ಸುಳ್ಯ: ಜಯನಗರ ವಿಕ್ರಮ ಯುವಕ ಮಂಡಲ ಹಾಗೂ ನಗರ ಪಂಚಾಯತ್ ಸುಳ್ಯ ಇದರ ಆಶ್ರಯದಲ್ಲಿ ಜಯನಗರ ಹಿಂದು ರುದ್ರ ಭೂಮಿಯ ಪರಿಸರದಲ್ಲಿ ಶ್ರಮ ದಾನ ಕಾರ್ಯಕ್ರಮ ಭಾನುವಾರ ನಡೆಯಿತು.
ಪರಿಸರದಲ್ಲಿ ಕಾಡುಗಿಡಗಳು ಬೃಹತ್ ಪ್ರಮಾಣದಲ್ಲಿ ಬೆಳೆದು ,ಗಿಡ ಬಳ್ಳಿಗಳಿಂದ ರುದ್ರ ಭೂಮಿಗೆ ಸಾಗುವ ದಾರಿಯಲ್ಲಿ ಆವರಿಸಿಕೊಂಡಿದೆ.ಸುಳ್ಯ ನ.ಪಂ ವತಿಯಿಂದ ದೀಪಗಳು ,ದಾರಿ ದೀಪಗಳು ಅಳವಡಿಸಲಾಗಿದ್ದರೂ ಇದೀಗ ಅದು ಯಾವುದು ಈಗ ಕೆಲಸಕ್ಕೆ ಬಾರದೆ ಪರಿಸರ ಕತ್ತಲುಮಯವಾಗಿದೆ.ಸ್ಥಳೀಯರ ಪ್ರಕಾರ ಕಳೆದ ಕೆಲವು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಒಂದು ಮೃತ ದೇಹವನ್ನು ಶವಸಂಸ್ಕಾರಕ್ಕೆ ತಂದಿದ್ದು ಸ್ಥಳದಲ್ಲಿ ದೀಪದ ಬೆಳಕಿನ ಸೌಲಭ್ಯಗಳು ಇಲ್ಲದ ಕಾರಣದಿಂದಾಗಿ ಮೃತ ಶರೀರವನ್ನು ಬೇರೆ ಕಡೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಸ್ಥಳೀಯ ಸಂಘಸಂಸ್ಥೆಗಳು ಶ್ರಮದಾನದ ಮೂಲಕ ಪರಿಹಾರಕ್ಕೆ ಮುಂದಾದರು. ಸಂಬಂಧಿಸಿದ ಇಲಾಖೆಗಳು ಸ್ಪಂದಿಸಿ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದೆ ಬರಬೇಕಾಗಿದೆ. ಕಳೆದ ಕೆಲವು ವರ್ಷಗಳಿಂದ ವಿಕ್ರಮ ಯುವಕ ಮಂಡಲ .ರಿ.ಜಯನಗರ ಸಂಘದಿಂದ ಈ ಪರಿಸರದಲ್ಲಿ ಶ್ರಮದಾನ ನಡೆಸಿ ಸಹಕಾರ ನೀಡಲಾಗುತ್ತಿದೆ.
ಶ್ರಮದಾನ ಮಾತ್ರ ಸಾಲದು ,ಮೂಲಭೂತ ಸೌಲಭ್ಯಗಳಾದ ದಾರಿ ದೀಪ,ಹೈಮಾಕ್ಸ್ ದೀಪಗಳ ದುರಸ್ತಿ ಕಾರ್ಯ ಕೂಡಲೆ ನಡೆಯಬೇಕಾಗಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.
ಶ್ರಮದಾನದ ಸಂದರ್ಭ ನ.ಪಂ ಸ್ಥಳೀಯ ಸದಸ್ಯೆ ಶಿಲ್ಪಾ ಸುದೇವ,ವಿಕ್ರಮ ಯುವಕ ಮಂಡಲ ಅದ್ಯಕ್ಷ ಪ್ರಸನ್ನ ಎಂ ಆರ್,ಮಾಜಿ ಅದ್ಯಕ್ಷರುಗಳಾದ ಪ್ರವೀಣ್ ಕುಮಾರ್,ಸುರೇಂದ್ರ ಕಾಮತ್,ಸುಧೇವ ಜಯನಗರ,ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…