ಮಂಗಳೂರು: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ 11 ಭಾಷೆಗಳಲ್ಲಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವ ಜು.5 ರಂದು ಸಾಯಂಕಾಲ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದ ಪ್ರಸಾರ ಮಾಡಲಾಗುವುದು ಎಂದು ಸನಾತನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಭಾರತೀಯ ಸಂಸ್ಕೃತಿಯಲ್ಲಿ ‘ಗುರು-ಶಿಷ್ಯ ಪರಂಪರೆಯು ಹಿಂದೂ ಧರ್ಮವು ನೀಡಿದ ಅದ್ವಿತೀಯ ಕೊಡುಗೆಯಾಗಿದೆ. ರಾಷ್ಟ್ರ ಮತ್ತು ಧರ್ಮವು ಸಂಕಟದಲ್ಲಿರುವಾಗ ಇದೇ ‘ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದೆ. ಗುರುಪೂರ್ಣಿಮೆಯ ನಿಮಿತ್ತ ಈ ಶ್ರೇಷ್ಠ ಗುರು-ಶಿಷ್ಯ ಪರಂಪರೆಯ ಸ್ಮರಣೆ ಮಾಡುವುದು ಆವಶ್ಯಕವಾಗಿದೆ. ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕೆಂದು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಪ್ರತಿವರ್ಷ ದೇಶಾದ್ಯಂತ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ 5 ಜುಲೈ 2020 ಈ ಗುರುಪೂರ್ಣಿಮೆಯಂದು ನಡೆಸಲಾಗುತ್ತಿದೆ. ಆದರೆ ಸರಕಾರದ ನಿರ್ದೇಶನದಂತೆ ‘ಆನ್‌ಲೈನ್ ಮಾಧ್ಯಮದಿಂದ ಆಚರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ, ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಪಂಜಾಬಿ, ಬಂಗಾಲಿ, ಉಡಿಯಾ, ತೆಲುಗು, ತಮಿಳು ಮತ್ತು ಮಲ್ಯಾಳಂ ಈ 11 ಭಾಷೆಗಳಲ್ಲಿ ಜುಲೈ 5 ರ ಸಾಯಂಕಾಲ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದ ಪ್ರಸಾರ ಮಾಡಲಾಗುವುದು. ಮಹೋತ್ಸವದಲ್ಲಿ ಶ್ರೀವ್ಯಾಸಪೂಜೆ, ಶ್ರೀಗುರುಪೂಜೆ, ಸಾಧನೆಯ ಬಗ್ಗೆ ಮಾರ್ಗದರ್ಶನವಿರಲಿದೆ. FaceBook ಅಥವಾ YouTube ಮೂಲಕ ಅದನ್ನು ನೋಡಬಹುದು.
1. www.FB.com/HJSBengaluru
2. www.Youtube.com/HJSKarnataka
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…