ಜು.16 ರಿಂದ ರಾಘವೇಶ್ವರ ಶ್ರೀಗಳ ರಾಮಾಯಣ ಚಾತುರ್ಮಾಸ್ಯ ಆರಂಭ

July 15, 2019
8:02 PM

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ 26ನೇ ಚಾತುರ್ಮಾಸ ಬೆಂಗಳೂರಿನ ಗಿರಿನಗರದಲ್ಲಿರುವ ರಾಮಾಶ್ರಮ ಆವರಣದಲ್ಲಿ ಜು.16 ರಿಂದ  ನಡೆಯಲಿದೆ.

Advertisement

ಚಾತುರ್ಮಾಸ್ಯ ಅಂಗವಾಗಿ ಸೋಮವಾರ ಮಧ್ಯಾಹ್ನ ಪುರಪ್ರವೇಶ ಅದ್ದೂರಿಯಿಂದ ನೆರವೇರಿತು. ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಭಟ್ ಬೇರ್ಕಡವು, ಚಾತುರ್ಮಾಸ್ಯ ಕ್ರಿಯಾಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಕೋರಮಂಗಲ, ಕಾರ್ಯದರ್ಶಿ ವಾದಿರಾಜ ಸಾಮಗ, ರಾಮಾಯಣ ಕ್ರಿಯಾಸಮಿತಿ ಅಧ್ಯಕ್ಷ ಶಾರದಾ ಜಯಗೋವಿಂದ್, ಕೆಕ್ಕಾರ್ ರಾಮಚಂದ್ರ ಭಟ್ ಹಾಗೂ ಶ್ರೀಮಠದ ಅಪಾರ ಶಿಷ್ಯ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದು ಪುರಪ್ರವೇಶ ಮಾಡಿದ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು.

 

 

Advertisement

ಮಂಗಳವಾರ ಚಾತುರ್ಮಾಸ್ಯ ವ್ರತಾರಂಭದ ಅಂಗವಾಗಿ ಬೆಳಿಗ್ಗೆ ಶ್ರೀಕರಾರ್ಚಿತ ಪೂಜೆಯ ಬಳಿಕ ಶ್ರೀವ್ಯಾಸಪೂಜೆ ಮತ್ತು ಗುರುಪರಂಪರೆಯ ವಿಶೇಷ ಪೂಜೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಅನ್ನರಾಶಿ ಪೂಜೆ, ಪುನರ್ವಸು ಲೋಕಾರ್ಪಣೆ, ಮಧ್ಯಾಹ್ನ 2ಕ್ಕೆ ಚಾತುರ್ಮಾಸ್ಯ ಸಭೆ ಮತ್ತು ನೂತನ ಶಾಸನತಂತ್ರದ ಘೋಷಣೆ ನಡೆಯಲಿದೆ.

ಜುಲೈ 16ರಂದು ಆರಂಭವಾಗುವ ಚಾತುರ್ಮಾಸ ಸೆಪ್ಟೆಂಬರ್ 14ರಂದು ಸಂಪನ್ನವಾಗಲಿದ್ದು, ಈ ಬಾರಿಯ ಚಾತುರ್ಮಾಸಕ್ಕೆ ರಾಮಾಯಣ ಚಾತುರ್ಮಾಸ ಎಂದು ಹೆಸರಿಸಲಾಗಿದೆ. ಸೆಪ್ಟೆಂಬರ್ 14 ರಂದು ಶನಿವಾರ ಸೀಮೋಲ್ಲಂಘನ ನಡೆಯಲಿದೆ ಎಂದು ಚಾತುರ್ಮಾಸ್ಯ ಕ್ರಿಯಾಸಮಿತಿ ಅಧ್ಯಕ್ಷ ರಮೇಶ್ ಕೋರಮಂಗಲ ಮತ್ತು ಕಾರ್ಯದರ್ಶಿ ವಾದಿರಾಜ ಸಾಮಗ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಚಾತುರ್ಮಾಸ್ಯದಲ್ಲಿ ಜುಲೈ 16ರಂದು ಪುನರ್ವಸು ಭವನ ಲೋಕಾರ್ಪಣೆ, 19ರಂದು ಶ್ರೀಗಳ ವರ್ಧಂತಿ, 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 2ರಂದು ಗಣೇಶ ಚತುರ್ಥಿ ನಡೆಯಲಿದೆ. 14ರಂದು ಸೀಮೋಲ್ಲಂಘನೆಯ ದಿನ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.  ಶ್ರೀಗಳು ಸನ್ಯಾಸ ಸ್ವೀಕರಿಸಿ 25 ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಪ್ರತಿ ದಿನ ಶ್ರೀಗಳಿಂದ ಧಾರಾ ರಾಮಾಯಣ ಪ್ರವಚನ ಇರುತ್ತದೆ ಎಂದು ಮಾಧ್ಯಮ  ಶ್ರೀಸಂಯೋಜಕ ಉದಯಶಂಕರ್ ಭಟ್ ತಿಳಿಸಿದ್ದಾರೆ.

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಚಾಲಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ | ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ
July 11, 2025
7:03 AM
by: The Rural Mirror ಸುದ್ದಿಜಾಲ
ಭಾರತತ್ವವನ್ನೇ ಕಳೆದುಕೊಂಡು ಯಾವ ಸಾಧನೆಯೂ ಮಾಡಲಾಗದು – ರಾಘವೇಶ್ವರ ಶ್ರೀ
July 10, 2025
7:42 PM
by: The Rural Mirror ಸುದ್ದಿಜಾಲ
ಕೃಷಿಯಲ್ಲಿ ದೂರ ಶಿಕ್ಷಣ ಕುರಿತ ಕಾರ್ಯಗಾರ
July 9, 2025
6:54 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group