ಜು. 5 ರಿಂದ ರಾಘವೇಶ್ವರ ಶ್ರೀ ಚಾತುರ್ಮಾಸ್ಯ | ಭಕ್ತರ ಭೇಟಿಗೆ ಅವಕಾಶ ಇಲ್ಲ

July 2, 2020
4:13 PM

ಬೆಂಗಳೂರು:  ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಯವರ 27 ನೇ ಚಾತುರ್ಮಾಸ್ಯ ಜುಲೈ. 5 ರಿಂದ ಸೆಪ್ಟೆಂಬರ್ 2 ರವರೆಗೆ ಗೋಕರ್ಣದ ಅಶೋಕೆಯಲ್ಲಿ ಶ್ರೀಶಂಕರಾಚಾರ್ಯರು ಮೂಲಮಠ ಸ್ಥಾಪಿಸಿದ ಪರಿಸರದಲ್ಲಿ ನಡೆಯಲಿದೆ.

Advertisement
Advertisement
Advertisement

ಅರಿವಿನ ಹಣತೆ ಹಚ್ಚೋಣ- ವಿದ್ಯಾವಿಶ್ವ ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ವಿದ್ಯಾ ಚಾತುರ್ಮಾಸ್ಯವಾಗಿ ಈ ಬಾರಿಯ ಚಾತುರ್ಮಾಸ್ಯವನ್ನು ಸರ್ಕಾರದ ನೀತಿ ನಿಯಮಗಳ ಚೌಕಟ್ಟಿನಲ್ಲಿ ಆಚರಿಸಲಾಗುತ್ತಿದೆ. ಸಮಗ್ರ ಭಾರತೀಯ ವಿದ್ಯೆಗಳ ಅಧ್ಯಯನದ ಸುಸ್ಥಾನವಾಗಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಹಾಗೂ ಅದಕ್ಕೆ ಪೀಠಿಕೆಯಾಗಿ ಮೂಡಿ ಬರುತ್ತಿರುವ ಅಪೂರ್ವ ಗುರುಕುಲಗಳ ಕಾರ್ಯ ಈ ಬಾರಿಯ ಚಾತುರ್ಮಾಸ್ಯದ ಜೀವನಾಡಿಯಾಗಲಿದೆ.

Advertisement

ಅಶೋಕಾವನದ ಶ್ರೀ ಮಲ್ಲಿಕಾರ್ಜುನದೇವರ ಸನ್ನಿಧಿಯಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪ್ರತಿದಿನ ಗಣಹೋಮ, ರಾಮತಾರಕ ಹವನ ಮತ್ತು ರುದ್ರಹವನ ನಡೆಯಲಿದೆ.

ಸುರಕ್ಷೆಗೆ ಕ್ರಮ: ಕೋವಿಡ್-19 ಸಾಂಕ್ರಾಮಿಕದಿಂದ ಇಡೀ ವಿಶ್ವ ತತ್ತರಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚಾತುರ್ಮಾಸ್ಯ ವ್ರತಾಚರಣೆಯನ್ನು ಭಿನ್ನವಾಗಿ ಆಯೋಜಿಸಲಾಗಿದ್ದು, ಗುರು- ಶಿಷ್ಯರ ಸುರಕ್ಷೆ ದೃಷ್ಟಿಯಿಂದ ಭಿಕ್ಷಾಸೇವೆ ಹಾಗೂ ಪಾದಪೂಜೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಸರ್ಕಾರ ಸೂಚಿಸಿದ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತದೆ.

Advertisement

ಚಾತುರ್ಮಾಸ್ಯ ವ್ರತಾರಂಭದ ದಿನ ನಡೆಯುವ ವ್ಯಾಸಪೂಜೆಗೆ ಸಮಿತಿಯಿಂದ ಅಧಿಕೃತ ಪತ್ರ ನೀಡಿದವರಿಗೆ ಮಾತ್ರ ಅವಕಾಶವಿದ್ದು, ಪಾದಪೂಜೆ ಸಾಮೂಹಿಕವಾಗಿ ನಡೆಯಲಿದೆ. ಶ್ರೀಸವಾರಿಯ ಸ್ಥಳಕ್ಕೆ ಯಾರಿಗೂ ಪ್ರವೇಶ ಇರುವುದಿಲ್ಲ. ವ್ಯಾಸಪೂಜೆ ಹಾಗೂ ದಿನನಿತ್ಯದ ಶ್ರೀಕರಾರ್ಚಿತ ಪೂಜೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಲಾಗುವುದು.

ಯಾರಿಗೂ ಶ್ರೀಕರಗಳಿಂದ ತೀರ್ಥ, ಮಂತ್ರಾಕ್ಷತೆ ಇರುವುದಿಲ್ಲ. ವೈಯಕ್ತಿಕ ಭೇಟಿ ಹಾಗೂ ನಿವೇದನೆಗೆ ಅವಕಾಶವಿಲ್ಲ. ಭಕ್ತರು ಆನ್‍ಲೈನ್ ಸೇವೆಗಳನ್ನು ಮಾಡಿಸಲು ಅವಕಾಶವಿರುತ್ತದೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮತ್ತು ಕಾರ್ಯದರ್ಶಿ ಪಿದಮಲೆ ನಾಗರಾಜ್ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ. ವಿವರಗಳಿಗೆ ಮೊಬೈಲ್: 9448007828 ಸಂಪರ್ಕಿಸಬಹುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ಭಕ್ತರ ಗಡಣ | ಭಕ್ತರಿಂದ ಅಲಂಕಾರ ಸೇವೆ
January 1, 2025
9:22 PM
by: ದ ರೂರಲ್ ಮಿರರ್.ಕಾಂ
ನಾಳೆ ಪ್ರಾತಃಕಾಲ 6:57ರ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ
December 6, 2024
7:27 PM
by: ದ ರೂರಲ್ ಮಿರರ್.ಕಾಂ
ಶಬರಿಮಲೆಯತ್ತ ಯಾತ್ರಾರ್ಥಿಗಳು | ಮುಂದುವರಿದ ಜನಸಂದಣಿ |
December 1, 2024
9:13 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror