ಚೆನ್ನಾವರ : ಆಟಿದ ಕೂಟ ಜಿಲ್ಲಾ ಮಟ್ಟದ ಕೆಸರುಗದ್ದೆ ಜನಪದ ಕ್ರೀಡಾಕೂಟ

July 31, 2019
11:00 AM

ಸವಣೂರು : ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತುಳುನಾಡ ಆಟಗಳನ್ನು ನಡೆಸುವುದು ಅಗತ್ಯ.ಯುವ ಮನಸ್ಸುಗಳಿಂದ ಸಂಸ್ಕೃತಿಯ ಚಟುವಟಿಕೆಯನ್ನು ಪಸರಿಸಲು ಸಾಧ್ಯ ,ಪರಂಪರಾಗತ ಕೃಷಿ ಜೊತೆ ನಾಡಿನ ಗ್ರಾಮೀಣ ಕ್ರೀಡೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನ ಶ್ಲಾಘನೀಯ ಎಂದು ಸವಣೂರು ಬೊಳ್ಳಿಬೊಲ್ಪು ತುಳು ಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಹೇಳಿದರು.

Advertisement
Advertisement

ಅವರು ನೆಹರು ಯುವ ಕೇಂದ್ರ ಮಂಗಳೂರು ,ತಾಲೂಕು ಯುವಜನ ಒಕ್ಕೂಟ ಪುತ್ತೂರು ಇದರ ಸಹಯೋಗದಲ್ಲಿ ಅಭ್ಯುದಯ ಯುವಕ ಮಂಡಲ ಚೆನ್ನಾವರ ಇದರ ಅಶ್ರಯದಲ್ಲಿ ನಡೆದ ಆಟಿದ ಕೂಟ ಹಾಗೂ ಕೆಸರುಗದ್ದೆ ಜನಪದ ಕ್ರೀಡಾಕೂಟದ ಸಭಾಕಾರ್ಯಕ್ರಮವನ್ನು ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸ ನೀಡಿದ ಕಾಣಿಯೂರು ಪ್ರಗತಿ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ ಅವರು,ನಮ್ಮ ಪೂರ್ವಜರು ನಡೆಸುತ್ತಿದ್ದ ಪ್ರತಿಯೊಂದು ಆಚರಣೆಗೂ ತನ್ನದೇ ಆದ ಮಹತ್ವವಿದೆ.ಈ ಮಹತ್ವನ್ನು ಎಲ್ಲರೂ ತಿಳಿದುಕೊಳ್ಳುವುದು ಅತ್ಯವಶ್ಯ.ಆಟಿ ತಿಂಗಳು ಎಂದರೆ ಅದು ಕಷ್ಟದ ತಿಂಗಳು.ಹಾಲೆ ಮರದ ಕಷಾಯ ಕುಡಿಯುವ ಹಿನ್ನೆಲ್ಲೆಯಲ್ಲೂ ವೈಜ್ಞಾನಿಕ ಸತ್ಯ ಅಡಗಿದೆ  ಎಂದರು.

ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ರೋಟರೀಕ್ಲಬ್‍ನ ಬೆಳ್ಳಾರೆ ಟೌನ್‍ನ ನಿರ್ದೇಶಕ ಎನ್.ಎಸ್.ವೆಂಕಪ್ಪ ಗೌಡ ನಾರ್ಕೋಡು , ತಾ.ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು , ಸಾಮಾಜಿಕ ಮುಂದಾಳು ಸೈಯ್ಯದ್ ಗಫೂರ್ ಸಾಹೇಬ್  , ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ದಯಾಕರ ಆಳ್ವ ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ,ವಿಜಯ ಲಕ್ಷ್ಮೀ ಕಾರ್ಗೋ ಮೂವರ್ಸ್‍ನ ರಾಜೇಶ್ ರಾವ್ ಪುತ್ತೂರು  ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ ,ನಮ್ಮ ಪುರಾತನ ಸಂಸ್ಕೃತಿ ಯ ಆಚರಣೆಗಳನ್ನು ಜನಮಾನಸದಲ್ಲಿ ಶಾಶ್ವತ ಉಳಿಸುವ ನಿಟ್ಟಿನಲ್ಲಿ ಯುವಕ ಮಂಡಲದ ಕೆಲಸ ಅಭಿನಂದನಾರ್ಹ ಎಂದರು.

ಗೌರವಾರ್ಪಣೆ
ಇದೇ ಸಂಧರ್ಭದಲ್ಲಿ ಪಾಲ್ತಾಡಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಿದ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ಕಲ್ಲೂರಾಯ ಬಂಬಿಲ, 36 ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ರಾಮಚಂದ್ರ ಭಟ್ ಸಾರಡ್ಕ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಕುಮಾರಿ ಬಿ.ಎನ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

