ಸಂಪಾಜೆ: ಜಲಪ್ರಳಯದ ನಂತರ ಅನೇಕರು ಹೇಳಿಬಿಟ್ಟರು, ಇನ್ನು ವರ್ಷಗಳವರೆಗೆ ಮಂಗಳೂರಿನಿಂದ ಜೋಡುಪಾಲ ಮಾರ್ಗವಾಗಿ ಕೊಡಗು ಸಂಪರ್ಕ ಕಷ್ಟ ಅಂತ. ಆದರೆ ಒಂದೆರಡು ತಿಂಗಳಲ್ಲಿ ನಮ್ಮ ಇಂಜಿನಿಯರ್ ಗಳು ಹೇಳಿದರು….” ಎರಡು ದಿನದಲ್ಲಿ ಕೊಡಗು ಸಂಪರ್ಕ ಸಾಧ್ಯ “. ಇದು ನಮ್ಮ ದೇಶದ, ನಮ್ಮ ಜಿಲ್ಲೆಯ ಹೆಮ್ಮೆ.
ದೂರದ ಎಲ್ಲೋ ಪ್ರಾಕೃತಿಕ ವಿಕೋಪ ನಡೆದ ಸಂದರ್ಭ ಕೆಲವೇ ದಿನದಲ್ಲಿ ರಸ್ತೆ ಸಂಪರ್ಕ ಮಾಡಿದ ಸರಕಾರ, ಇಂಜಿನಿಯರ್ ಗಳು ಅಂತ ಆಗಾಗ ಹೇಳುತ್ತಾರೆ. ಇಲ್ಲೂ ಅಂತಹ ಇಂಜಿನಿಯರ್ ಗಳು ಇದ್ದಾರೆ ಎಂಬುದನ್ನು ಅಂದು ಸಾಬೀತು ಮಾಡಿದ್ದರು. ಅಂದಿನ ಜಲಪ್ರಳಯ ನೋಡಿದ ಎಲ್ಲರೂ ಹೇಳಿದ್ದು ಒಂದೇ ಮಾತು ” ಕೊಡಗು ಸಂಪರ್ಕ ಇನ್ನು ಕಷ್ಟ” . ಇದನ್ನು ಸವಾಲಾಗಿ ಸ್ವೀಕರಿಸಿ ನಮ್ಮ ಇಲಾಖೆಯ ಇಂಜಿನಿಯರ್ ಗಳ ತಂಡ ಸತತ ಪ್ರಯತ್ನದ ಮೂಲಕ ಗುಣಮಟ್ಟದ ರಸ್ತೆ ಮಾಡಿದ್ದರು. ಈ ಬಾರಿಯ ಮಳೆಗಾಲಕ್ಕೂ ಅದೇ ಮಾದರಿಯ ಮುಂಜಾಗ್ರತೆ ಕೈಗೊಳ್ಳುವ ಸಾಮರ್ಥ್ಯವೂ ಅವರಲ್ಲಿದೆ. ಅದಕ್ಕೆ ಬೇಕಾದ್ದು ಜನನಾಯಕರ ಇಚ್ಛಾಶಕ್ತಿ ಅಷ್ಟೇ.
ಸುಳ್ಯ- ಕೊಡಗು ರಸ್ತೆಯ ಬಗ್ಗೆ ಮಾತ್ರಾ ಹೇಳಿದರೆ ತಪ್ಪಾದೀತು. ಮೊಣ್ಣಂಗೇರಿಯ ತುದಿಯವರೆಗೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿನ ನಿವಾಸಿ ಜಯರಾಮ್ ಹೇಳುವುದು,” ಸರ್ ನಮಗೆ ಜಲಪ್ರಳಯದಿಂದ ಲಾಭ ಏನಾಯಿತು ಅಂದರೆ ನಮ್ಮ ಮನೆಯ ಪಕ್ಕದವರೆಗೆ ಕಾಂಕ್ರೀಟ್ ರಸ್ತೆ…”. ಲಕ್ಷಾಂತರ ರೂಪಾಯಿ ನಷ್ಟವಾಯಿತು, ಕೃಷಿ ಭೂಮಿ ಹಾನಿಯಾಯಿತು. ಆದರೆ ಸಂಪರ್ಕ ರಸ್ತೆಯೇ ನಾಶವಾಗಿತ್ತು, ಅದನ್ನು ತಕ್ಷಣ ಮಾಡಿಸಿ ಈಗ ಪೇಟೆಗೆ ಹೋಗುವಂತಾಗಿದೆ ಎಂದು ಸಾಮಾನ್ಯ ವ್ಯಕ್ತಿಯೂ ಹೇಳುತ್ತಾನಾದರೆ ನಮ್ಮ ಇಂಜಿನಿಯರ್ ಗಳ ಶಕ್ತಿ, ಸಾಮರ್ಥದ ಬಗ್ಗೆ ಬಹುದೊಡ್ಡ ಸಲಾಂ ಹೇಳಲೇಬೇಕು. ಮೊಣ್ಣಂಗೇರಿಯ ಅಭಿವೃದ್ಧಿಗೆ ಅಲ್ಲಿನ ಪಂಚಾಯತ್ ಕೂಡಾ ಅನುದಾನದ ವ್ಯವಸ್ಥೆ ಮಾಡಿತು, ವಿವಿಧ ಸಹಕಾರಗಳು ದೊರೆತವು. ಹೀಗಾಗಿ ಇದೆಲ್ಲಾ ಸಾಧ್ಯವಾಯಿತು.
ವರ್ಷದೊಳಗೆ ಅಲ್ಲ, ತಿಂಗಳೊಳಗೆ ಸಂಪರ್ಕ ವ್ಯವಸ್ಥೆ ಮಾಡಿಸಿದ ಇಂಜಿನಿಯರ್ ಗಳನ್ನು, ಅಧಿಕಾರಿಗಳನ್ನು ಮೊಣ್ಣಂಗೇರಿ ಜನ ನೆನಪಿಸಿಕೊಂಡರೆ ಸುಳ್ಯ – ಮಡಿಕೇರಿ ರಸ್ತೆ ದುರಸ್ತಿ ಮಾಡಿಸಿ ತಿಂಗಳೊಳಗೆ ಸಂಪರ್ಕ ಮಾಡಿದ್ದನ್ನು ಸಾರ್ವಜನಿಕರು ನೆನಪಿಸಿಕೊಳ್ಳುತ್ತಾರೆ.
ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಯಾದರೆ ಅಡಿಕೆಯ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗಬಹುದು. ಅಲ್ಲದೆ, ಸಾಂಪ್ರದಾಯಿಕ…
ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಖರೀದಿಯ ಕಾಲಮಿತಿ ಹೆಚ್ಚಿಸುವಂತೆ ಕೇಂದ್ರ ಕೃಷಿ ಸಚಿವರಲ್ಲಿ…
ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ, ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ಕಡ್ಡಾಯವಾಗಿ…
ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದರೆ, ಆದೇಶಗಳಿಂದ ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು…
ರಾಮನು ಸೀತೆಯನ್ನು ಪರಿತ್ಯಜಿಸಿದ್ದು ಸರಿಯೆ? ಅರಣ್ಯದಲ್ಲಿ ಸೀತೆ ಏನಾದಳು? ಅವಳ ಮನಸ್ಸಿಗೆ ಎಂತಹ…
ಬಾಳೆಯು ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಭಾರತ ದೇಶವು…