ಬೆಳ್ಳಾರೆ: ಜನಾನುರಾಗಿ ವೈದ್ಯರಾಗಿದ್ದ ಬಾಳಿಲದ ಡಾ|ಪಿ ಜಿ ಎಸ್ ಪ್ರಕಾಶ್(59) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಬಾಳಿಲದಲ್ಲಿ ಕ್ಲಿನಿಕ್ ಹೊಂದಿದ್ದ ಡಾ|ಪಿ ಜಿ ಎಸ್ ಪ್ರಕಾಶ್ ಗ್ರಾಮೀಣ ಭಾಗದ ಜನಾನುರಾಗಿ ವೈದ್ಯರಾಗಿದ್ದರು. ಕಡಿಮೆ ದರದಲ್ಲಿ ಔಷಧಿ ಹಾಗೂ ನಿಖರ ಚಿಕಿತ್ಸೆ ಮೂಲಕ ಹೆಸರುವಾಸಿಯಾಗಿ ಬೆಳ್ಳಾರೆ ಸಹಿತ ವಿವಿದೆಡೆಯಿಂದ ರೋಗಿಗಳು ಆಗಮಿಸುತ್ತಿದ್ದರು. ಇದೀಗ ಡಾ|ಪಿ ಜಿ ಎಸ್ ಪ್ರಕಾಶ್ ನಿಧನರಾಗಿರುವುದು ಗ್ರಾಮೀಣ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ.
ಬುಧವಾರ ರಾತ್ರಿಯೂ ಕ್ಲಿನಿಕ್ ಗೆ ಆಗಮಿಸಿದ ರೋಗಿಗಳಿಗೆ ಔಷಧಿ ನೀಡಿದ್ದರು. ಬಳಿಕ ಮನೆಯ ಗೇಟ್ ಹಾಗೂ ಕ್ಲಿನಿಕ್ ಬಾಗಿಲು ಹಾಕಲು ತೆರಳಿದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು. ವಿಷಯ ತಿಳಿದ ತಕ್ಷಣವೇ ಮನೆಯವರು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗೆ ಮೃತಪಟ್ಟಿದ್ದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.