.
ಈಗಿನ ಮಾಹಿತಿ ಪ್ರಕಾರ ಋತುಮಾನಗಳು ಬದಲಾಗುವ ವೇಳೆ ಸಾಮಾನ್ಯವಾಗಿ ಶೀತ-ಜ್ವರ ಬಾಧೆ ಇರುತ್ತದೆ. ಇದು ಒಂದೆರಡು ದಿನಗಳ ಕಾಲ ಇದ್ದು ನಂತರ ವಾಸಿಯಾಗುತ್ತದೆ. ಇದು ಕೂಡಾ ವೈರಸ್ ಜ್ವರವಾಗಿದೆ. ಆದರೆ ಈಗಾಗಲೇ ಕೋವಿಡ್ ಇರುವ ಕಾರಣದಿಂದ ಋತುಮಾನ ಬದಲಾವಣೆಯ ಜ್ವರವೂ ಸಾಂಕ್ರಾಮಿಕವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ರೋಗಿಗಳ ಸಂಖ್ಯೆ ಹೆಚ್ಚಾದರೆ, ಆಸ್ಪತ್ರೆಗಳ ಮುಂದೆ ದೊಡ್ಡ ಸಮಸ್ಯೆ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ಭಯಗೊಂಡರೆ ಕೋವಿಡ್ ಪರಿಸ್ಥಿತಿಯೇ ಬರಲಿದೆ. ಹೀಗಾಗಿ ಭಯ ನಿವಾರಣೆ ಹಾಗೂ ಆಸ್ಪತ್ರೆಗಳಲ್ಲಿ ದಟ್ಟಣೆ ನಿವಾರಣೆಗೆ ಕ್ರಮ ಅನಿವಾರ್ಯ ಎಂದೂ ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಕೊರೋನಾ ಭಯ ಜಗತ್ತನ್ನು ಆವರಿಸಿದೆ. ಈ ಭಯದ ನಡುವೆ ಮುಂದಿನ ಋತುಮಾನ ಬದಲಾವಣೆಯ ಸಮಯದ ಜ್ವರ ಬಗ್ಗೆ ಧೈರ್ಯ ತುಂಬುವ ಕೆಲಸವಾಗಬೇಕಿದೆ. ಗ್ರಾಮೀಣ ಭಾಗದಲ್ಲೂ ವೈದ್ಯರು, ತಜ್ಞ ವೈದ್ಯರು ಲಭ್ಯವಾಗುವಂತೆ, ಸೂಕ್ತ ಔಷಧಿ ಲಭ್ಯವಾಗುವಂತೆ, ತಮ್ಮ ಕುಟುಂಬ ವೈದ್ಯರೇ ಲಭ್ಯವಾಗುವಂತೆ ವ್ಯವಸ್ಥೆ ಆಗಬೇಕಾಗಿದೆ. ಇದಕ್ಕಾಗಿ ಈಗಲೇ ತಯಾರಿ ನಡೆಯಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಸಮಾಜಕ್ಕೆ, ರಾಷ್ಟ್ರಕ್ಕೆ ವಿಶ್ವಕ್ಕೆ ಬೆಳಕು ನೀಡುವ ವ್ಯವಸ್ಥೆಯನ್ನು ಬೆಳೆಸುವುದು ಇಡೀ ಸಮಾಜದ ಜವಾಬ್ದಾರಿ…
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು.…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…