ಸುಳ್ಯ: ಸುಳ್ಯ ತಾಲೂಕು 24 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲಿಮಲೆ ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಆತಿಥ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಊರ ಪ್ರಮುಖರ ಉಪಸ್ಥಿತಿಯಲ್ಲಿ ಎಲಿಮಲೆ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆದು ಜನವರಿ 19 ರಂದು ಸಾಹಿತ್ಯ ಸಮ್ಮೇಳನ ನಡೆಸುವುದೆಂದು ನಿರ್ಧರಿಸಲಾಯಿತು. ಸಾಮಾಜಿಕ ಧುರೀಣ, ಜ್ಞಾನದೀಪ ವಿದ್ಯಾ ಸಂಸ್ಥೆಗಳ ಸಂಚಾಲಕ ಎ.ವಿ.ತೀರ್ಥರಾಮ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯಕ್ಕೆ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಗೌರವ ಕಾರ್ಯದರ್ಶಿ ಹಾಗೂ ಎಲಿಮಲೆ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲು, ಹಿರಿಯ ಸಾಹಿತಿ ಜಿ.ಎಸ್.ಉಬರಡ್ಕ, ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆ, ಶಿಕ್ಷಕ ಗೋಪಿನಾಥ ಮೆತ್ತಡ್ಕ, ಪ್ರೌಢ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ವಿಶ್ವನಾಥ ನಂದಗೋಕುಲ, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ರಮಾನಂದ ಹೆಚ್.ಡಿ. , ಲಿಂಗಪ್ಪ ಮಾಸ್ತರ್ ಹರ್ಲಡ್ಕ, ಗದಾಧರ ಬಾಳುಗೋಡು, ಪುರುಷೋತ್ತಮ ಕಜೆ, ಓಂ ಪ್ರಕಾಶ್ ಕಜೆ, ಹರಿಪ್ರಸಾದ್ ಕಜೆ, ಜಯಂತ ತಳೂರು, ದಯಾನಂದ ಮೆತ್ತಡ್ಕ, ಹರೀಶ್ ಚಳ್ಳ, ದಿನೇಶ್ ಕೇರ, ಕೇಶವ ಕಜೆ, ರಂಜಿತ್ ಚಿತ್ತಡ್ಕ, ದೀಕ್ಷಿತ್ ಚಿತ್ತಡ್ಕ, ಜೀವನ್ ಕುಮಾರ್ ಟಿ, ಶೃಜೇಶ್, ಹರಿಪ್ರಸಾದ್ ಬಿ.ವಿ., ಕಿಶನ್ ಎಂ. ಆಸ್ಮಾ, ತಾರನಾಥ ಅಡಿಗೈ, ಭೋಜಪ್ಪ ಹರ್ಲಡ್ಕ, ಲೋಹಿತ್ ಮಾವಿನಗೊಡ್ಲು, ಪಿ.ಭರತ್, ಶರತ್ ಮರ್ಗಿಲಡ್ಕ, ರಂಜಿತ್ ಎ.ವೈ. ಮೊದಲಾದವರು ಸಭೆಯಲ್ಲಿದ್ದರು.
ಸಮ್ಮೇಳನದ ರೂಪು ರೇಷೆಯ ಕುರಿತು ಡಾ.ಹರಪ್ರಸಾದ್ ತುದಿಯಡ್ಕ ಮಾಹಿತಿ ನೀಡಿದರು. ಸಮ್ಮೇಳನದ ಆತಿಥ್ಯ ವಹಿಸಲು ನಮಗೆ ಅವಕಾಶ ಸಿಕ್ಕಿರುವುದು ಸಂತೋಷದ ಸಂಗತಿ. ಎಲ್ಲರ ಸಹಕಾರದೊಂದಿಗೆ ಈ ಸಾಹಿತ್ಯ ಹಬ್ಬವನ್ನು ಯಶಸ್ವಿಗೊಳಿಸೋಣ ಎಂದು ಎ.ವಿ.ತೀರ್ಥರಾಮ ಹೇಳಿದರು. ಎಲಿಮಲೆಯ ಸಂಘಟನಾ ಶಕ್ತಿಯ ಮೂಲಕ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಮಾಡೋಣ ಎಂದು ಶೈಲೇಶ್ ಅಂಬೆಕಲ್ಲು ಹೇಳಿದರು.
ಚಂದ್ರಶೇಖರ ಪೇರಾಲು ಸ್ವಾಗತಿಸಿ ಪ್ರಸ್ತಾವನೆಗೈದರು. ಗೋಪಿನಾಥ ಮೆತ್ತಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…