ಜು.5 : 11 ಭಾಷೆಗಳಲ್ಲಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವ’

July 4, 2020
8:49 PM

ಮಂಗಳೂರು: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ 11 ಭಾಷೆಗಳಲ್ಲಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವ ಜು.5 ರಂದು ಸಾಯಂಕಾಲ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದ ಪ್ರಸಾರ ಮಾಡಲಾಗುವುದು ಎಂದು ಸನಾತನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement

ಭಾರತೀಯ ಸಂಸ್ಕೃತಿಯಲ್ಲಿ ‘ಗುರು-ಶಿಷ್ಯ ಪರಂಪರೆಯು ಹಿಂದೂ ಧರ್ಮವು ನೀಡಿದ ಅದ್ವಿತೀಯ ಕೊಡುಗೆಯಾಗಿದೆ. ರಾಷ್ಟ್ರ ಮತ್ತು ಧರ್ಮವು ಸಂಕಟದಲ್ಲಿರುವಾಗ ಇದೇ ‘ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದೆ. ಗುರುಪೂರ್ಣಿಮೆಯ ನಿಮಿತ್ತ ಈ ಶ್ರೇಷ್ಠ ಗುರು-ಶಿಷ್ಯ ಪರಂಪರೆಯ ಸ್ಮರಣೆ ಮಾಡುವುದು ಆವಶ್ಯಕವಾಗಿದೆ. ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕೆಂದು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಪ್ರತಿವರ್ಷ ದೇಶಾದ್ಯಂತ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ 5 ಜುಲೈ 2020 ಈ ಗುರುಪೂರ್ಣಿಮೆಯಂದು ನಡೆಸಲಾಗುತ್ತಿದೆ. ಆದರೆ ಸರಕಾರದ ನಿರ್ದೇಶನದಂತೆ ‘ಆನ್‌ಲೈನ್ ಮಾಧ್ಯಮದಿಂದ ಆಚರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ, ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಪಂಜಾಬಿ, ಬಂಗಾಲಿ, ಉಡಿಯಾ, ತೆಲುಗು, ತಮಿಳು ಮತ್ತು ಮಲ್ಯಾಳಂ ಈ 11 ಭಾಷೆಗಳಲ್ಲಿ ಜುಲೈ 5 ರ ಸಾಯಂಕಾಲ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದ ಪ್ರಸಾರ ಮಾಡಲಾಗುವುದು. ಮಹೋತ್ಸವದಲ್ಲಿ ಶ್ರೀವ್ಯಾಸಪೂಜೆ, ಶ್ರೀಗುರುಪೂಜೆ, ಸಾಧನೆಯ ಬಗ್ಗೆ  ಮಾರ್ಗದರ್ಶನವಿರಲಿದೆ.  FaceBook ಅಥವಾ YouTube ಮೂಲಕ ಅದನ್ನು ನೋಡಬಹುದು.

1. www.FB.com/HJSBengaluru
2. www.Youtube.com/HJSKarnataka

Advertisement

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?
August 13, 2025
2:02 PM
by: ಸಾಯಿಶೇಖರ್ ಕರಿಕಳ
ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು
August 13, 2025
7:38 AM
by: The Rural Mirror ಸುದ್ದಿಜಾಲ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
August 13, 2025
7:26 AM
by: The Rural Mirror ಸುದ್ದಿಜಾಲ
ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….
August 13, 2025
7:15 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group