ಜು.11 : ‘ಕ್ಯಾಂಪ್ಕೊ ದಿನ’

July 10, 2019
9:30 AM

ಮಂಗಳೂರು: ಜುಲೈ 11 ರಂದು ಕ್ಯಾಂಪ್ಕೋ ಸಂಸ್ಥೆಯು  ಯಶಸ್ವಿ 46 ವರ್ಷಗಳ ಸೇವೆಯನ್ನು ಪೂರೈಸಿ 47 ನೇ ವರ್ಷಕ್ಕೆ  ಕಾಲಿಡುತ್ತಿದೆ.

Advertisement
Advertisement
Advertisement

ಅಡಿಕೆ ಕೃಷಿಕರ ಕಣ್ಮಣಿ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪೊ ಅಡಿಕೆ ಮಾರುಕಟ್ಟೆಯು ದಾರುಣ ಸ್ಥಿತಿಯಲ್ಲಿದ್ದಾಗ ಕೃಷಿಕರ ಉದ್ಧಾರಕ್ಕಾಗಿ ವಾರಣಾಶಿ ಸುಬ್ರಾಯ ಭಟ್ಟರ ಸಂಘಟನಾ ಚಾತುರ್ಯ ಮತ್ತು ದೂರದರ್ಶಿತ್ವದ ಫಲವಾಗಿ ಕೃಷಿಕ ಸಮುದಾಯದ ಸಹಕಾರದೊಂದಿಗೆ ಆಪದ್ಬಾಂಧವನಾಗಿ ಜನ್ಮ ತಾಳಿದ ಸಂಸ್ಥೆಯು ಕ್ರಮೇಣ ಕೊಕ್ಕೋ, ರಬ್ಬರ್ ಮತ್ತು ಕಾಳುಮೆಣಸುಗಳನ್ನು ವ್ಯಾಪಿಸಿಕೊಂಡು ಇದೀಗ 2018-19ನೇ ಹಣಕಾಸು ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ 1880 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿದೆ.

Advertisement

ಸಂಸ್ಥೆಯು  ಜುಲೈ 11ನೇ ತಾರೀಕಿನಂದು  ಬೆಳಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮವನ್ನು ಹಿರಿಯ ಸಹಕಾರಿ ಮತ್ತು ಸಾಹಿತಿ  ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷರಾದ  ಎಸ್.ಆರ್.ಸತೀಶ್ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾಂಪ್ಕೊದ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿದ್ದ  ಜಿ.ಕೆ.ಸಂಗಮೇಶ್ವರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ನಿವೃತ್ತ ಐ.ಎ.ಎಸ್. ಅಧಿಕಾರಿ ವಿ.ವಿ.ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror