ಚೊಕ್ಕಾಡಿ: ಅಮರ ಸಂಘಟನಾ ಸಮಿತಿ ಅಮರ ಮೂಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ಅಮರ ಜ್ಞಾನ ಕಾರ್ಯಕ್ರಮ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಚೊಕ್ಕಾಡಿ ಪ್ರೌಢಶಾಲೆ ಪ್ರಭಾರ ಮುಖ್ಯಗುರು ಚಂದ್ರಶೇಖರ ಮೂಕಮಲೆ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷ
ಶಿವಪ್ರಸಾದ್ ದೊಡ್ಡಿಹಿತ್ಲು ಅಧ್ಯಕ್ಷರು ಅಮರ ಸಂಘಟನಾ ಸಮಿತಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಸುಲೋಚನ ಗೌಡ ದೊಡ್ಡಿಹಿತ್ಲು ಸಂಚಾಲಕರು ಉಪಸ್ಥಿತರಿದ್ದರು.
ನಂತರ ಸತೀಶ್ ಭಟ್ ಬಿಳಿನೆಲೆ ಇವರಿಂದ ನನ್ನ ಕನಸು ನನ್ನ ಭವಿಷ್ಯ ಪ್ರೌಢಶಿಕ್ಷಣದ ನಂತರ ಮುಂದಿನ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪೋಷಕರ ಆರೋಗ್ಯದ ಬಗ್ಗೆ ಡಾ| ಪ್ರಿಯಾಂಕ ನಾಟಿಕೇರಿ ಇವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಬ್ಯಾಂಕ್ ಸೌಲಭ್ಯಗಳ ಮಾಹಿತಿಯನ್ನು ಬ್ಯಾಂಕ್ ಬರೋಡ ಕುಕ್ಕುಜಡ್ಕ ಶಾಖೆಯ ಮ್ಯಾನೇಜರ್ ನಿಡಿದರು.
ಬಳಿಕ ಅಗ್ನಿ ಶಾಮಕ ಠಾಣೆ ಸುಳ್ಯ ಇವರಿಂದ ಅಗ್ನಿ ಶಮನದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಸ.ಹಿ.ಪ್ರಾ ಶಾಲೆ ಕುಕ್ಕುಜಡ್ಕ,ಸ.ಹಿ.ಪ್ರ.ಶಾಲೆ ಪೈಲಾರು, ಸ.ಹಿ.ಪ್ರ ಶಾಲೆ ಅಜ್ಜನಗದ್ದೆ, ಸ.ಹಿ.ಪ್ರ ಶಾಲೆ ದೊಡ್ಡತೋಟ, ಸ.ಹಿ.ಪ್ರಾ.ಶಾಲೆ ಶೇಣಿ ಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಭಾಗವಹಿಸಿದರು.
ಮಿಥುನ್ ಕೆರೆಗದ್ದೆ ಸದಸ್ಯರು ಸ್ವಾಗತ ನೆರವೇರಿಸಿದರು. ಪ್ರದೀಪ್ ಬೊಳ್ಳೂರು ಸ್ಥಾಪಕಾಧ್ಯಕ್ಷರು ಧನ್ಯವಾಧ ನೆರವೇರಿಸಿದರು, ಶಶಿಕಾಂತ್ ಮಿತ್ತೂರು ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …