ಬೆಳ್ತಂಗಡಿ: ಬುಧವಾರ ಸಂಜೆ ಸುರಿದ ಮಳೆಗೆ ಚಾರ್ಮಾಡಿ ಹಾಗೂ ದಿಡುಪೆ ಪ್ರದೇಶದ ನದಿಗಳಲ್ಲಿ ಇದ್ದಕ್ಕಿದ್ದಂತೆ ನೀರಿನ ಮಟ್ಟ ಏರಿಕೆಯಾಗಿ ಜನತೆ ಆತಂಕಕ್ಕೆ ಒಳಗಾದರು. ನೀರಿನ ರಭಸಕ್ಕೆ ಹಲವು ತೋಟಗಳಿಗೆ ನೀರು ನುಗ್ಗಿದರೆ , ಈಚೆಗೆ ನಿರ್ಮಾಣ ಮಾಡಿದ ರಸ್ತೆಗಳೂ ಕೊಚ್ಚಿ ಹೋದವು.
ಬುಧವಾರ ಸಂಜೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಸಾಧಾರಣ ಮಳೆ ಸುರಿಯಿತು. ಆದರೆ ದಿಡುಪೆ ಸೇತುವೆಯ ಸಮೀಪ ಹಾಗೂ ಕುಕ್ಕಾವು ಸೇತುವೆಯ ಸಮೀಪ ನದಿ ನೀರು ಪ್ರವಾಹ ಮಾದರಿಯಲ್ಲಿ ಉಕ್ಕಿ ಹರಿದಿದೆ. ಇದರ ಜೊತೆಗೆ ಅರಣ್ಯದ ಕಡೆಯಿಂದ ಬರುವ ಎಲ್ಲಾ ಹೊಳೆಗಳೂ ತುಂಬಿ ಹರಿದ ನೀರು ತೋಟಗಳಿಗೂ ನುಗ್ಗಿದೆ. ದಿಡುಪೆಯಲ್ಲಿ ಹಾಗೂ ಕುಕ್ಕಾವಿನಲ್ಲಿ ಕಳೆದ ಪ್ರವಾಹದ ಸಂದರ್ಭದಲ್ಲಿ ಹಾನಿಗೆ ಈಡಾಗಿದ್ದ ರಸ್ತೆಗಳನ್ನು ಮಣ್ಣು ಹಾಕಿ ಮರು ನಿರ್ಮಿಸಲಾಗಿತ್ತು. ಈ ರಸ್ತೆಗಳು ಬಹುತೇಕ ನೀರಿಗೆ ಕೊಚ್ಚಿ ಹೋಗಿದೆ. ನದಿ ಕೊರತಕ್ಕೆ ಒಳಗಾಗಿದ್ದ ಪ್ರದೇಶಗಳಲ್ಲಿ ನದಿ ಬದಿಯಲ್ಲಿ ಹಾಕಲಾಗಿದ್ದ ತಡೆಗೋಡೆಗಳು ಮತ್ತೆ ಕೊಚ್ಚಿ ಹೋಗಿದೆ. ತೋಟಗಳಲ್ಲಿ ಮತ್ತೆ ಮರಳು ಹಾಗೂ ಮಣ್ಣು ತುಂಬಿಕೊಂಡಿದೆ.
ಕೊಳಂಬೆ ಪ್ರದೇಶದಲ್ಲಿ ತೋಟಗಳಿಗೆ ಹಾಗೂ ಗದ್ದೆಗಳಿಗೆ ನುಗ್ಗಿದ್ದ ಮರಳನ್ನು ಈಗಾಗಲೆ ತೆರವು ಗೊಳಿಸಲಾಗಿತ್ತು ಇದೀಗ ಪ್ರವಾಹದೊಂದಿಗೆ ಮತ್ತೆ ಮರಳು ಬಂದು ಸೇರಿಕೊಂಡಿದೆ. ನೀರು ಏರುತ್ತಿರುವುದನ್ನು ನೋಡಿ ಜನರು ಮತ್ತೆ ಪ್ರವಾಹದ ಭಯದಲ್ಲಿ ಮನೆಗಳಿಂದ ಹೊರಗೆ ಬಂದಿದ್ದರು. ಆದರೆ ನಿಧಾನವಾಗಿ ನದಿ ನೀರು ಇಳಿಯಲಾರಂಭಿಸಿದೆ. ರಾತ್ರಿಯ ವೇಳೆ ಈ ಪ್ರದೇಶಗಳಲ್ಲಿ ಮತ್ತೆ ಮಳೆ ಸುರಿಯಲಾರಂಭಿಸದ್ದು ಮತ್ತೆ ಜನರಲ್ಲಿ ಭಯ ಮೂಡಲು ಕಾರಣವಾಗಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…