ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ ಜಯನಗರದ ಕೈೂಂಗೋಡಿ ರಸ್ತೆ ಬದಿಯಲ್ಲಿರುವ ನೀರಿನ ಟ್ಯಾಂಕ್ ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಯವಕರು ತೊಡಗಿಸಿಕೊಂಡರು.
ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕುಡಿಯುವ ನೀರಿನ ಟ್ಯಾಂಕ್ ಶುಚಿಗೊಳಿಸಿರಲಿಲ್ಲ. ಹೀಗಾಗಿ ಸಾರ್ವಜನಿಕ ಕುಡಿಯುವ ನೀರಿನ ಮೂಲ, ಕೆರೆ, ನದಿ, ಬಾವಿ ನೀರಿನ ಟ್ಯಾಂಕ್ ಶುಚಿತ್ವವು ಪ್ರಾಮುಖ್ಯ ಎಂಬುದನ್ನು ಅರಿತು ಈ ಬಗ್ಗೆ ಆಡಳಿತಕ್ಕೂ ಜಾಗೃತಿ ಮೂಡಿಸಲು ಸ್ಥಳೀಯ ಯುವಕರು ಮುಂದಾದರು.
ಇಲ್ಲಿ ವಿದ್ಯುತ್ ಕೈಕೊಟ್ಟರೆ ನೀರೂ ಇಲ್ಲವಾಗುತ್ತದೆ. ಎರಡು ವಾರ್ಡಿನ ಸುಮಾರು 40-50 ಕುಟುಂಬ ಈ ಟ್ಯಾಂಕ್ ನೀರನ್ನು ಅವಲಂಬಿಸಿದ್ದಾರೆ.
ಸುಳ್ಯ ಜಯನಗರದ ಜನಸಾಮಾನ್ಯ ಶ್ರಮಿಕ ಯುವಕರಾದ ದೀಕ್ಷಿತ್ ಕುಮಾರ್ ಜಯನಗರ, ಸುಂದರ ಕುದ್ಪಾಜೆ , ಅವಿಲ್ ಜಯನಗರ, ಉಮೇಶ್ ಕುದ್ಪಾಜೆ, ಗೋಪಾಲ ನಾರಾಜೆ,ವಿವೇಕ್ ಕುದ್ಪಾಜೆ, ಬಾಬು ಕೆಪಿ. , ಸಚಿನ್ ಕೊಯಿಂಗೋಡಿ, ದೇವಪ್ಪ ಜಯನಗರ ಒಂದಾಗಿ, ಟ್ಯಾಂಕ್ ಸ್ವಚ್ಚತಾ ಕಾರ್ಯವನ್ನು ನಡೆಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel