ಸುಳ್ಯ: ಬಹುನಿರೀಕ್ಷಿತ ಅರೆಭಾಷೆ ಕಿರಿಚಿತ್ರ ” ಬೌಂಡರಿಲೈನ್” ಬಿಡುಗಡೆಯ ಸಮಾರಂಭ ಜೂನ್ 15 ರಂದು ಸಂಜೆ ಸುಳ್ಯದ ಸಿಎ ಬ್ಯಾಂಕ್ ಹಾಲ್ ನಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುನಿರೀಕ್ಷಿತ ಚಿತ್ರ, ಭಾಸುಮ ಕೊಡಗು ನಿರ್ದೇಶಿಸಿರುವ , ರಾಜರಾಮ್ ದೇಂಗೋಡಿ ಅವರ ಸುಮಧುರ ಸಂಗೀತವುಳ್ಳ , ಉಜಿತ್ ಶ್ಯಾಮ್ ಚಿಕ್ಮುಳಿ ನಾಯಕ ನಟನಾಗಿ ನಟಿಸಿರುವ ಚಿತ್ರ “ಬೌಂಡರಿಲೈನ್” ಬಿಡುಗಡೆಯ ಹಂತದಲ್ಲಿದೆ. ಜೂನ್ 15 ರಂದು ಸಂಜೆ ಸುಳ್ಯದ ಸಿಎ ಬ್ಯಾಂಕ್ ಹಾಲ್ ನಲ್ಲಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌಡ ಯುವ ಸೇವಾಸಂಘದ ಅಧ್ಯಕ್ಷ ಮೋಹನರಾಂ ಸುಳ್ಳಿ ಮೊದಲಾದವರು ಭಾಗವಹಿಸುವರು.
ಬೌಂಡರಿಲೈನ್ ಚಿತ್ರ ತಂಡದಲ್ಲಿ ಉಜಿತ್ ಶ್ಯಾಮ್ ಚಿಕ್ಮುಳಿ, ಧನುಷ್ ಕೇರ್ಪಳ, ಶಮಂತ್ ಕೆದಂಬಾಡಿ, ಹ್ರತಿಕ್ ಮಾಣಿಬೆಟ್ಟು, ಕಿರಣ್ ಸಿ.ಸಿ, ಯಜ್ಞೇಶ್ ಹೆಗ್ಡೆ , ಕುಶ್ವಿತ್, ಪ್ರಣಮ್, ಶರಣ್ ಮೊದಲಾದವರು ಇದ್ದಾರೆ.