ಸಂಪಾಜೆ : ಒಂದು ಕಡೆ ಜಲಪ್ರಳಯದಿಂದ ಮನೆ , ಜೀವ ನಾಶ. ಇನ್ನೊಂದು ಕಡೆ ಸಂಪೂರ್ಣ ಕೃಷಿ ನಾಶ. ಈ ಸಂದಿಗ್ಧ ಸ್ಥಿತಿಗೆ ವರ್ಷ ಹತ್ತಿರವಾಯಿತು. ಇಂದಿಗೂ ಇಲ್ಲಿ ಕೃಷಿ ವ್ಯವಸ್ಥೆ ಸುಧಾರಣೆ ಆಗಿಲ್ಲ. 32 ಕ್ವಿಂಟಾಲ್ ಅಡಿಕೆ ಬರುತ್ತಿದ್ದ ವ್ಯಕ್ತಿಗೆ ಈಗ 2 ಕ್ವಿಂಟಾಲ್ ಅಡಿಕೆ..!. ಹೀಗಾಗಿ ಇಲ್ಲಿ ಬದುಕು ಮಾತ್ರವಲ್ಲ ಕೃಷಿ ಬದುಕೂ ಈಗ ಕನಸಾಗಿದೆ ಎನ್ನುತ್ತಾರೆ ಜನ. ಈ ಬಾರಿಯ ಮಳೆ ಹೇಗೋ ಎಂಬ ಭಯ ಈಗ ಇವರನ್ನು ಕಾಡುತ್ತಿದೆ.
ಕೃಷಿ ಆದಾಯವನ್ನೇ ನಂಬಿ ಬದುಕುತ್ತಿದ್ದ ಸಣ್ಣ ಸಣ್ಣ ಕುಟುಂಬಗಳು ಅದು. ಅದೇ ಆದಾಯವೇ ಅವರ ಬದುಕಿಗೆ ಆಧಾರವಾಗಿತ್ತು. ಕೃಷಿಯನ್ನೇ ನಂಬಿ ಬದುಕು ಕಟ್ಟಿ ಕೊಂಡವರು ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಭಾಗದ ಜನರು. ಕೃಷಿ ಅಂದರೆ ಸ್ವಾವಲಂಬನೆಯ ಬದುಕು ಅವರದು. ಕಳೆದ ಬಾರಿ ಉಂಟಾದ ಜಲಪ್ರಳಯ ಮತ್ತು ಭೂಕುಸಿತ ಇವರ ಕೃಷಿ ಬದುಕನ್ನು ಆಪೋಷನ ತೆಗೆದುಕೊಂಡಿದೆ, ಅದರ ಜೊತೆಗೆ ಸ್ವಾವಲಂಬನೆಯ ಬದುಕನ್ನೂ ಕುಗ್ಗಿಸಿದೆ. ಇದನ್ನು ಎರಡನೇ ಮೊಣ್ಣಂಗೇರಿಯ ಜಯರಾಮ ಹೀಗೆ ಹೇಳುತ್ತಾರೆ…
ಬೆಟ್ಟಗಳು ಸಂಪೂರ್ಣ ಕುಸಿದು ಬಂದ ಕಾರಣ ಹೆಕ್ಟೇರ್ ಗಟ್ಟಲೆ ಅಡಕೆ, ಕಾಫಿ ತೋಟಗಳು ನಾಶವಾಗಿದೆ. ತಿಂಗಳುಗಟ್ಟಲೆ ಕೆಸರು ನೀರು, ಮಣ್ಣು ತುಂಬಿ ತೋಟಗಳು ನಾಮಾಶೇಷವಾಗಿದೆ. ವಿಪರೀತ ಮಳೆಯೋ, ಪ್ರಕೃತಿಯ ವೈಪರೀತ್ಯವೋ ಎಂಬಂತೆ ಇದ್ದ ಅಡಿಕೆ ಮರಗಳಲ್ಲಿ ಅಡಿಕೆ ಇಲ್ಲ. ಹಿಂಗಾರ ಅರಳಿದರೂ ಅಡಿಕೆ ಉಳಿಯಲಿಲ್ಲ. ಅಡಿಕೆ ಮರಗಳು ಸಾಯಲು ಸಿದ್ಧವಾಗಿದೆ. ಅನ್ನದ ಬಟ್ಟಲು ತುಂಬುತ್ತಿದ್ದ ಭತ್ತ ಬೇಸಾಯವೂ ಇಲ್ಲದಂತಾಗಿದೆ. ಇಡೀ ವರ್ಷ ಊಟ ಮಾಡಲು ಸಾಕಾಗುತ್ತಿದ್ದ ಭತ್ತ ಕೃಷಿ ಮಳೆಗೆ ಕೊಚ್ಚಿಹೋದ ಕಾರಣ ಅಕ್ಕಿಯಲ್ಲಿ ಸ್ವಾವಲಂಬನೆ ಪಡೆದಿದ್ದ ಕುಟುಂಬಗಳು ಇಂದು ಪೇಟೆಯಿಂದ ಅಕ್ಕಿ ತರುವ ಸ್ಥಿತಿ ಉಂಟಾಗಿದೆ. ಇನ್ನು 32 ಕ್ವಿಂಟಾಲ್ ಅಡಿಕೆ ದೊರೆಯುತ್ತಿದ್ದ ಎರಡನೇ ಮೊಣ್ಣಂಗೇರಿಯ ಜಯರಾಮ ಅವರಿಗೆ ಈ ವರ್ಷ ಸಿಕ್ಕಿದ್ದು ಕೇವಲ 2 ಕ್ವಿಂಟಾಲ್ ಅಡಕೆ ಮಾತ್ರ. ಕುಸಿದ ಗುಡ್ಡದೊಂದಿಗೆ ಕೊಚ್ಚಿ ಹೋದ ಇವರ ತೋಟ ಇದ್ದಲ್ಲಿ ಈಗ ಕಾಣುವುದು ಪಾತಾಳದಂತೆ ಕಾಣುವ ಪ್ರಪಾತಗಳು ಮಾತ್ರ. ಮಳೆಗಾಲದಲ್ಲಿ ಜಲಸಾಗರವೇ ಹರಿದರೂ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ಜಲಕ್ಷಾಮ ಎದುರಾಗಿತ್ತು ಎಂಬುದು ಇನ್ನೊಂದು ವಿಚಿತ್ರ.
