ಸುಳ್ಯ: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಹೃದಯವಿಲ್ಲದ ಹತ್ಯಾಕಾಂಡಕ್ಕೆ ಸಾಕ್ಷಿಯಾಯಿತು. ಆಂಗ್ಲರ ಕಠಿಣ ಮತ್ತು ಕ್ರೂರವಾದ ಧೋರಣೆಗಳು ಭಾರತೀಯ ದೇಶ ಭಕ್ತರಲ್ಲಿ ಸ್ವಾತಂತ್ರದ ಕೆಚ್ಚನ್ನು , ಶ್ರದ್ಧೆಯನ್ನು ಹೆಚ್ಚಿಸಿತು ಎಂದು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹೇಳಿದರು.
ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯಇಲ್ಲಿನ ಮಾನವಿಕ ಸಂಘದಿಂದ ಏರ್ಪಡಿಸಲಾದ ” ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ – 100 ವರುಷಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ನಮಗೆ ಸ್ವಾತಂತ್ಯ ದೊರಕಿದುದರ ಹಿಂದೆ ಅದೆಷ್ಟೋ ಜನರ ಕಣ್ಣೀರ ಕಥೆಯಿದೆ , ಸ್ವಾತಂತ್ರ್ಯದ ಸಿಹಿಯ ಹಿಂದಿನ ಕಹಿಯನ್ನು ತಿಳಿದುಕೊಳ್ಳಬೇಕು ಮತ್ತು ಸ್ವಾತಂತ್ರ್ಯದ ಸದುಪಯೋಗ ಮುಖ್ಯ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯರು ಮಾತನಾಡಿ ಇತಿಹಾಸವನ್ನು ಏಕಮುಖವಾಗಿ ನೋಡುವುದಲ್ಲ , ಈ ನೆಲದ ಅಂತರಾಳದ ನೋವನ್ನು ತಿಳಿದುಕೊಳ್ಳಬೇಕು , ಇತಿಹಾಸದ ದುರಂತ ಮನುಕುಲಕ್ಕೆ ಪಾಠವಾಗಬೇಕು ಮತ್ತು ಹೊರಜಗತ್ತಿನ ಸಂಘರ್ಷಗಳು ಬಲಿಷ್ಠವಾಗಿ ಬೆಳೆಯಲು ಸಹಾಯವಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಾನವಿಕ ಸಂಘದ ನಿರ್ದೇಶಕಿ ಉಪನ್ಯಾಸಕಿ ರೇಷ್ಮಾ, ವಿದ್ಯಾರ್ಥಿ ಕ್ಷೇಮಪಾಲಕ ಲಕ್ಷ್ಮಣ್ ಏನೆಕಲ್ ಉಪಸ್ಥಿತರಿದ್ದರು.
ಇತಿಹಾಸ ಉಪನ್ಯಾಸಕರಾದ ಹರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮಣ್ ಏನೆಕಲ್ ಅವರು ವಂದಿಸಿದರು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಅತಿಥಿಗಳೊಡನೆ ಸಂವಾದ ನಡೆಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…