ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದೊಳಗಿನ ಕಾಡಿನಲ್ಲಿ ಕಾಡಾನೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ನಂತರ ಚಿಕಿತ್ಸೆ ನಡೆಯಿತು. ದಿನವೂ ಜನ ನೋಡಿ ಬಂದರು. ಬೈನೆ ಹಾಕಿದರು. ಬದುಕಿಸುವ ಪ್ರಯತ್ನ ಮಾಡಿದರು. ಅರಣ್ಯ ಇಲಾಖೆ ಆಗಾಗ ನೋಡಿತು. ಆದರೆ ಮತ್ತೆ ಮತ್ತೆ ಕಾಡಾನೆಗಳ ಕಾದಾಟದಲ್ಲಿ ಗಾಯಗೊಂಡಿತು. ಕೊನೆಗೆ ಬುಧವಾರ ಕೊನೆಯುಸಿರೆಳೆಯಿತು. ಕಾಡಾನೆ ಬಾಳುಗೋಡಿನ ಕೃಷಿಕರಿಗೆ ನಿತ್ಯವೂ ಕಾಟ ಕೊಡುತ್ತಿದ್ದರೂ ಜನ ಹೇಳುವ ಮಾತು, ಛೇ… ಆನೆ ಸತ್ತಿತಲ್ಲ ಮಾರಾಯ್ರೆ ಎಂದು ಬೇಸರಿಸುತ್ತಾರೆ.
ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು ಕಾಡಿನತ್ತ ತೆರಳಿದಾಗ ಗಾಯಗೊಂಡ ಆನೆ ಪತ್ತೆಯಾಗಿತ್ತು. ನಂತರ ಅರಣ್ಯ ಇಲಾಖೆಯ ಸಿಬಂದಿಗಳ ಗಮನಕ್ಕೆ ಬಂದು ಪರಿಶೀಲನೆ ಮಾಡಿದಾಗ ಆನೆಯ ಮುಂಭಾಗದ ಕಾಲಿಗೆ ಏಟಾಗಿರುವುದು ಗಮನಕ್ಕೆ ಬಂದಿದೆ. ನೋವಿನಿಂದ ಬಳಲುತ್ತಿರುವ ಆನೆಯು ನೋವು ತಡೆಯಲಾರದೆ ಘೀಳಿಡುತ್ತಿತ್ತು. ಹತ್ತಿರಕ್ಕೆ ತೆರಳಿದರೆ ಮರವನ್ನು ಅಲ್ಲಾಡಿಸಿ ಗದರಿಸುತ್ತಿತ್ತು. ಸೊಂಡಿಲಿನಿಂದ ಸೊಪ್ಪು ಕಲ್ಲುಗಳನ್ನು ಎಸೆಯುತ್ತಿತ್ತು. ನಂತರ ಅರಿವಳಿಕೆ ನೀಡಿ ಚಿಕಿತ್ಸೆ ನೀಡಲಾಯಿತು.
ಆ ಬಳಿಕ ಕೊಂಚ ಸುಧಾರಣೆ ಕಂಡಿತು. ಆದರೆ ಮತ್ತೆ ಕಾಡಾನೆಗಳು ನಡುವೆ ಕಾದಾಟ ನಡೆಯಿತು. ಹೀಗಾಗಿ ಮತ್ತೆ ಆನೆ ಗಾಯಗೊಂಡು ಊರಿನ ಹತ್ತಿರ ಬರತೊಡಗಿತು. ಜನರ ಪ್ರೀತಿ ಹೆಚ್ಚಾಯಿತು. ಬೈನೆ ಸೇರಿದಂತೆ ಆಹಾರ ಕೊಡಲು ಆರಂಭಿಸಿದರು. ಬಳಿಕ ಹಾಗೆಯೇ ಆರೋಗ್ಯಗೊಂಡು ಕಾಡಿನ ಕಡೆಗೆ ಹೆಜ್ಜೆ ಹಾಕಿತು. ಮತ್ತೆ ಕಾಡಾನಗೆಳ ನಡುವೆ ಕಾದಾಟವಾಯಿತು. ಈಚೆಗೆ ಕೆಲವು ದಿನಗಳಿಂದ ಕಾಡಿನ ಕಡೆಗೆ ಯಾರೂ ಹೋಗಿರಲಿಲ್ಲ. ಬುಧವಾರ ಆನೆ ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂತು. ಊರ ಮಂದಿ ವಿಷಾದ ವ್ಯಕ್ತಪಡಿಸುತ್ತಾರೆ.
30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…