ಸುಳ್ಯ: ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಜುಲೈ 6ರಂದು ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಲಿದೆ ಎಂದು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸುಳ್ಯ ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸುಬ್ರಮಣಿ ಕಲ್ಲುಗುಂಡಿ ಅವರನ್ನು ಸನ್ಮಾನಿಸಲಾಗುವುದು. ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ಸನ್ಮಾನ ನೆರವೇರಿಸುವರು, ಸುಳ್ಯ ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಮುಖ್ಯ ಅತಿಥಿಯಾಗಲಿದ್ದರೆ ಎಂದು ಅವರು ವಿವರಿಸಿದರು.
ಮಂಡಳಿಯ ಗೌರವಾಧ್ಯಕ್ಷ ಚಂದ್ರಶೇಖರ ಪನ್ನೆ, ಗೌರವ ಸಲಹೆಗಾರರಾದ, ದಿನೇಶ್ ಮಡಪ್ಪಾಡಿ, ಶೈಲೇಶ್ ಅಂಬೆಕಲ್ಲು, ದೀಪಕ್ ಕುತ್ತಮೊಟ್ಟೆ, ಲಕ್ಷ್ಮೀನಾರಾಯಣ ಕಜೆಗದ್ದೆ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಜಯನಗರ, ಕೋಶಾಧಿಕಾರಿ ತೇಜಸ್ವಿ ಕಡಪಳ, ಜತೆ ಕಾರ್ಯದರ್ಶಿಗಳಾದ ವಿಜಯ ಕುಮಾರ್ ಉಬರಡ್ಕ, ಶಂಕರ ಪೆರಾಜೆ, ನಿರ್ದೇಶಕರುಗಳಾದ ದಯಾನಂದ ಕೇರ್ಪಳ, ಆರ್.ಕೆ.ಮಹಮ್ಮದ್, ಚರಣ್ ಕಾಯರ, ವಿಖ್ಯಾತ್ ಬಾರ್ಪಣೆ, ಪವನ್ ಜಿ.ಟಿ. ಪಲ್ಲತಡ್ಕ, ರಶ್ಮಿ ರಜನಿಕಾಂತ್, ಶ್ರೀಮತಿ ರಾಜೀವಿ ಲಾವಂತಡ್ಕ, ಪೂರ್ವಾಧ್ಯಕ್ಷರಾದ ಪಿ.ಎಸ್.ಗಂಗಾಧರ್, ಕೆ.ಆರ್. ಪದ್ಮನಾಭ, ಹರೀಶ್ ಪೂಜಾರಿಮನೆ, ರಂಜಿತ್ ಕುಕ್ಕೆಟ್ಟಿ ಉಪಸ್ಥಿತರಿದ್ದರು.
ವರುಷದಿಂದ ವರುಷಕ್ಕೆ ಬಿಸಿ ಏರುತ್ತಿರುವ ಭೂಮಿ, ಕಳಕೊಳ್ಳುತ್ತಿರುವ ಸಸ್ಯ ಸಂಪತ್ತು, ಭೂಮಿಯನ್ನು ತಂಪಾಗಿಸಲು…
ಹಲಸು ಮೌಲ್ಯವರ್ಧನೆಯಾಗಿ ಅಡುಗೆ ಮನೆ ಸೇರುತ್ತಿದೆ. ಅದರ ಜೊತೆಗೇ ಹಲಸು ವಿವಿಧ ರೂಪದಲ್ಲಿ…
ಸಮಾಜಕ್ಕೆ, ರಾಷ್ಟ್ರಕ್ಕೆ ವಿಶ್ವಕ್ಕೆ ಬೆಳಕು ನೀಡುವ ವ್ಯವಸ್ಥೆಯನ್ನು ಬೆಳೆಸುವುದು ಇಡೀ ಸಮಾಜದ ಜವಾಬ್ದಾರಿ…
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು.…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…