ಸುಬ್ರಹ್ಮಣ್ಯ: ನಾಡಿನ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು 3 ವರ್ಷ ಅವಧಿ ಪೂರೈಸಿ ಅವಧಿ ಕೊನೆಗೊಂಡಿದೆ. ಕಳೆದ 3 ವರ್ಷಗಳಿಂದ ಜನಪರವಾದ ಹಾಗೂ ಸಾರ್ವಜನಿಕ ಕೆಲಸ ಕಾರ್ಯಗಳ ಮೂಲಕ ದೇವಸ್ಥಾನದ ಆಡಳಿತವೂ ಜನರೆಡೆಗೆ ತೆರಳಬಹುದು ಎಂದು ತೋರಿಸಿದೆ. ಹೀಗಾಗಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ, ಆಡಳಿತ ಮಂಡಳಿಗೆ ಅಭಿನಂದನಾ ಸಭೆಯೂ ನಡೆದಿದೆ.
2016 ಅ.15 ರಂದು ನಿತ್ಯಾನಂದ ಮುಂಡೋಡಿ ನೇತೃತ್ವದ ವ್ಯವಸ್ಥಾಪನಾ ಸಮಿತಿ ದೇವಸ್ಥಾನದ ಅಧಿಕಾರ ಸ್ವೀಕರಿಸಿತ್ತು. ಜನಪರವಾದ ಕೆಲಸ ಕಾರ್ಯಗಳು ಹಾಗೂ ಧಾರ್ಮಿಕ ವಿಚಾರಗಳಿಗೆ ಆದ್ಯತೆ ನೀಡಿತ್ತು. ಕ್ಷೇತ್ರದ ಅಭಿವೃದ್ಧಿ ಹಾಗೂ ಕ್ಷೇತ್ರದಲ್ಲಿ ನಡೆಯುವ ಕೆಲವು ಕ್ಷೇತ್ರ ವಿರೋಧಿ ಕಾರ್ಯಗಳ ನಿಯಂತ್ರಣಕ್ಕೂ ಪ್ರಯತ್ನ ಮಾಡಿತ್ತು ಎಂದು ಸಾರ್ವಜನಿಕರು ಹೇಳುತ್ತಾರೆ. ಹೀಗಾಗಿಯೇ ಅಭಿನಂದನಾ ಕಾರ್ಯಕ್ರಮವೂ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ರವೀಂದ್ರ ಎಂ.ಎಚ್ ವರ್ಗಾವಣೆಗೊಂಡ ಬಳಿಕ ಪುತ್ತೂರು ಸಹಾಯಕ ಕಮೀಶನರ್ ಅವರು ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕವಾಗಿದ್ದು ಇದೀಗ ಮಂಗಳೂರು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್ ಅವರು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಆಡಳಿತ ಮಂಡಳಿ ವತಿಯಿಂದ ಅ.14 ರಂದು ಕ್ಷೇತ್ರದಲ್ಲಿ ನಡೆಸಲಾಗಿದ್ದ ಹಲವು ಅಭಿವೃದ್ದಿ ಕಾರ್ಯಗಳ ಲೋಕಾರ್ಪಣೆಗೆ ಸಿದ್ಧತೆಗಳನ್ನು ನಡೆಸಿತ್ತು.ಸೋಮವಾರ ಬೆಳಗ್ಗೆ ಉದ್ಘಾಟನೆಗಳು ಆಗಬೇಕಿತ್ತು. ಕೊನೆ ಕ್ಷಣದಲ್ಲಿ ಉದ್ಘಾಟನೆ ಕಾರ್ಯಕ್ರಮಗಳು ರದ್ದುಗೊಂಡಿವೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಹಾಗೂ…
ಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳಲ್ಲಿ ಉನ್ನತಾಧಿಕಾರಿಗಳು ಸತತ ನಿಗಾ ಇಟ್ಟು, ಜನರ ಅಮೂಲ್ಯ…
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಂಗಲ್ಯ ದೋಷ ಅಥವಾ ಮಾಂಗಲಿಕ ದೋಷ ಎಂಬುದು ಒಂದು…
ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…
ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…
ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…