ಸುಬ್ರಹ್ಮಣ್ಯ: ಚಾರಣದ ವೇಳೆ ಕಾಲು ಮುರಿತಕ್ಕೊಳಗಾಗಿದ್ದ ಯುವತಿಯೋರ್ವಳನ್ನು ಸುಬ್ರಹ್ಮಣ್ಯದ ಯುವಕರ ತಂಡ 7 ಕಿಲೋ ಮೀಟರ್ ದೂರ ಹೊತ್ತು ತಂಡ ಘಟನೆ ನಡೆದಿದೆ.
(ವಿಡಿಯೋ ಇದೆ)
ಬೆಂಗಳೂರು ಮೂಲದ 23 ಜನರ ತಂಡದ ಚಾರಣಕ್ಕೆ ಸೋಮವಾರ ತೆರಳಿತ್ತು. ಈ ಸಂದರ್ಭ ಯುವತಿಯೋರ್ವಳು ಕಾಲು ಜಾರಿ ಬಿದ್ದು ಕಾಲುನೋವಿನಿಂದ ಬಳಲಿದರು. ಆಕೆಯನ್ನು ಸುಬ್ರಹ್ಮಣ್ಯಕ್ಕೆ ಕರೆತರುವ ಬಗ್ಗೆ ಯುವಕರಲ್ಲಿ ಗೊಂದಲ ಉಂಟಾಯಿತು. ಯುವಕರ ತಂಡ ಅರಣ್ಯ ಇಲಾಖಾ ಸಿಬಂದಿಗಳಿಗೆ ಮಾಹಿತಿ ನೀಡಿದ ಬಳಿಕ ಅರಣ್ಯ ಅಧಿಕಾರಿಗಳು ಸುಬ್ರಹ್ಮಣ್ಯದ ಯುವಕರಿಗೆ ಮಾಹಿತಿ ನೀಡಿದ್ದಾರೆ.
ಗಿರಿಗದ್ದೆ ಬಳಿಯಿಂದ ಸುಬ್ರಹ್ಮಣ್ಯದ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕುಸುಮಾಧರ, ಧರ್ಮಪಾಲ , ಕೃಷ್ಣ ಕುಮಾರ್ ಶೆಟ್ಟಿ, ಜೀವನ್ , ಸುಂದರ ಗೌಡ ಚೇರು ಮೊದಲಾದ ಯುವಕರ ತಂಡ ಪರ್ವತಕ್ಕೆ ತೆರಳಿ ಯುವತಿಯನ್ನು ಅಟ್ಟೆ ಮೇಲೆ ಮಲಗಿಸಿ ಸುಮಾರು ಏಳು ಕಿಲೋಮೀಟರ್ ಹೆಗಲಮೇಲೆ ಹೊತ್ತುಕೊಂಡು ಬಂದು ರಕ್ಷಣೆ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ…..
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel