Advertisement
ವೈರಲ್ ಸುದ್ದಿ

ಜೀವರಕ್ಷಕ ಔಷಧಿ ಮನೆಗೆ ತಲುಪಿಸಿದ ಅಟೋ ಚಾಲಕ | ಲಾಕ್ಡೌನ್ ಒತ್ತಡದಲ್ಲಿ ಅಟೋ ಚಾಲಕನ “ಪ್ರಾಮಾಣಿಕ” ಸೇವೆ|

Share

ಮಂಗಳೂರು: ಪ್ರಾಮಾಣಿಕತೆ ಎನ್ನುವುದು  ಮನುಷ್ಯನ ಹುಟ್ಟಿನಲ್ಲೇ ಬರಬೇಕಾದ ಗುಣ. ಈಚೆಗೆ ಪ್ರಾಮಾಣಿಕತೆಯೂ ಸುದ್ದಿಯಾಗುತ್ತದೆ. ಆದರೆ ಇದು ಹಾಗಲ್ಲ, ಲಾಕ್ಡೌನ್ ನಡುವೆ, ಎಲ್ಲಾ ಒತ್ತಡದ ನಡುವೆ ತನ್ನ ಅಟೋದಲ್ಲಿ  ಪ್ರಯಾಣಿಸಿದ ಪ್ರಯಾಣಿಕನ ಜೀವರಕ್ಷಕ ಔಷಧಿ ಮನೆಗೆ ತಲುಪಿಸಿದ ಪ್ರಾಮಾಣಿಕ ಸೇವೆ. ಇದು ನಡೆದದ್ದು ಮೂಡಬಿದರೆಯಲ್ಲಿ.

ವ್ಯಕ್ತಿಯೋರ್ವರು ತಮ್ಮ ಔಷಧಿ ಹಾಗೂ ವೈದ್ಯಕೀಯ ದಾಖಲೆಗಳನ್ನು ಮನೆಗೆ ಹೋಗುವ ತುರಾತುರಿಯಲ್ಲಿ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು, ಇದನ್ನು ನಂತರ ಗಮನಿಸಿದ ಚಾಲಕ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿದ್ದಾರೆ. ಇತ್ತೀಚೆಗೆ ಆಂಜಿಯೋಪ್ಲಾಸ್ಟಿ ಆದ ವ್ಯಕ್ತಿ ತಮ್ಮ ಔಷಧಿ ಹಾಗೂ ವೈದ್ಯಕೀಯ ದಾಖಲೆಗಳನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರು. ಈ ಔಷಧಿಗಳು ಜೀವರಕ್ಷಕ ಔಷಧಿಯಾಗಿದ್ದು  ಲಾಕ್ಡೌನ್ ನಡುವೆ  ಪರಿಶ್ರಮದಿಂದ ರೋಗಿಯು ಖರೀದಿ ಮಾಡಿ ಅವಸರದಲ್ಲಿ ಮನೆಗೆ ಹೋಗುವ ಸಂದರ್ಭ ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ರಿಕ್ಷಾ ಚಾಲಕ ಯೂಸುಫ್ ಕೂಡಲೇ ಅದರಲ್ಲಿ ನಮೂದಿಸಿದ ವೈದ್ಯರ ಮೊಬೈಲಿಗೆ(ಡಾ.ಪದ್ಮನಾಭ ಕಾಮತ್) ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ವಿಷಯವನ್ನು ತಿಳಿದ ಕೂಡಲೇ  ಆಸ್ಪತ್ರೆಯ ಹೌಸ್ ಕೀಪಿಂಗ್ ಸಹಾಯಕಿ ಭಾರತಿ ಅವರು ತಕ್ಷಣ ರೋಗಿಯ ಮೊಬೈಲ್ ನಂಬರನ್ನು ದಾಖಲೆಯಿಂದ ಪರಿಶೀಲಿಸಿ ಎರಡೂ ಪಂಗಡದವರಿಗೆ ತಿಳಿಸಿರುತ್ತಾರೆ .  ಅಟೋ ಚಾಲಕ ಯೂಸುಫ್ ಅವರು ರೋಗಿಯ ಮೊಬೈಲ್ ನಂಬರ್ ಪಡೆದುಕೊಂಡು ಅವರ ವಿಳಾಸಕ್ಕೆ ವೈದ್ಯಕೀಯ ದಾಖಲೆಗಳನ್ನು ಹಿಂತಿರುಗಿಸಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

4 hours ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

4 hours ago

ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿರುವುದರಿಂದ ಈರುಳ್ಳಿ,…

4 hours ago

ಗದಗ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಆರಂಭ – ರಿಯಾಯಿತಿ ದರದಲ್ಲಿ ಕಡಲೆ, ಜೋಳ, ಶೇಂಗಾ ಬೀಜ ಲಭ್ಯ

ಗದಗ ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಹಂಗಾಮು ಆರಂಭವಾಗಿದ್ದು, ಕಡಲೆ, ಜೋಳ, ಶೇಂಗಾ…

4 hours ago

ಬೆಳಗಾವಿ ರೈತರಿಗೆ ಸಾಲ ಮರುಪಾವತಿಯಲ್ಲಿ ಪರಿಹಾರ ಸಿಗುತ್ತಾ?

ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮರುರಚನೆ ಮಾಡಿ, 12…

5 hours ago

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…

1 day ago