ಸುಳ್ಯ: ಜಿಲ್ಲೆಯಲ್ಲಿ ಡೆಂಘೆ ಜ್ವರ ವ್ಯಾಪಕವಾಗಿ ಹರಡಿತ್ತು. ಹಲವಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಪತ್ರಕರ್ತನೂ ಸೇರಿದಂತೆ ವಿವಿದೆಡೆ ಕೆಲವು ಮಂದಿ ಸಾವನ್ನಪ್ಪಿದ್ದಾರೆ. ಇಲಾಖೆಗಳು ಸೂಕ್ತ ಕ್ರಮದ ಬಗ್ಗೆ ಭರವಸೆ ನೀಡುತ್ತವೆ. ಅಧಿಕಾರಿಗಳು ಕ್ರಮ ಕೈಗೊಂಡ ಬಗ್ಗೆ ವರದಿ ನೀಡುತ್ತವೆ. ಆದರೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಮುಂಜಾಗ್ರತಾ ಕ್ರಮಕೈಗೊಳ್ಳದೇ ಇರುವುದೂ ಡೆಂಘೆ ಜ್ವರ ಹರಡಲು ಕಾರಣವಾಗುತ್ತಾ ಎನ್ನುವ ಸಂದೇಹ ಬಂದಿದೆ. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ,
ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಘೆ ಜ್ವರ ವ್ಯಾಪಕವಾಗಿ ಹರಡಿತ್ತು. ಅದರಲ್ಲಿ ಗುತ್ತಿಗಾರು ಸುತ್ತಮುತ್ತ ಹೆಚ್ಚಾಗಿ ಜ್ವರದ ಬಾಧೆ ಕಂಡುಬಂದಿತ್ತು. ಹೀಗಾಗಿ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರನ್ನೂ ಕೆಲವು ದಿನಗಳ ಕಾಲ ವ್ಯವಸ್ಥೆ ಮಾಡಲಾಗಿತ್ತು. ಅದರ ಜೊತೆಗೆ ಕನಕಮಜಲು, ಪಂಜ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜ್ವರದ ಬಾಧೆಯೂ ಹೆಚ್ಚಾಗಿತ್ತು. ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸೊಳ್ಳೆ ತಾಣಗಳ ನಾಶ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದವು ಸೂಚನೆ ನೀಡುತ್ತಿದ್ದರು. ಇದನ್ನು ಮನೆಯವರೂ ಅನುಸರಿಸುತ್ತಿದ್ದರು. ಆದರೆ ಪೇಟೆಯ ಸ್ವಚ್ಛತೆ, ತ್ಯಾಜ್ಯಗಳ ಎಸೆಯುವುದರ ವಿರುದ್ಧ ಇಲಾಖೆಗಳು, ಸ್ಥಳೀಯ ಪಂಚಾಯತ್ ಕ್ರಮಕೈಗೊಂಡಿಲ್ಲ.
ಸುಳ್ಯ ತಾಲೂಕಿನ ಗುತ್ತಿಗಾರು ಪೇಟೆಯ ಕೆಳಗಿನ ಪೇಟೆಯ ಬಳ್ಳಕ್ಕ – ಪಂಜ ರಸ್ತೆ ತಿರುಗುವ ಪ್ರದೇಶದಲ್ಲಿ ತ್ಯಾಜ್ಯ ಎಸೆಯಲಾಗುತ್ತಿತ್ತು. ಇಂದಲ್ಲ ಕಳೆದ ಹಲವು ಸಮಯಗಳಿಂದ ಇಲ್ಲಿನ ಚರಂಡಿಗೆ ಎಸೆಯಲಾಗುತ್ತದೆ. ಹೀಗಾಗಿ ಸೊಳ್ಳೆ ಉತ್ಪಾದನೆ ಮಾತ್ರವಲ್ಲ ವಿಪರೀತ ವಾಸನೆಯೂ ಇರುತ್ತದೆ, ಹೀಗಾಗಿ ರೋಗ ಹರಡುವ ಎಲ್ಲಾ ಸಾಧ್ಯತೆಯೂ ಇದೆ. ಈ ಬಗ್ಗೆ ಸ್ಥಳೀಯರು ಈ ಹಿಂದೆಯೂ ಗುತ್ತಿಗಾರು ಪಂಚಾಯತ್ ಗೆ ದೂರು ನೀಡಿದ್ದರು. ಆ ಬಳಿಕ ಸ್ಥಳೀಯರೇ ಈ ತ್ಯಾಜ್ಯ ತೆರವು ಮಾಡಿದ್ದರು. ತ್ಯಾಜ್ಯ ಎಸೆಯುವ ಬಗ್ಗೆ ಹಾಗೂ ರೋಗ ಹರಡುವ ಭೀತಿ ಇದೆ ಎಂದು 7-7-2017 ರಲ್ಲಿ ಒಮ್ಮೆ ದೂರು ನೀಡಲಾಗಿತ್ತು. ಹಾಗಿದ್ದರೂ ಕ್ರಮವಾಗದ ಹಿನ್ನೆಲೆಯಲ್ಲಿ ಸ್ಥಳೀಯರೇ ಸ್ವಚ್ಛ ಮಾಡಿದ್ದರು.
ಇದೀಗ 4-1-2019 ರಂದು ಮತ್ತೆ ತ್ಯಾಜ್ಯ ಎಸೆಯುವ ಹಾಗೂ ರೋಗ ಹರಡುವ ಭೀತಿ ಇದೆ ಎಂದು ಗುತ್ತಿಗಾರು ಪಂಚಾಯತ್ ಗೆ ದೂರು ನೀಡಲಾಗಿತ್ತು. ಈ ದೂರು ನೀಡಿ ತಿಂಗಳು 7 ಆದರೂ ಯಾವುದೇ ಕ್ರಮ ಇದುವರೆಗೆ ಆಗಿಲ್ಲ. ಪಂಚಾಯತ್ ಆಡಳಿತಗಳು ಜನರ ಸಮಸ್ಯೆಗಳಿಗೆ ಎಷ್ಟು ಸ್ಪಂದನೆ ನೀಡುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಸ್ವಚ್ಛತೆ ಎಲ್ಲಾ ನಾಗರೀಕರ ಜವಾಬ್ದಾರಿ ಹೌದು. ಆದರೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಇಲಾಖೆಗಳೇ ದೂರು ನೀಡಿದರೂ ಮೌನ ತಾಳುವುದು ವ್ಯವಸ್ಥೆಗೆ ಹಾಗೂ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ವ್ಯವಸ್ಥೆಗಳಿಂದಲೇ ಆಡಳಿತದ ಮೇಲೆ, ಅಧಿಕಾರಿಗಳ ಮೇಲೆ, ಇಲಾಖೆಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗುತ್ತದೆ. ಪ್ರತೀ ಬಾರಿಯೂ ದೂರು ನೀಡಿ ನಂತರ ಸಾರ್ವಜನಿಕರೇ ಸ್ವಚ್ಛ ಮಾಡುವ ವ್ಯವಸ್ಥೆ ಆಡಳಿತ ಯಂತ್ರದಲ್ಲಿನ ದೌರ್ಬಲ್ಯದ ಸಂಕೇತವಾಗಿದೆ. ಜನಪ್ರತಿನಿಧಿಗಳೂ ಈ ಬಗ್ಗೆ ಮೌನ ವಹಿಸುವುದು ಅಚ್ಚರಿಗೆ ಕಾರಣವಾಗಿದೆ.
ಗುತ್ತಿಗಾರು ಪ್ರದೇಶದಲ್ಲಿ 2 ವರ್ಷದ ಹಿಂದೆಯೂ ವ್ಯಾಪಕವಾಗಿ ಡೆಂಘೆ ಜ್ವರ ಕಂಡುಬಂದಿತ್ತು. ಆ ಸಂದರ್ಭ ಆರೋಗ್ಯ ಸಚಿವರೇ ಗುತ್ತಿಗಾರಿಗೆ ಬಂದಿದ್ದರು. ಈ ವರ್ಷವೂ ವ್ಯಾಪಕ ಡೆಂಘೆ ಜ್ವರ ಕಂಡುಬಂದಿತ್ತು. ಹೀಗಾಗಿ ಇಲ್ಲಿನ ಸ್ವಚ್ಛತೆಯ ಕೊರತೆಯೇ ಡೆಂಘೆ ಹಾಗೂ ಸಾಂಕ್ರಾಮಿಕ ರೋಗ ಹರಡಲು ಕಾರಣವೇ ಎಂಬ ಸಂದೇಹ ಈಗ ಮೂಡಿದೆ.
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …
ಬೇಸಿಗೆಯಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…