ಎಲಿಮಲೆ : ಎಲಿಮಲೆ ಜೀರ್ಮುಕ್ಕಿ ಮುಹ್ಯದ್ದೀನ್ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತರ್ಬಿಯತ್ತುಲ್ ಇಸ್ಲಾಂ ಎಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆಯು ಬುಸ್ತಾನುಲ್ ಉಲೂಂ ಮದ್ರಸಾ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಹಸನ್ ಹರ್ಲಡ್ಕರವರ ಅಧ್ಯಕ್ಷತೆಯಲ್ಲಿ ಜರಗಿತು. ಸ್ಥಳೀಯ ಇಮಾಮರಾದ ಸೂಫಿ ಮುಸ್ಲಿಯಾರ್ ರವರು ಪ್ರಾರ್ಥನೆಗೆ ನೇತೃತ್ವ ಉದ್ಘಾಟಿಸಿದರು. ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ಲ ಜಿ. ಎ. ಕೆ, ಅಧ್ಯಕ್ಷರಾಗಿ ಫೈಝಲ್ ಜೀರ್ಮುಕ್ಕಿ, ಉಪಾಧ್ಯಕ್ಷರಾಗಿ ಸೂಫಿ ಮುಸ್ಲಿಯಾರ್, ಪ್ರ. ಕಾರ್ಯದರ್ಶಿಯಾಗಿ ಜುನೈದ್ ಸಖಾಫಿ ಜೀರ್ಮುಕ್ಕಿ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಜಿ. ಎಂ, ಕೋಶಾಧಿಕಾರಿಯಾಗಿ ಹಸನ್ ಹರ್ಲಡ್ಕ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಜಿ. ಎಸ್ ಅಬ್ದುಲ್ಲ, ಸಿದ್ದೀಖ್ ಜಿ, ಹನೀಫ್ ಜಿ, ಬಾತಿಷಾ ವೈ ಹಾಗೂ ಲತೀಫ್ ಕ್ವಾಲಿಟಿ ಆಯ್ಕೆಯಾದರು.
ಜಮಾಅತ್ತಿನ ಹಿರಿಯ ನಾಯಕರಾದ ಅಬೂಬಕರ್ ಪಿ. ಎಚ್, ಮುಹಮ್ಮದ್ ಕುಂಞಿ ಹರ್ಲಡ್ಕ, ಮಸೀದಿಯ ಕೋಶಾಧಿಕಾರಿ ಯೂಸುಫ್ ಪಿ. ಎಚ್, ಸಮಿತಿಯ ಸ್ಥಾಪಕ ನಾಯಕರಾದ ಎಂ. ಕೆ ಜೀರ್ಮುಕ್ಕಿ, ಅಶ್ರಫ್ ಜಿ ಮುಂತಾದವರು ಮುಖ್ಯಾತಿಥಿಗಳಾಗಿ ಭಾಗವಹಿಸಿದ್ದರು. ಲತೀಫ್ ಕ್ವಾಲಿಟಿ ಸ್ವಾಗತಿಸಿ, ನೂತನ ಪ್ರ. ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ವಂದಿಸಿದರು.
12.07.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…
ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…
ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…
ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, 23 ಅಸಂಘಟಿತ ವರ್ಗಗಳ…
ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ…