ಜೂ.8 ರಿಂದ ಭಕ್ತರಿಗೆ ಬಾಗಿಲು ತೆರೆಯುವ ದೇಗುಲ | ದೇಗುಲಗಳಲ್ಲಿ ಇನ್ನು ಎಲ್ಲರಿಗೂ ಹೆಚ್ಚು”ಶುದ್ಧಾಚಾರ”

June 7, 2020
3:45 PM

ಕೊರೊನಾ ಲಾಕ್ಡೌನ್ ನಂತರ ಇದೀಗ ಜೂ.8 ರಿಂದ ದೇವಸ್ಥಾನಗಳ ಬಾಗಿಲು ಭಕ್ತರಿಗೆ ತೆರೆಯುತ್ತಿದೆ. ಇದುವರೆಗೆ ಅರ್ಚಕರು ಹಾಗೂ ಅಗತ್ಯ ಸಿಬಂದಿಗಳು ದೇವಸ್ಥಾನದಲ್ಲಿ  ಪೂಜೆ ಸಹಿತ ಇತರ ತುರ್ತು ಕಾರ್ಯ ಮಾಡುತ್ತಿದ್ದರು. ಜೂ.8 ರಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ದೇವಸ್ಥಾನದ ವಠಾರದಲ್ಲಿ ಇನ್ನೂ ಹೆಚ್ಚು “ಶುದ್ಧಾಚಾರ”ದಿಂದ   ಎಲ್ಲಾ ಭಕ್ತಾದಿಗಳು ಇರಲೇಬೇಕಾಗಿದೆ. ಆಡಳಿತದಿಂದ ತೀರ್ಥಪ್ರಸಾದ ನೀಡುವುದು, ದೇವರಿಗೆ ಅಡ್ಡ ಬೀಳುವುದಕ್ಕೆ ಅವಕಾಶ ನಿರಾಕರಿಸಲಾಗಿದೆ. 

Advertisement
Advertisement

 

Advertisement

ಕೊರೊನಾ ಲಾಕ್ಡೌನ್ ನಂತರ ಜೂ.8 ರಿಂದ ರಾಜ್ಯದ ಪ್ರಸಿದ್ಧ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಸಹಿತ ವಿವಿಧ ದೇಗುಲಗಳು ಭಕ್ತರ ಪ್ರವೇಶಕ್ಕೆ ಬಾಗಿಲು ತೆರೆಯುತ್ತದೆ. ಆದರ ಸರಕಾರ ಕೆಲವೊಂದು ಕಡ್ಡಾಯ ನಿಯಮ ಪಾಲಿಸಲು ಸೂಚಿಸಿದೆ. ಕೊರೊನಾ ಹರಡಂತೆ ಮುಂಜಾಗ್ರತಾ ಕ್ರಮ ವಹಿಸಿದೆ.

ಕುಕ್ಕೆ ಸುಬ್ರಹ್ಮಣ್ಯದ ಭಕ್ತರ ಪ್ರವೇಶಕ್ಕೆ ವಿವಿಧ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ. ಅದರಲ್ಲಿ  ಪ್ರಮುಖವಾಗಿ ಬೆಳಗ್ಗೆ 8.30 ಕ್ಕೆ ದೇವಸ್ಥಾನ ಭಕ್ತಾದಿಗಳಿಗೆ ಬಾಗಿಲು ತೆರೆದರೆ ಸಂಜೆ 5.30 ರ ವರೆಗೆ ಮಾತ್ರವೇ ದೇವರ ದರ್ಶನಕ್ಕೆ ಅವಕಾಶ ಇದೆ. ಜೂ.30 ರವರೆಗೆ ದೇವಸ್ಥಾನ ವಸತಿ ಗೃಹಗಳಲ್ಲಿ  ಕೊಠಡಿ ವ್ಯವಸ್ಥೆ ಇರುವುದಿಲ್ಲ.  ದೇವಸ್ಥಾನ ಪ್ರವೇಶಕ್ಕೆ ಮುನ್ನ ಕಡ್ಡಾಯವಾಗಿ ಜ್ವರ ಪರೀಕ್ಷೆ, ಸ್ಯಾನಿಟೈಸರ್ ಬಳಕೆ ಇರುತ್ತದೆ.  ಶೀತ, ಜ್ವರ ಇದ್ದವರಿಗೆ ಕಡ್ಡಾಯವಾಗಿ ಪ್ರವೇಶ ಇರುವುದಿಲ್ಲ, 65 ವರ್ಷ ಮೇಲ್ಪಟ್ಟ, 10 ವರ್ಷದ ಕೆಳಗಿನವರಿಗೆ, ಗರ್ಭಿಣಿಯರು ದೇವರ ದರ್ಶನ ಸದ್ಯಕ್ಕೆ ಮುಂದೂಡಬೇಕಾಗುತ್ತದೆ.  ತೀರ್ಥ-ಗಂಧ, ಮಂಗಳಾರತಿ, ಪ್ರಸಾದ, ಅನ್ನಪ್ರಸಾದ ಇರುವುದಿಲ್ಲ. ಕೇವಲ ದೇವರ ದರ್ಶನ ಮಾಡಿ ಬರಬಹುದಾಗಿದೆ. ಒಳಗಡೆ ಕಡ್ಡಾಯವಾಗಿ ಸಾಮಾಜಿಕ ಅಂತರ, ಮುಖವಸ್ತ್ರ ಇರಲೇಬೇಕು.  ಅಡ್ಡಬೀಳುವುದು ಹಾಗೂ ಕೂರುವುದಕ್ಕೆ ಅವಕಾಶ ಇಲ್ಲ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ದಂಡು | ರಾಮನ ದರ್ಶನ ಪಡೆದ 1.5 ಕೋಟಿ ಜನ – ಚಂಪತ್‌ ರಾಯ್‌
April 22, 2024
5:17 PM
by: The Rural Mirror ಸುದ್ದಿಜಾಲ
’ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಮೇ 6 ರಂದು ಸಂಕಲ್ಪ ಆರಂಭ |
April 22, 2024
1:28 PM
by: ದ ರೂರಲ್ ಮಿರರ್.ಕಾಂ
500 ವರ್ಷದ ಬಳಿಕ ಅಯೋಧ್ಯೆಯಲ್ಲಿ ರಾಮನವಮಿ | ಬಾಲ ರಾಮನನ್ನು ಸ್ಪರ್ಶಿಸಿದ ಸೂರ್ಯ ತಿಲಕ | ರಾಮನನ್ನು ನೋಡಲು ಬರುತ್ತಿದೆ ಭಕ್ತರ ದಂಡು |
April 17, 2024
2:45 PM
by: The Rural Mirror ಸುದ್ದಿಜಾಲ
ಅಯೋಧ್ಯೆ ಬಾಲರಾಮನಿಗೆ ಮೊದಲ ರಾಮನವಮಿ | 19 ಗಂಟೆ ಭಕ್ತರಿಗೆ ದರ್ಶನ ಭಾಗ್ಯ, VIP ಗಳಿಗೆ ನೋ ಎಂಟ್ರಿ | ದೂರದರ್ಶನದಲ್ಲಿ ರಾಮ ನವಮಿ ಆಚರಣೆಯ ನೇರಪ್ರಸಾರ |
April 16, 2024
2:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror