ಬೆಂಗಳೂರು: ಅಕ್ರಮ ಹಣ ಪತ್ತೆ ಆರೋಪ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು 9 ದಿನಗಳ ಕಾಲ ಕಸ್ಟಡಿಗೆ ವಹಿಸಲಾಗಿದೆ.
ಅಜಯ್ ಕುಮಾರ್ ಕುಹಾರ್ ನೇತೃತ್ವದ ಏಕಸದಸ್ಯ ಪೀಠ, ಡಿ.ಕೆ.ಶಿವಕುಮಾರ್ ಅವರನ್ನು 9 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ. ಡಿ.ಕೆ.ಶಿವಕುಮಾರ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರೆ ಇಡಿ ಪರ ವಕೀಲ ಕೆ.ಎಂ.ನಟರಾಜ್ ಪ್ರತಿವಾದ ಮಂಡಿಸಿದರು. ಜೊತೆಗೆ ಇಲಾಖೆಯ ಅಧಿಕಾರಿಗಳ ವಶಕ್ಕೆ ಶಿವಕುಮಾರ್ ಅವರನ್ನು ನ್ಯಾಯಾಧೀಶರು ವಹಿಸುವಂತಹ ಖಡಕ್ ಪ್ರತಿವಾದ ಮಂಡಿಸುವಲ್ಲಿ ನಟರಾಜ್ ಯಶ್ವಸಿಯಾಗಿದ್ದಾರೆ.
ನಟರಾಜ್ ಪುತ್ತೂರಿನ ಈಶ್ವರಮಂಗಲದವರು:
ಕೆ.ಎಂ.ನಟರಾಜ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಈಶ್ವರಮಂಗಲದವರು. ವಕೀಲ ವೃತ್ತಿಯಲ್ಲಿ ಕಾರ್ಯ ಆರಂಭಿಸಿದ ಕೆ.ಎಂ.ನಟರಾಜ್ ಇಂದು ಉನ್ನತ ಹುದ್ದೆಯನ್ನು ಅಲಂಕರಿಸುವಲ್ಲಿ ಯಶ್ವಸಿಯಾಗಿದ್ದಾರೆ. 2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿ ಉಚ್ಛ ನ್ಯಾಯಾಲಯದ ವಿಶೇಷ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ ಕೆ.ಎಂ ನಟರಾಜ್, ದತ್ತ ಪೀಠ, ಚರ್ಚ್‍ಗಳ ಮೇಲಿನ ದಾಳಿ ಸೇರಿದಂತೆ ಹೈ ಟೆನ್ಷನ್ ಪ್ರಕರಣಗಳಲ್ಲಿ ಸರಕಾರದ ಪರ ವಾದ ಮಂಡಿಸಿದ್ದರು.
ಬಳಿಕ 2014 ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಎನ್‍ಡಿಎ-1 ರ ಅವಧಿಯಲ್ಲಿ ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಸುಪ್ರೀಕೋರ್ಟ್ ಫಾರ್ ಸೌತ್ ಇಂಡಿಯಾ ಹುದ್ದೆಯನ್ನು ಅಲಂಕರಿಸಿದರು. ಇದರಲ್ಲಿ ಪ್ರಮುಖವಾಗಿ ದಕ್ಷಿಣ ಭಾರತದ 6 ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳ ಪ್ರಕರಣಗಳಲ್ಲಿ ಎನ್‍ಡಿಎ-1 ಪರ ನಟರಾಜ್ ವಾದ ಮಂಡಿಸುತ್ತಿದ್ದರು. ಕೆ.ಎಂ.ನಟರಾಜ್‍ರ ಕಾರ್ಯಕ್ಷಮತೆಯನ್ನು ಕಂಡ ಪ್ರಧಾನಿ ನರೇಂದ್ರ ಮೋದಿ, ನಟರಾಜ್‍ರನ್ನು ಎನ್‍ಡಿಎ-2 ರ ಅವಧಿಗೆ ಆಡಿಷನಲ್ ಸಾಲಿಸಿಟರ್ ಜನರಲ್ ಆಫ್ ಸುಪ್ರೀಂಕೋರ್ಟ್ ಫಾರ್ ಇಂಡಿಯಾ ಹುದ್ದೆ ನೀಡಿತ್ತು.
ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…
ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …