ಸವಣೂರು : ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು ಇದರ ಸಹಯೋಗದಲ್ಲಿ ಚೆನ್ನಾವರ ಅಭ್ಯುದಯ ಯುವಕ ಮಂಡಲದ ಆಶ್ರಯದಲ್ಲಿ 3ನೇ ವರ್ಷದ ಆಟಿದ ಕೂಟದ ಅಂಗವಾಗಿ ಜಿಲ್ಲಾ ಮಟ್ಟದ ಜಾನಪದ ಕ್ರೀಡಾಕೂಟವು ಪಾಲ್ತಾಡಿ ಗ್ರಾಮದ ಚೆನ್ನಾವರ ಕೆಸರುಗದ್ದೆಯಲ್ಲಿ ಜು.28ರಂದು ನಡೆಯಲಿದೆ.
ಕ್ರೀಡಾಕೂಟಕ್ಕೆ ಬೆಳಗ್ಗೆ ಚೆನ್ನಾವರ ಉಳ್ಳಾಕುಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಾಲನೆ ನೀಡುವರು.ಅತಿಥಿಗಳಾಗಿ ಸಾಮಾಜಿಕ ಮುಂದಾಳು ಬಾಲಕೃಷ್ಣ ರೈ ಚೆನ್ನಾವರ,ಹಿರಿಯ ಕೃಷಿಕ ನಾರಾಯಣ ರೈ ಪಟ್ಟೆ,ಚೆನ್ನಾವರ ಶಾಲಾ ಮುಖ್ಯ ಗುರು ಶಾಂತಾಕುಮಾರಿ ಎನ್,ಸವಣೂರು ಗ್ರಾ.ಪಂ.ಸದಸ್ಯೆ ಜಯಂತಿ ಮಡಿವಾಳ,ವಿಶ್ವನಾಥ ರೈ ಚೆನ್ನಾವರ ಪಟ್ಟೆ ಪಾಲ್ಗೊಳ್ಳುವರು.
ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಉದ್ಘಾಟಿಸುವರು.ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ವಹಿಸುವರು.ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಮುಖ್ಯಶಿಕ್ಷಕ ಗಿರಿಶಂಕರ ಸುಲಾಯ ಅವರು ಆಟಿ ತಿಂಗಳ ವಿಶೇಷತೆ ಕುರಿತು ಉಪನ್ಯಾಸ ನೀಡುವರು.
ಗೌರವಾರ್ಪಣೆ
ಇದೇ ಸಂಧರ್ಭದಲ್ಲಿ ಪಾಲ್ತಾಡಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಿದ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್, 36 ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ರಾಮಚಂದ್ರ ಭಟ್ ಸಾರಡ್ಕ, ಗಣಿ ಮತ್ತು ಭೂವಿಜ್ಞಾನ ಕೇಂದ್ರದ ಭೂವಿಜ್ಞಾನಿ ಸಂಧ್ಯಾ ಕುಮಾರ್ ಬಿ.ಎನ್ ಅವರಿಗೆ ಗೌರವಾರ್ಪಣೆ ನಡೆಯಲಿದೆ.
ಕೆಸರುಗದ್ದೆ ಜಾನಪದ ಸ್ಪರ್ಧೆಗಳು
ಕೆಸರುಗದ್ದೆ ಜನಪದ ಕ್ರೀಡಾಕೂಟದಲ್ಲಿ ಪುರುಷರಿಗೆ ನಡೆಯುವ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ 3000 ನಗದು ಹಾಗೂ ಶಾಶ್ವತ ಫಲಕ ,ದ್ವಿತೀಯ 2000 ನಗದು ಹಾಗೂ ಶಾಶ್ವತ ಫಲಕ ,ತೃತೀಯ ಹಾಗೂ ಚತುಥೇ ಶಾಶ್ವತ ಫಲಕ,ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ 4000ನಗದು ಹಾಗೂ ದ್ವಿತೀಯ 2500 ನಗದು ಹಾಗೂ ಶಾಶ್ವತ ಫಲಕ ,ತೃತೀಯ 1500 ಹಾಗೂ ಶಾಶ್ವತ ಫಲಕ,ಚತುರ್ಥ ಶಾಶ್ವತ ಫಲಕ ,ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ 1500 ನಗದು ಹಾಗೂ ಶಾಶ್ವತ ಫಲಕ,ದ್ವಿತೀಯ 1000 ನಗದು ಹಾಗೂ ಶಾಶ್ವತ ಫಲಕ ಉಳಿದಂತೆ ಕೆಸರುಗದ್ದೆ ಓಟ ,ತುಳು ಜಾನಪದ ಸ್ಪರ್ದೆ ,ತುಳು ಪಾಡ್ದನ ಸ್ಪರ್ಧೆ , ತುಳು ರಸಪ್ರಶ್ನೆ ,ತುಳು ಭಾಷಣ ,ಜಾನಪದ ಸ್ಪರ್ಧೆ ಸೇರಿದಂತೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸಮಾರೋಪ
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಹಿಸುವರು.ಸಾಮಾಜಿಕ ಮುಂದಾಳು ಸುಬ್ರಾಯ ಗೌಡ ಮಾಡಾವು ಬಹುಮಾನ ವಿತರಿಸುವರು.