ನಿಂತಿಕಲ್ಲು : ಅಲೆಕ್ಕಾಡಿ – ಎಡಮಂಗಲ ಜಿಲ್ಲಾ ಪಂಚಾಯತ್ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಮಗಾರಿ ಬಗ್ಗೆ ಸ್ಥಳಿಯ ಕೃಷಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿ ರಸ್ತೆ ಬದಿಯಲ್ಲಿ ರೋಲ್ ಸರಿಯಾಗಿ ಆಗಿಲ್ಲ ಹಾಗೂ ಗುಣಮಟ್ಟದ ಬಗ್ಗೆಯೂ ನಮಗೆ ಸಂದೇಹ ಇದೆ ಎಂದು ವಿಡಿಯೋ ಮಾಡಿದರು.
ಇದಕ್ಕೆ ಕೆಂಡಾಮಂಡಲರಾದ ಗುತ್ತಿಗೆದಾರರು ಹಾಗೂ ಅವರ ಜೊತೆ ಇದ್ದವರು ಗದರಿಸಿದ್ದೂ ಅಲ್ಲದೆ ನಾವು ಕಾಮಗಾರಿ ನಿಲ್ಲಿಸುತ್ತೇವೆ, ಗುಣಮಟ್ಟದ ಬಗ್ಗೆ ಮಾತನಾಡಲು ನಿಮ್ಮಲ್ಲೇನಿದೆ ದಾಖಲೆ ಎಂದು ಮರುಪ್ರಶ್ನಿಸಿದಾಗ, ನಮ್ಮ ತೆರಿಗೆ ಹಣ ಎಂದು ಮರುತ್ತರವನ್ನು ಸ್ಥಳೀಯರು ನೀಡಿದ್ದಾರೆ.
ಈ ಬಗ್ಗೆ “ಸುಳ್ಯನ್ಯೂಸ್.ಕಾಂ” ವತಿಯಿಂದ ಪಿ ಎಂ ಜಿ ಎಸ್ ವೈ ಇಂಜಿನಿಯರ್ ಅವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಹಲವು ಬಾರಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.
ಚೌಕೀದಾರ್ ಎಂಬ ಶಬ್ದ ಇತ್ತೀಚೆಗಷ್ಟೇ ಹೆಚ್ಚು ಪರಿಚಯವಾಗಿದೆ. ಈಗ ಸ್ಥಳೀಯರು ಕಾಮಗಾರಿ ಗುಣಮಟ್ಟದ ಬಗ್ಗೆ ಚೌಕೀದಾರ್ ಆಗಿದ್ದಾರೆ. ಗುತ್ತಿಗೆದಾರ ಕಾಮಗಾರಿ ಮಾಡುವುದಿಲ್ಲ ಎಂದು ಗದರಿಸಿದ್ದು ಈ ವಿಡಿಯೋದಲ್ಲಿ ಕಾಣುತ್ತದೆ. ಈಗ ಹೆಸರಿನ ಮುಂದೆ ಚೌಕೀದಾರ ಎಂದು ಹಾಕಿದವರ ನಡೆ ಏನು ಎಂಬುದನ್ನು ಸಾರ್ವಜನಿಕರು ಕೇಳುತ್ತಾರೆ.