Advertisement

ಯುವಕ ಮಂಡಲದ ಗೌರವಾಧ್ಯಕ್ಷ ದೀಕ್ಷಿತ್ ಜೈನ್,ಸ್ಥಾಪಕಾಧ್ಯಕ್ಷ ಸುಬ್ಬಣ್ಣ ದಾಸ್ , ಅಧ್ಯಕ್ಷ ರವಿ ಎ.ಕೆ ,ಕಾರ್ಯದರ್ಶಿ ಧೀರಜ್ ರೈ ,ಯುವಕ ಮಂಡಲದ ಕ್ರೀಡಾ ಕಾರ್ಯದರ್ಶಿ ಪ್ರಜ್ವಲ್ ರೈ ,ಜತೆಕಾರ್ಯದರ್ಶಿ ಜಗದೀಶ್ ಚೆನ್ನಾವರ, ,ಪ್ರಮೋದ್ ಕುಮಾರ್, ,ಹರ್ಷಿತ್ ರೈ ,ಪುಟ್ಟಣ್ಣ ನಾಯ್ಕ ,ಧರ್ಮಪಾಲ ,ಚರಣ್ ರೈ ,ಹರೀಶ್ ರೈ ,ಶೆರೀಫ್ ಕುಂಡಡ್ಕ ,ಕೌಶಿಕ್,ಯಕ್ಷಿತಾ,ಧರಿತ್ರಿ ,ಸ್ವಾತಿ ಜಗದೀಶ್,ಧರಿತ್ರಿ ,ವಿನೋದ್ ,ಸಂದೀಪ್ ಬಿ.ಕೆ ಅತಿಥಿಗಳನ್ನು ಗೌರವಿಸಿದರು.

ಅಭ್ಯುದಯ ಯುವಕ ಮಂಡಲದ ಪದಾ„ಕಾರಿಗಳಾದ ಪ್ರವೀಣ್ ಕುಮಾರ್ ಸ್ವಾಗತಿಸಿ, ದಿನೇಶ್ ಎನ್ ಸುವರ್ಣ ವಂದಿಸಿದರು.ವಿಜೇತ್ ರೈ ಅಂಕತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

ಆಟಿದ ತೆನಸ್,ವನಸ್ ಮಧ್ಯಾಹ್ನದ ಭೋಜನದಲ್ಲಿ ಆಟಿತಿಂಗಳ ವಿಶೇಷ ಖಾದ್ಯಗಳಾದ ನೆಲ್ಲಿ ಉಪ್ಪಿನಕಾಯಿ,ಹುರುಳಿ ಚಟ್ನಿ ,ಬ್ರಾಹ್ಮಿ ಚಟ್ನಿ, ಕಣಿಲೆ ಪಲ್ಯ ,ಹಲಸಿನ ಹಣ್ಣಿನ ಗಟ್ಟಿ ,ದೀವಿ ಹಲಸು ಪಲ್ಯ ,ಹಲಸಿನ ಸೋಳೆ ಪದಾರ್ಥ , ಪತ್ರಡೆ ,ತಜಂಕ್,ಕಣಿಲೆ ಪಲ್ಯ,ಕೆಸುವಿನ ಸಾಂಬಾರ್ ಸೇರಿದಂತೆ ಹಲವು ಖಾದ್ಯಗಳಿದ್ದವು.

ಮನರಂಜಿಸಿದ ಕೆಸರುಗದ್ದೆ ಕ್ರೀಡಾಕೂಟ

ಕೆಸರುಗದ್ದೆ ಜನಪದ ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ ,ವಾಲಿಬಾಲ್ ಸ್ಪರ್ಧೆ ಮಹಿಳೆಯರಿಗೆ ತ್ರೋಬಾಲ್,ಹಗ್ಗಜಗ್ಗಾಟ,ಕೆಸರುಗದ್ದೆ ಓಟ ,ತುಳು ಜಾನಪದ ಸ್ಪರ್ಧೆ,ತುಳು ಪಾಡ್ದನ ಸ್ಪರ್ಧೆ ಮತ್ತು ಶಾಲಾ ಮಕ್ಕಳಿಗೆ ಎರಡು ವಿಭಾಗಗಳಲ್ಲಿ ತುಳು ರಸಪ್ರಶ್ನೆ ,ತುಳು ಭಾಷಣ ,ಜಾನಪದ ಸ್ಪರ್ಧೆ ,ನಿಧಿ ಶೋಧ ಮೊದಲಾದ ಸ್ಪರ್ಧೆಗಳು ನಡೆಯಿತು.ಎಲ್ಲರೂ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಪಟ್ಟರು.

Advertisement

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ
May 29, 2025
2:42 PM
by: ಸಾಯಿಶೇಖರ್ ಕರಿಕಳ
ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ
May 29, 2025
7:40 AM
by: The Rural Mirror ಸುದ್ದಿಜಾಲ
ಭಾರತ್ ಮುನ್ಸೂಚನಾ ವ್ಯವಸ್ಥೆ | ಭಾರತದಿಂದ ವಿಶ್ವದ ಅತ್ಯಂತ ನಿಖರವಾದ ಹವಾಮಾನ ಮಾದರಿಗೆ ಚಾಲನೆ | ಸಣ್ಣ ಪ್ರಮಾಣದ ಹವಾಮಾನ ಸ್ಥಿತಿಗತಿಗಳ ನಿಖರವಾದ ಮಾಹಿತಿ ಲಭ್ಯ|
May 29, 2025
7:37 AM
by: ದ ರೂರಲ್ ಮಿರರ್.ಕಾಂ
ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
May 29, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group