ಡಿ.19 ರಿಂದ ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನದಲ್ಲಿ ಜಾತ್ರೆ : ಚಪ್ಪರ ಮುಹೂರ್ತ

November 24, 2019
1:43 PM

ಬಳ್ಪ: ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ‌ ಜಾತ್ರೋತ್ಸವ ಡಿ. 19 ರಿಂದ ಡಿ. 23 ರ ತನಕ ನಡೆಯಲಿದೆ. ಈ ಪ್ರಯುಕ್ತ ಭಾನುವಾರ ಚಪ್ಪರ ಮುಹೂರ್ತ ನಡೆಯಿತು. ಊರಿನ ಹಿರಿಯರಾದ  ಶೀನಪ್ಪ ಗೌಡ ಎರುಂಬಿಲ ಚಪ್ಪರ ಮುಹೂರ್ತ ನೆರವೇರಿಸಿದರು. ಬಳಿಕ ಧಾರ್ಮಿಕ ಉತ್ಸವ ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು. ಜಾತ್ರಾ ಉತ್ಸವದ ಸಿದ್ಧತೆಗಳು ಹಾಗೂ ಆಮಂತ್ರಣ ಪತ್ರಿಕೆ ವಿತರಣಾ ಅಭಿಯಾನದ ಬಗ್ಗೆ ಚರ್ಚೆ ನಡೆಸಲಾಯಿತು.

 

 

ಸಭೆಯಲ್ಲಿ ದೇವಳದ ಆಡಳಿತ ಮೊಕ್ತೇಸರ ಎಂ.ವಿ. ಶ್ರೀವತ್ಸ, ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಅರ್ಗುಡಿ ಸದಾನಂದ ರೈ , ಕೋಶಾಧಿಕಾರಿ ಮುರಳಿ ಕಾಮತ್, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ರೈ ಅರ್ಗುಡಿ ಸೇರಿದಂತೆ ವಿವಿಧ ಸಮಿತಿ ಸಂಚಾಲಕರುಗಳು,  ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ನ.26 ರಂದು ಮಂಗಳವಾರ ರಾತ್ರಿ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಕಾರ್ತಿಕ ದೀಪೋತ್ಸವ ನಡೆಯಲಿದೆ ಎಂದು ಇದೇ ವೇಳೆ ಭಕ್ತಾದಿಗಳಿಗೆ ಮಾಹಿತಿ ನೀಡಲಾಯಿತು.

 

 ಡಿ.12 ರಂದು ಗೊನೆ ಮುಹೂರ್ತ , ಡಿ.18 ರಂದು ಹಸಿರುಹೊರೆಕಾಣಿಕೆ ಸಂಗ್ರಹ ಡಿ.19 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದರ್ಶನ ಬಲಿ, ಉತ್ಸವ , ಹಾಗೂ ಸಂಜೆ ದೈವಗಳ ನೇಮ ಡಿ.20 ರಂದು ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡು ಡಿ. 22 ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಡಿ.23 ರಂದು ದರ್ಶನಬಲಿ ನಡೆದು ಸಂಜೆ ಅವಭೃತೋತ್ಸವ ನಡೆಯಲಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror