ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿಯ ನೂತನ ಅಧ್ಯಕ್ಷರಾಗಿ ಜೇಸೀ ದೇವರಾಜ್ ಕುದ್ಪಾಜೆಯವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಘಟಕದ ನಿಕಟಪೂರ್ವ ಅಧ್ಯಕ್ಷರಾಗಿ ಜೇಸೀ ತೀರ್ಥವರ್ಣ ಬಳ್ಳಡ್ಕ, ಜೇಸೀ ಕಾರ್ಯದರ್ಶಿಯಾಗಿ ಜೇಸೀ ಚೇತನ್ ಅಮೆಮನೆ, ಘಟಕ ಉಪಾಧ್ಯಕ್ಷರಾಗಿ ಜೇಸೀ ಅಭಿಜ್ಞಾ ಬೊಮ್ಮೆಟ್ಟಿ, ವ್ಯವಹಾರ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ಬಶೀರ್ ಯು.ಪಿ., ವ್ಯಕ್ತಿತ್ವ ವಿಕಸನ ಉಪಾಧ್ಯಕ್ಷರಾಗಿ ಜೇಸೀ ಶುೃತಿ ತೀರ್ಥವರ್ಣ ಬಳ್ಳಡ್ಕ, ಸಾರ್ವಜನಿಕ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ರವಿ ಬೊಮ್ಮೆಟ್ಟಿ, ಕಮ್ಯುನಿಟಿ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ದಿವ್ಯಾ ಚೇತನ್ ಅಮೆಮನೆ ಆಯ್ಕೆಯಾದರು.
ನೂತನ ಜೇಸಿರೆಟ್ ಅಧ್ಯಕ್ಷೆಯಾಗಿ ಚೈತನ್ಯ ದೇವರಾಜ್ ಕುದ್ಪಾಜೆ, ಖಜಾಂಜಿಯಾಗಿ ಜೇಸೀ ಶೋಭಾ ಅಶೋಕ್ ಚೂಂತಾರು, ಜೊತೆ ಕಾರ್ಯದರ್ಶಿಯಾಗಿ ಜೇಸೀ ದೀಕ್ಷಿತ್ ಪಾನತ್ತಿಲ, ಜೇಸೀ ಸಪ್ತಾಹ ನಿರ್ದೇಶಕರಾಗಿ ಜೇಸೀ ರಂಜಿತ್ ಕುಕ್ಕೆಟ್ಟಿ, ಯುವಜೇಸೀ ನಿರ್ದೇಶಕರಾಗಿ ಜೇಸೀ ಗುರುರಾಜ್ ಅಜ್ಜಾವರ, ಘಟಕದ ನಿರ್ದೇಶಕರಾಗಿ ಜೇಸೀ ಚಂದ್ರಶೇಖರ ಕನಕಮಜಲು, ಪಯಸ್ವಿನಿ ಘಟಕದ ಗೃಹ ಪತ್ರಿಕೆಯ ಸಂಪಾದಕರಾಗಿ ಜೇಸೀ ಮರಿಯಾಜ್ಯೋತಿ, ಕಮ್ಯುನಿಟಿ ನಿರ್ದೇಶಕರಾಗಿ ಜೇಸೀ ಯೋಗೀಶ್ ಚೂಂತಾರು ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷ ಜೇಸೀ ಅಬ್ದುಲ್ಲ ಎ. ಇವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಪೂರ್ವಾಧ್ಯಕ್ಷ ಜೇಸಿಐ ಸೆನೆಟರ್ ಎಂ.ಬಿ. ಸದಾಶಿವ, ಜೇಸೀ ಜಯಪ್ರಕಾಶ್ ಕಾನತ್ತಿಲ, ಜೇಸೀ ದಿನೇಶ್ ಅಂಬೆಕಲ್ಲು, ಜೇಸೀ ಸೀತಾರಾಮ ಕೇವಳ, ಜೇಸೀ ದೇವಿಪ್ರಸಾದ್ ಕುದ್ಪಾಜೆ ಭಾಗವಹಿಸಿದ್ದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.