ಸುಳ್ಯ: ಸುಳ್ಯ ಪಯಸ್ವಿನಿ ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ.16ರಂದು ಸಂಜೆ 6.30ಕ್ಕೆ ಸುಳ್ಯ ಅಂಬೆತಡ್ಕದ ಜೇಸಿ ಭವನದಲ್ಲಿ ನಡೆಯಲಿದೆ ಎಂದು ನಿಯೋಜಿತ ಜೇಸಿ ಅಧ್ಯಕ್ಷ ದೇವರಾಜ್ ಕುದ್ಪಾಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಜೇಸಿಐ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಮುಖ್ಯ ಅತಿಥಿಯಾಗುವರು.
ನಿಕಟಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರು, ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ, ಜೇಸಿಐ ಸೀನಿಯರ್ ಲೀಜಿಯನ್ ಅಬ್ದುಲ್ಲ ಎ. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಜಿ.ಬುದ್ಧನಾಯ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೇಸಿಐ ಉಪಾಧ್ಯಕ್ಷ ಯು.ಪಿ.ಬಶೀರ್ ಬೆಳ್ಳಾರೆ, ನಿರ್ದೇಶಕ ಚೇತನ್ ಚಿಲ್ಪಾರು ಇದ್ದರು.
ಜೇಸಿಐ ನೂತನ ಪದಾಧಿಕಾರಿಗಳು:
ಸುಳ್ಯ ಪಯಸ್ವಿನಿ ಜೇಸಿಐ ನೂತನ ಅಧ್ಯಕ್ಷರಾಗಿ ದೇವರಾಜ್ ಕುದ್ಪಾಜೆ, ಉಪಾಧ್ಯಕ್ಷರಾಗಿ ಅಭಿಜ್ಞ ಬೊಮ್ಮೆಟ್ಟಿ, ಬಶೀರ್ ಯು.ಪಿ, ಶೃತಿ ತೀರ್ಥವರ್ಣ ಬಳ್ಳಡ್ಕ, ರವಿ ಬೊಮ್ಮೆಟ್ಟಿ, ದಿವ್ಯಾ ಚೇತನ್ ಅಮೆಮನೆ, ಕಾರ್ಯದರ್ಶಿಯಾಗಿ ಚೇತನ್ ಅಮೆಮನೆ, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಪಾನತ್ತಿಲ, ಖಜಾಂಜಿಯಾಗಿ ಶೋಭಾ ಅಶೋಕ್ ಚೂಂತಾರು, ನಿರ್ದೇಶಕರಾಗಿ ಚಂದ್ರಶೇಖರ ಕನಕಮಜಲು, ರಂಜಿತ್ ಕುಕ್ಕೆಟ್ಟಿ, ಯೋಗೀಶ್ ಚೂಂತಾರು, ಮರಿಯಾಜ್ಯೋತಿ ರೋಡ್ರಿಗಸ್, ಚೇತನ್ ಚಿಲ್ಪಾರು, ಗುರುರಾಜ್ ಅಜ್ಜಾವರ, ಜೇಸಿರೆಟ್ ಅಧ್ಯಕ್ಷರಾಗಿ ಚೈತನ್ಯ ದೇವರಾಜ್ ಕುದ್ಪಾಜೆ, ಯುವ ಜೇಸಿ ಅಧ್ಯಕ್ಷರಾಗಿ ಚಿತ್ತಾರ ಬಂಟ್ವಾಳ ಆಯ್ಕೆಯಾಗಿದ್ದಾರೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…