ಸವಣೂರು : ಪಾಲ್ತಾಡಿಯ ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ ಆಟಿದ ಕೂಟದ ಅಂಗವಾಗಿ ನಡೆದ 3 ನೇ ವರ್ಷದ ಜಿಲ್ಲಾ ಮಟ್ಟದ ಜನಪದ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಹಿಸಿದ್ದರು.ಸಾಮಾಜಿಕ ಮುಂದಾಳು ಸುಬ್ರಾಯ ಗೌಡ ಮಾಡಾವು ಬಹುಮಾನ ವಿತರಿಸಿದರು.
ಸವಣೂರು ಪ.ಪೂ.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಯಾನಂದ ಮಾಲೆತ್ತಾರು ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಕಾರ್ಯದರ್ಶಿ ಉದಯ ಬಿ.ಆರ್,ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಸುನೀಲ್ ರೈ ಪಾಲ್ತಾಡು, ಪಾಲ್ತಾಡು ನ್ಯೂಬ್ರದರ್ಸ್‍ನ ಅಧ್ಯಕ್ಷ ಹನೀಫ್,ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ ಅತಿಥಿಗಳಾಗಿದ್ದರು.
ಕ್ರೀಡಾಕೂಟಕ್ಕೆ ಬೆಳಗ್ಗೆ ಚೆನ್ನಾವರ ಉಳ್ಳಾಕುಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಾಲನೆ ನೀಡಿದರು.ಸಾಮಾಜಿಕ ಮುಂದಾಳು ಬಾಲಕೃಷ್ಣ ರೈ ಚೆನ್ನಾವರ,ಹಿರಿಯ ಕೃಷಿಕ ನಾರಾಯಣ ರೈ ಪಟ್ಟೆ,ಚೆನ್ನಾವರ ಶಾಲಾ ಮುಖ್ಯ ಗುರು ಶಾಂತಾಕುಮಾರಿ ಎನ್,ಸವಣೂರು ಗ್ರಾ.ಪಂ.ಸದಸ್ಯೆ ಜಯಂತಿ ಮಡಿವಾಳ,ವಿಶ್ವನಾಥ ರೈ ಚೆನ್ನಾವರ ಪಟ್ಟೆ ಉಪಸ್ಥಿತರಿದ್ದರು.
ಕೆಸರುಗದ್ದೆ ಜನಪದ ಕ್ರೀಡಾಕೂಟದಲ್ಲಿ ಪುರುಷರಿಗೆ ನಡೆಯುವ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ವಿನಾಯಕ ಕುಂಬ್ರ ಎ ,ದ್ವಿತೀಯ ವಿನಾಯಕ ಕುಂಬ್ರ ಬಿ ,ತೃತೀಯ ಶ್ರೀದೇವಿ ಶರವೂರು ಹಾಗೂ ಚತುರ್ಥ ಸಹಸ್ರ ನೆಲ್ಯಾಡಿ .
ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಶಿಬಾರ ಫ್ರೆಂಡ್ಸ್ ಮಂಗಳೂರು ,ದ್ವಿತೀಯ ಕೆಎ 21 ಆಲಂಕಾರು, ತೃತೀಯ ಎನ್.ಎಂ.ಸಿ ಸುಳ್ಯ ಹಾಗೂ ಚತುರ್ಥ ಎಸ್.ಡಿ.ಎಂ ಉಜಿರೆ.
ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ.ಪ್ರಥಮ ದರ್ಜೆ ಕಾಲೇಜು ಸುಳ್ಯ ,ದ್ವಿತೀಯ -ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ.
ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಸರ್ವೆ ಮಹಿಳಾ ಮಂಡಲ,ದ್ವಿತೀಯ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು.
ಪುರುಷರ ವಿಭಾಗದಲ್ಲಿ ಸವಣೂರು ವಿದ್ಯಾರಶ್ಮಿಯ ಸಂಪತ್ ಶೆಟ್ಟಿ ಬಾರಿಕೆ ಹಾಗೂ ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಅಶ್ವಿನಿ ಅವರು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಉಳಿದಂತೆ ಕೆಸರುಗದ್ದೆ ಓಟ ,ತುಳು ಜಾನಪದ ಸ್ಪರ್ದೆ ,ತುಳು ಪಾಡ್ದನ ಸ್ಪರ್ಧೆ , ತುಳು ರಸಪ್ರಶ್ನೆ ,ತುಳು ಭಾಷಣ ,ಜಾನಪದ ಸ್ಪರ್ಧೆ ,ನಿಧಿ ಶೋಧ ಸೇರಿದಂತೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…