ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಆತಿಥ್ಯದಲ್ಲಿ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವಲಯ ಯುವ ಜೇಸಿ ತರಬೇತಿ ಕಮ್ಮಟ `ಬೋರ್ನ್ ಟು ಬ್ಲೋಸಂ 2020′ ಕಾರ್ಯಾಗಾರ ಸುಳ್ಯ ಪರಿವಾರಕಾನದಲ್ಲಿ ಜರುಗಿತು. ಕಾರ್ಯಾಗಾರವನ್ನು ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಉದ್ಘಾಟಿಸಿದರು. ಜೇಸೀಯಂತಹ ವ್ಯಕ್ತಿತ್ವ ವಿಕಸನ ಸಂಸ್ಥೆಯಲ್ಲಿ ಯುವ ಜನಾಂಗ ತಮ್ಮನ್ನು ತಾವು ತೊಡಗಿಸಿಕೊಂಡಾಗ ಭವಿಷ್ಯದಲ್ಲಿ ಪರಿಪೂರ್ಣ ನಾಯಕರಾಗಿ ಮೂಡಿಬರಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕೆ. ಆರ್. ಗಂಗಾಧರ ಮಾತನಾಡಿ `ದುಶ್ಚಟಗಳಿಂದ ದೂರವಿದ್ದು ಮಾದರಿ ಜೀವನವನ್ನು ನಡೆಸಿಕೊಂಡು, ಹಿರಿಯರನ್ನು ಗೌರವಿಸುವ ಮನೋಭಾವದ ಯುವ ಮನಸ್ಸು ಮುಂದಿನ ತಲೆಮಾರಿನ ದೊಡ್ಡ ಆಸ್ತಿ ಎಂದರು. ಜೇಸೀಐ ಮಾಜಿ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ ನಾಯರ್, ನಿಕಟಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರು, ಪ್ರಾಂತ್ಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ, ಯುವ ಜೇಸಿ ತರಬೇತಿ ಕಮ್ಮಟದ ಮುಖ್ಯ ತರಬೇತುದಾರ ಸತೀಶ್ ಭಟ್ ಬಿಳಿನೆಲೆ ಮತ್ತು ಜೇಸೀ ರಾಷ್ಟ್ರ ತರಬೇತುದಾರರಾದ ರಾಜೇಶ್ವರಿ ಡಿ. ಶೆಟ್ಟಿಯವರು ಉಪಸ್ಥಿತರಿದ್ದರು.
ವಲಯ ಯುವ ಜೇಸೀ ನಿರ್ದೇಶಕ ಮರಿಯಪ್ಪ ಸಭಾಧ್ಯಕ್ಷತೆ ವಹಿಸಿದ್ದರು. ಸುಳ್ಯ ಪಯಸ್ವಿನಿ ಜೇಸಿ ಅಧ್ಯಕ್ಷ ದೇವರಾಜ್ ಕುದ್ಪಾಜೆ, ಸಂಯೋಜಕ ಗುರುರಾಜ್ ಅಜ್ಜಾವರ, ಜೇಸೀರೆಟ್ ಅಧ್ಯಕ್ಷೆ ಚೈತನ್ಯ ದೇವರಾಜ್, ಯುವ ಜೇಸಿ ಅಧ್ಯಕ್ಷ ಚಿತ್ತಾರ ಬಂಟ್ವಾಳ್ ಮತ್ತು ಕಾರ್ಯದರ್ಶಿ ಚೇತನ ಅಮೆಮನೆ ಉಪಸ್ಥಿತರಿದ್ದರು.