ಹಿಂದೆಲ್ಲಾ ತೋಟದ ಪಕ್ಕವೇ ಹರಿಯುತ್ತಿದ್ದ ನೀರು ಈಗ ಕಾಣದಾಗಿದೆ. ಹಿಂದೆ ತೋಟ ಕೆಳಭಾಗದಲ್ಲಿತ್ತು ನೀರು ಮೇಲೆ ಹರಿಯುತ್ತಿತ್ತು, ಇಂದು ನೀರು ಕೆಳಭಾಗದಲ್ಲಿ ಹರಿದರೆ ತೋಟ ಮೇಲ್ಭಾಗಕ್ಕೆ ಬಂದಿದೆ. ಅಷ್ಟು ಪ್ರಪಾತ ಸೃಷ್ಠಿಯಾಗಿದೆ. ಹೀಗಾಗಿ ಆಸುಪಾಸು ಯಥೇಚ್ಛವಾಗಿದ್ದ ನೀರು ಈಗ ಕಾಣದಾಗಿದೆ. ಮನೆಗೆ ಸ್ವಾವಲಂಬನೆಯ ವಿದ್ಯುತ್ ಇದ್ದ ಜಯರಾಮ ಅವರಿಗೆ ಈಗ ಒಂದು ವರ್ಷದಿಂದ ವಿದ್ಯುತ್ ಇಲ್ಲವಾಗಿದೆ. ಈ ಎಲ್ಲಗಳ ನಡುವೆಯೂ ಅವರು ಬದುಕು ಸಾಗಿಸುತ್ತಿದ್ದಾರೆ. ಇದ್ದುದರಲ್ಲೇ ಖುಷಿ ಪಡುತ್ತಾರೆ. ಕೃಷಿ ಅಭಿವೃದ್ಧಿಗೆ ಇನ್ನೂ ಹೊರಟಿಲ್ಲ. ತರಕಾರಿಯಂತಹ ಕೃಷಿ ಮಾಡಿದರೆ ಬಳ್ಳಿಗಳು ಯಥೇಚ್ಛ ಬರುತ್ತದೆ ಕಾಯಿಕಟ್ಟುವುದು ದೂರವಾಗುತ್ತದೆ. ಬೆಂಡೆಯಂತಹ ತರಕಾರಿ ಆಗುತ್ತದೆ.
ಜಲಪ್ರಳಯವು ಜೋಡುಪಾಲ, ಮೊಣ್ಣಂಗೇರಿ ಭಾಗದ ಜನರ ಬದುಕು, ಮನೆ ಮಾತ್ರವಲ್ಲ ಕೃಷಿ ಭೂಮಿಯನ್ನು ನಾಶವಾಗುವಂತೆ ಮಾಡಿದೆ. ಮತ್ತೆ ಕೃಷಿ ಮಾಡಲು ಈ ಮಳೆಗಾಲ ಕಳೆಯಲು ಕಾಯುತ್ತಿದ್ದಾರೆ. ತರಕಾರಿಯಂತಹ ಕೃಷಿ ಮಾಡಿ ಸ್ವಾವಲಂಬನೆಯ ಹಾದಿಯಲ್ಲಿದ್ದಾರೆ. ಈ ಬಾರಿಯ ಮಳೆಗಾಲ ಹೇಗೆ ಎಂಬ ಭಯ ಇಲ್ಲಿಯವರನ್ನು ಕಾಡುತ್ತಿದೆ. ಮೊನ್ನೆ ಸುರಿದ ಮಳೆಗೆ ಭಯಗೊಂಡಿದ್ದಾರೆ, ಇದನ್ನು ಮೊಣ್ಣಂಗೇರಿಯ ಜಯರಾಮ ಹೀಗೆ ಹೇಳುತ್ತಾರೆ,
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…