ಜ. 18: ಸವಣೂರು ಗ್ರಾಮ ಪಂಚಾಯತ್‌ನ ನೂತನ ಸಭಾಂಗಣ ಕುಮಾರಧಾರ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

January 15, 2020
4:33 PM

ಸವಣೂರು: ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಕಚೇರಿ ಕಟ್ಟಡ ‘ಅಟಲ್ ಸೌಧ’ದಲ್ಲಿ ನಿರ್ಮಾಣಗೊಂಡ ನೂತನ ಸಭಾಂಗಣ ‘ಕುಮಾರಧಾರ’ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮರಂಭವು ಜ. 18 ರಂದು ನಡೆಯಲಿದ್ದು, ಸಭಾ ಕಾರ್‍ಯಕ್ರಮವು ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ನಡೆಯಲಿದೆ.

Advertisement
Advertisement
Advertisement

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿರವರು ದೀಪ ಪ್ರಜ್ವಲನೆಯನ್ನು ಮಾಡಲಿದ್ದಾರೆ. ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆರವರು ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

ಸಂಸದ ನಳಿನ್ ಕುಮಾರ್ ಕಟೀಲ್‌ರವರು ಸಭಾಂಗಣದ ಉದ್ಘಾಟನೆ ಮಾಡಲಿದ್ದಾರೆ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ಪಾಲ್ತಾಡಿ ಗ್ರಾಮದ ಮಂಜುನಾಥನಗರದಲ್ಲಿ ಸೋಲಾರ್ ದೀಪ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿರವರು ಸವಣೂರು ಸಿ.ಎ.ಬ್ಯಾಂಕ್ ಮುಂಭಾಗದಲ್ಲಿರುವ ಪ್ರಯಾಣಿಕರ ಬಸ್ ತಂಗುದಾಣದ ಉದ್ಘಾಟನೆ ಮಾಡಲಿದ್ದಾರೆ. ಸುಳ್ಯ ಶಾಸಕ ಎಸ್. ಅಂಗಾರರವರು ಕುಮಾರಮಂಗಲದಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮತ್ತು ಪಂಚಪದ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಅಂಕತಡ್ಕ ಅಂಗನವಾಡಿ ಕೇಂದ್ರದ ಉದ್ಘಾಟನೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರುಗಳಾದ ಭೋಜೇ ಗೌಡ, ಐವನ್ ಡಿಸೋಜ, ಆಯನೂರು ಮಂಜುನಾಥ್, ಕೆ.ಹರೀಶ್ ಕುಮಾರ್, ಬಿ.ಎಂ.ಫಾರೂಕ್‌ರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತಾ.ಪಂ, ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ರವರು ಸವಣೂರು ಮುಖ್ಯ ಪೇಟೆಯಲ್ಲಿರುವ ಪ್ರಯಾಣಿಕರ ಬಸ್ ತಂಗುದಾಣವನ್ನು ಉದ್ಘಾಟಿಸಲಿದ್ದಾರೆ. ಜಿ.ಪಂ, ಸದಸ್ಯೆ ಪ್ರಮೀಳಾ ಜನಾರ್ಧನ್‌ರವರು ಮಾಂತೂರು ಬಳಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಉದ್ಘಾಟಿಸಲಿದ್ದಾರೆ. ತಾ.ಪಂ,ಉಪಾಧ್ಯಕ್ಷೆ ಲಲಿತಾ ಈಶ್ವರ್, ಸದಸ್ಯೆ ರಾಜೇಶ್ವರಿ, ಗ್ರಾ.ಪಂ,ಉಪಾಧ್ಯಕ್ಷ ರವಿಕುಮಾರ್, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಸಿ.ಎ,ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ತಾ.ಪಂ,ಕಾರ್ರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಉಪವಿಭಾಗದ ಸಹಾಯಕ ಕಾರ್ರ್ಯನಿರ್ವಾಹಕ ಅಭಿಯಂತರು ಪಂಚಾಯತ್‌ರಾಜ್ ಇಂಜಿನಿಯರ್ ಸತ್ಯೇಂದ್ರ ಸಾಲಿಯಾನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಗ್ರಾ.ಪಂ, ವ್ಯಾಪ್ತಿಯ ಶಾಲಾ ಆವರಣ ಗೋಡೆ, ಗ್ರಾ.ಪಂ, ವ್ಯಾಪ್ತಿಯ ಸೋಲಾರ್ ದೀಪಗಳು, ಗ್ರಾ.ಪಂ, ವ್ಯಾಪ್ತಿಯ ಸಿ.ಸಿ ರಸ್ತೆಗಳು ಹಾಗೂ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದಲ್ಲಿ ನಿವೇಶನ ಹಂಚಿಕೆಯು ನಡೆಯಲಿದೆ ಎಂದು ಸವಣೂರು ಗ್ರಾ.ಪಂ, ಅಧ್ಯಕ್ಷೆ ಇಂದಿರಾ ಬಿ.ಕೆ, ಉಪಾಧ್ಯಕ್ಷ ಬಿ.ಕೆ, ರವಿಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ ಹಾಗೂ ಲೆಕ್ಕ ಸಹಾಯಕ ಮನ್ಮಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವಿಜ್ಞಾನ, ವಿಷಮುಕ್ತ ಕೃಷಿ ಹಾಗೂ ಗ್ರಾಮೋದ್ಯೋಗ ಆಧಾರಿತ ಸ್ವಾವಲಂಬಿ ಗ್ರಾಮ ನಿರ್ಮಾಣದ ಮಹಾ ಶಿಬಿರ
March 20, 2024
4:04 PM
by: The Rural Mirror ಸುದ್ದಿಜಾಲ
ಅರ್ಥಿಕ ಬೆಳೆಯಾಗಿ ಬಿದಿರು | ಬಿದಿರು ಬೆಳೆಸುವ ಕುರಿತು ವಿಚಾರ ವಿನಿಮಯ ಸಭೆ
March 18, 2024
2:05 PM
by: The Rural Mirror ಸುದ್ದಿಜಾಲ
ನಿಮಗೆ ಹಾಲು ಕರೆಯಲು ಬರುತ್ತಾ..? ಹಾಗಾದ್ರೆ ಹಾಲು ಕರೆಯಿರಿ, ಭರ್ಜರಿ ಬಹುಮಾನ ಗೆಲ್ಲಿರಿ..
February 10, 2024
12:18 PM
by: The Rural Mirror ಸುದ್ದಿಜಾಲ
ಲಾಲ್‌ಬಾಗ್‌ ಫ್ಲವರ್‌ ಶೋ | ಪ್ರವಾಸಿಗರನ್ನು ಕೈಬೀಸಿ ಕರೆದ ಸಸ್ಯಕಾಶಿ : ಭರ್ಜರಿ ರೆಸ್ಪಾನ್ಸ್, ಕೋಟಿ ಮೀರಿದ ಆದಾಯ
January 27, 2024
11:51 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror