ಟಿಕ್ ಟಿಕ್ ಹೇಳುತಿದೆ ಅಲಾರಾಂ…

October 10, 2019
12:00 PM

ಅಲಾರಾಂಗೂ  ವಿದ್ಯಾರ್ಥಿ ಜೀವನಕ್ಕೂ ಹತ್ತಿರದ ನಂಟು. ಬೇಗನೆ ಎದ್ದು ಓದಿದರೆ ಚೆನ್ನಾಗಿ ಅರ್ಥವಾಗುತ್ತದೆ. ೫ ಗಂಟೆಗೆ ಎದ್ದು ಓದಲು ಶುರು‌ ಮಾಡ ಬೇಕು ಎಂದು ಗುರುಹಿರಿಯರ ಹಿತವಚನ. ಅದನ್ನು ಆದಷ್ಟು ‌ಪಾಲಿಸುವುದು ಕಿರಿಯರ ಕರ್ತವ್ಯ.

Advertisement
Advertisement
Advertisement
Advertisement
 ಹೀಗೆ ಬೆಳಗ್ಗೆ ಬೇಗ ಯಾವಾಗಲೂ ಎಬ್ಬಿಸಲು‌ ಅಪ್ಪ‌ ಅಥವಾ ಅ‌ಮ್ಮನಿಗೆ ಜವಾಬ್ದಾರಿ ಒಪ್ಪಿಸಿ ಮಕ್ಕಳು ಸುಖವಾಗಿ ಮಲಗುತ್ತಾರೆ . ಮಕ್ಕಳನ್ನು ಓದಲು‌ ಎಬ್ಬಿಸ ಬೇಕೆಂದು ರಾತ್ರಿ ಇಡಿ ನಿದ್ದೆ ಮಾಡದೆ ಗಂಟೆ ನೋಡುವುದೇ ಪಾಲಕರ ಕೆಲಸವಾಗಿ ಬಿಡುತ್ತದೆ. ಅದಕ್ಕೊಂದು ಉಪಾಯವನ್ನು ಹೆತ್ತವರು ಮಾಡಿ ಬಿಟ್ಟರು. ಮನೆಗೊಂದು ಅಲಾರಾಂ ತಂದರಾಯಿತಲ್ಲ. ಹಾಗೆ ಗಂಟೆಗೆ ೫ ನಿಮಿಷ ಮೊದಲೇ ಅಲಾರಾಂ ಇಟ್ಟು ಮಲಗಲಾರಂಭಿಸಿದರೆ ಮೊದಲೆರಡು ದಿನ ನಿದ್ದೆಯೇ ಹತ್ತಿರ ಸುಳಿಯದು. ಹಲವು ದಿನಗಳ ಸುಸ್ತು ಹೈರಾಣಾಗಿಸಿ ನಿದ್ದೆ  ಹೋದ ಹೆತ್ತವರಿಗೆ ಅಲಾರಾಂ ಹೊಡೆದಾಗ ನಿದ್ದೆಯ ಮಂಪರಿನಲ್ಲಿ ಏನೆಂದು ತಿಳಿಯದೆ ಗಾಬರಿ ಯಾದದ್ದು ಇದೆ. ಓಹ್ ಇದು ಅಲಾರಾಂ ಹೊಡೆದದ್ದು ಎಳಲು ಹೊತ್ತಾಯಿತೆಂಬ ಸೂಚನೆ ಎಂದು ಅರ್ಥ ವಾಗಿ ಮಕ್ಕಳನ್ನು ಎಬ್ಬಿಸಲು ದೌಡ್. ಮನೆಯಲ್ಲಿ ಹೆತ್ತವರು ಏನೋ ಒಂದು ಉಪಾಯ ‌ ಮಾಡಿ ಮಕ್ಕಳನ್ನು ಓದಲು ಕುಳ್ಳಿರಿಸಿ ಹೆದರಿಕೆಯಾದರೆ ಎಂದು ತಾವು ನಿದ್ದೆ ತೂಗುತ್ತಾ ಪಕ್ಕದಲ್ಲೇ ಕುಳಿತ ನೆನಪುಗಳು ನಿನ್ನೆ ಮೊನ್ನೆ ನಡೆದಂತಿದೆ. ಬಿಸಿ ಬಿಸಿ ಕಾಫಿ , ಟಿ  ಬಿಸ್ಕೆಟ್  ಕೊಟ್ಟು ಹಸಿವು ,ಬಾಯಾರಿಕೆ ,ನಿದ್ದೆ ಕಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಯನ್ನು ಪ್ರೀತಿಯಿಂದ ನಿಭಾಯಿಸುವುದು ಹೆತ್ತವರಿಗೆ ಇಷ್ಟವೇ.
 ಇನ್ನೂ ಹಾಸ್ಟೆಲ್ ಸೇರುವ ಮಕ್ಕಳಿಗೆ ಪ್ರ್ರೀತಿಯ ಉಡುಗೊರೆಗಳಲ್ಲಿ ಒಂದು ಅಲಾರಾಂ ಇರುವ ಗಡಿಯಾರ. ಟೈಂ ಟೇಬಲ್ ಪ್ರಕಾರ ಓದಲು ಗಡಿಯಾರ ಬೇಕೇ ಬೇಕು. ಅದರಲ್ಲಿ ವಿಶೇಷ ಸೌಲಭ್ಯವಾದ ಅಲಾರಾಂ ಇದ್ದರೆ ಮರ್ಯಾದೆ ಸ್ವಲ್ಪ ಜಾಸ್ತಿಯೇ.‌ ಇನ್ನೂ ಕತ್ತಲಲ್ಲೂ ಕಾಣುವ ರೇಡಿಯಂನ್ನು ಮುಳ್ಳುಗಳಲ್ಲಿ ಬಳಸಿದ್ದರೆ ಒಂದು ತೂಕವೇ ಜಾಸ್ತಿ.
ಇನ್ನೂ ಹಾಸ್ಟೆಲ್ ಗಳಲ್ಲಿ  ಸಮಾನ ಮನಸ್ಕರು ರೂಂ ಮೇಟ್ ಆಗಿ ಸಿಕ್ಕಿದರೆ ಸರಿ ಇಲ್ಲವಾದರೆ ಹೇಗೆ ನಿಭಾಯಿಸುವುದು ಎಂದರಿಯದೆ ಕಷ್ಟ ಪಡಬೇಕಾದೀತು . ರೂಮ್ ನಲ್ಲ ಇದ್ದವರೆಲ್ಲಾ ಬೆಳಗ್ಗಯೇ ಓದುವವರಾದರೆ  ತೊಂದರೆ ಇಲ್ಲ. ಆದರೆ ಕೆಲವೊಮ್ಮೆ ರಾತ್ರಿ ೨ ಗಂಟೆಯವರೆಗೆ ಓದಿ ಬೆಳಗ್ಗೆ ೭ ಗಂಟೆಗೆ ಏಳುವವರೂ ಇರುತ್ತಾರೆ. ಒಬ್ಬನ ಅಲಾರಾಂ ಆಫ್ ಆಗುವಾಗ ಇನ್ನೊಬ್ಬಂದು ಆನ್ ಆಗಿ ಬಿಡುತ್ತದೆ. ಹೀಗೆ ಎಷ್ಟು ಹೊತ್ತಿಗೂ ಉರಿಯುವ ಲೈಟು ಅದರೊಂದಿಗೆ ಹೊಗೆಯಾಡುವ ಅಸಮಾಧಾನ.
ಇನ್ನೂ ಸ್ವಲ್ಪ ಹೊಟ್ಟೆಕಿಚ್ಚಿನವರು ಸಿಕ್ಕಿದರಂತೂ ಕೇಳುವುದೇ ಬೇಡ. ಅಲಾರಾಂನ್ನು ಆಫ್ ಮಾಡಿ , ಹೊತ್ತಲ್ಲದ ಹೊತ್ತಿಗೆ ಕೂಗುವಂತೆ ಮಾಡಿ ಖುಷಿ ಪಡುವವರಿಗೇನು ಕಮ್ಮಿಯಿಲ್ಲ.
ವಿದ್ಯಾರ್ಥಿ ಗಳಿಗೆ ಮಾತ್ರ ಅಲ್ಲ, ಉದ್ಯೋಗಸ್ಥರಿಗೆ , ಕೃಷಿಕರಿಗೂ ಅಲಾರಾಂನ ಉಪಯೋಗ ಬಹಳವಿದೆ. ಬೆಳಗ್ಗೆ ಬೇಗ ಎದ್ದು ಅಡುಗೆ ಮನೆಗೆಲಸ ಮಾಡಿ ಹೊರಗೆ ಸರಿಯಾದ ಸಮಯಕ್ಕೆ ಹೊರಡ ಬೇಕಾದರೆ ಒಂದೊಂದು ನಿಮಿಷವೂ ಮುಖ್ಯವೇ. ಒಂದು ದಿನ ಅಲಾರಾಂ ಇಡಲು ಮರೆತು ಹೋದರೆ ಕೆಲಸವೆಲ್ಲಾ ಅಡಿಮೇಲು. ಗಡಿಬಿಡಿಯಲ್ಲಿ ಎನೇನೋ ಎಡವಟ್ಟುಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ತಪ್ಪದು.  ಕೃಷಿಕರಿಗೆ ವಿದ್ಯುತ್ ಪಂಪ್ ನ್ನು ಆನ್ ಮಾಡಲು ಮಧ್ಯ ರಾತ್ರಿಯ ಸಮಯದಲ್ಲಿ ಏಳಬೇಕು.  ಸೀಮಿತ ಸಮಯದ ವಿದ್ಯುತ್ ಪೂರೈಕೆ ಯಿರುವುದರಿಂದ  ಸಮಯಕ್ಕೆ ಸರಿಯಾಗಿ‌ ಪಂಪ್ ಆನ್ ಮಾಡುವುದನ್ನು‌ ಅಲಾರಾಂ ನೆನಪಿಸುತ್ತದೆ. ಹಳ್ಳಿಯಾದರೂ , ಪೇಟೆಯಾದರು ಅಲಾರಾಂ ನ ಉಪಯೋಗ ಸಾರ್ವತ್ರಿಕ.
ಈಗ ಬಿಡಿ ಗಡಿಯಾರದ ಜಾಗದಲ್ಲಿ ಮೊಬೈಲ್ ಬಂದು ಕುಳಿತಿದೆ.  ಗಡಿಯಾರದ ಕೆಲಸ, ಬ್ಯಾಂಕ್ ಕೆಲಸಗಳು,  ಫೋನ್, ಮೆಸೇಜ್, ಕ್ಯಾಮರಾ, ಟಿಕೆಟ್ ಕಾಯ್ದಿರಿಸಲು ಇನ್ನೂ ಹಲವು ಕರಲಸಗಳನ್ನು ನಿಭಾಯಿಸುವುದು. ಇಷ್ಟೆಲ್ಲಾ ಇರಬೇಕಾದರೆ ಅಲಾರಾಂ ಇಲ್ಲದೇ ಇರುವುದೇ.???. ಈಗ ವಾಚ್, ಗಡಿಯಾರ ಎಲ್ಲಾ ಮೂಲೆ ಸೇರುತ್ತಿವೆ, ಆ ಜಾಗವನ್ನು ಗೊತ್ತೇ ಆಗದಂತೆ ಮೊಬೈಲ್ ಆಕ್ರಮಿಸಿಕೊಂಡಿದೆ. ಆದರೆ ಮಲಗುವಾಗ  ಬಳಿಯಲ್ಲಿ ಮೊಬೈಲ್ ಇಟ್ಟು ಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಎನಿದ್ದರೂ ಗಡಿಯಾರ ಮಿತ್ರನೇ ಹಿತವಾದ ಸಂಗಾತಿ.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ
ಸೀತೆ ಪುನೀತೆ | ಅಪೂರ್ಣ ರಾಮಾಯಣ
February 12, 2025
9:44 PM
by: ಡಾ.ಚಂದ್ರಶೇಖರ ದಾಮ್ಲೆ
ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?
February 8, 2025
9:29 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ
February 7, 2025
12:15 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror