ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ತಾಲೂಕುವಾರು ಪದಾಧಿಕಾರಿಗಳ ಸಭೆಯು ಧರ್ಮಸ್ಥಳ ಕ್ಷೇತ್ರದ ವಸಂತ ಮಹಲಿನಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೇಮಾವತಿ ಹೆಗ್ಗಡೆ, ಮಾಣಿಲ ಕ್ಷೇತ್ರದ ಮೋಹನದಾಸ ಈಶ ವಿಠಲ ಸ್ವಾಮೀಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಭಜನಾ ಪರಿಷತ್ ನ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ ವಹಿಸಿದ್ದರು.
‘ಪರಿಷತ್ ನ ಮೂಲಕ ಗ್ರಾಮದ, ಪ್ರಾದೇಶಿಕ ಸುಭಿಕ್ಷೆಯಾಗಬೇಕು. ಜಾತಿ, ಮತ ಭೇದವೆಂಬ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಭಜನಾ ಮಂದಿರಗಳು ಸ್ಥಾಪಿತವಾಗಿದೆ. ಭಜನಾ ಮಂದಿರದ ಆರೋಗ್ಯ ರಕ್ಷಣೆಯನ್ನು ಪರಿಷತ್ ಕಾಪಾಡುವಂತಾಗಬೇಕು. ಪರಿವರ್ತನೆ ಮತ್ತು ಧಾರ್ಮಿಕ ಮೌಲ್ಯದ ಉಳಿವಿಗಾಗಿ ಪ್ರೇರಣೆ ನೀಡಬೇಕು. ಆಧುನೀಕರಣದ ಸ್ವರೂಪವನ್ನು ಭಜನೆಗೆ ನೀಡಿ ಹೊಸತನದ ಭಜನೆಯಿಂದ ಯುವ ಪೀಳಿಗೆಯನ್ನು ಭಜನೆಯೆಡೆಗೆ ಆಕರ್ಷಿಸುವಂತೆ ಮಾಡಬೇಕು. ಯುವ ಪೀಳಿಗೆಯಲ್ಲಿ ಭಕ್ತಿ ಮಾರ್ಗ ಬೆಳೆಯಬೇಕು ಎಂದು ಡಾ.ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನ ನೀಡಿದರು.
‘ಭಜನೆಯ ಅಗಾಧವಾದ ಶಕ್ತಿಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗುವುದು. ಭಜಕರಲ್ಲಿ ಶಿಸ್ತು, ಸಂಯಮ, ಸೌಜನ್ಯದ ಗುಣಗಳಿರಬೇಕು. ಮನ ಹಾಗೂ ಮನೆ ಪರಿವರ್ತನೆಯಾಗಲು ಭಜನೆ ಪೂರಕ ಎಂದು ಮೋಹನದಾಸ ಸ್ವಾಮೀಜಿ ತಿಳಿಸಿದರು.
‘ಸ್ವಯಂ ಇಚ್ಚೆಯಿಂದ ಭಜನೆಯಲ್ಲಿ ಪಾಲ್ಗೊಳ್ಳಬೇಕು. ಪರಿಷತ್ ನ ಮೂಲಕ ಸಾಮಾಜಿಕವಾದ ಸೇವೆಯು ಸಮಾಜಕ್ಕೆ ಅರ್ಪಣೆಯಾಗಲಿ. ದುಶ್ಚಟ ಮುಕ್ತ ಸಮಾಜ ನಿರ್ಮಾಣವಾಬೇಕು. ಭಜನೆಯಿಂದ ಬದಲಾವಣೆ ಆಗಲಿ ಎಂದು ಹೇಮಾವತಿ ಹೆಗ್ಗಡೆಯವರು ಸಂದೇಶ ನೀಡಿದರು.
ತಾಲೂಕುವಾರು ಪರಿಷತ್ ನ ಅಧ್ಯಕ್ಷರು ವರದಿಯನ್ನು ಮತ್ತು ಮುಂದಿನ ಯೋಜನೆಗಳ ವಿವರವನ್ನು ತಿಳಿಸಿದರು.
ಪರಿಷತ್ ನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಮತ್ತು ಪರಿಷತ್ ನ ಪದಾಧಿಕಾರಿಗಳು, ಯೋಜನಾಧಿಕಾರಿಗಳು, ಹಾಗೂ ರಾಜ್ಯದ ಬೇರೆ ಬೇರೆ ತಾಲೂಕಿನ ಪರಿಷತ್ ನ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…