ಗುತ್ತಿಗಾರು: ಶ್ರೀ ಸಂಗಮ ಕ್ಷೇತ್ರ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರ ಹರಿಹರ ಪಳ್ಳತ್ತಡ್ಕದಲ್ಲಿ 25ನೇ ವರ್ಷದ ಪೂಜೋತ್ಸವ ಮತ್ತು 14ನೇ ವರ್ಷದ ಅಪ್ಪ ಸೇವೆ ಹಾಗೂ ಅಗ್ನಿ ಸೇವೆ ಡಿ.24 ರಂದು ನಡೆಯಲಿದೆ.
ಕಾರ್ಯಕ್ರಮವು ಗೋಪಾಲ ಗುರುಸ್ವಾಮಿ , ಮೋಹನ್‌ದಾಸ್ ಗುರುಸ್ವಾಮಿ , ಸೀತಾರಾಮ ಗುರುಸ್ವಾಮಿ , ದಾಮೋದರ ಗುರುಸ್ವಾಮಿ ಹಾಗೂ ಬಾಲಕೃಷ್ಣ ಗುರುಸ್ವಾಮಿ ಪಾಜಪಳ್ಳ ಇವರ ನೇತೃತ್ವದಲ್ಲಿ ನಡೆಯಲಿದೆ. ಡಿ.24 ರಂದು ಬೆಳಗ್ಗೆ ಗಣಪತಿ ಹವನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 5ರಿಂದ ಅಯ್ಯಪ್ಪ ಭಕ್ತಾದಿಗಳು ಕೊಚ್ಚಿ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕಟ್ಟ ಗೋವಿಂದ ನಗರದಿಂದ ಹೊರಟು ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಬಂದು ಅಲ್ಲಿಂದ ಸಂಗಮ ಕ್ಷೇತ್ರ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರಕ್ಕೆ ಮಕ್ಕಳಿಂದ ದೀಪಾರಾಧನೆಯ ಬೆಳಕು ಹಾಗೂ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇವರ ಚೆಂಡೆ ವಾದನದೊಂದಿಗೆ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪಾಲ್ ಕೊಂಬು ಮೆರವಣಿಗೆ ನಡೆಯಲಿರುವುದು.
ಡಿ. 25 ಬುಧವಾರ ಬೆಳಿಗ್ಗೆ ಗಂಟೆ 4 ಕ್ಕೆ ಅಗ್ನಿ ಸೇವೆ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…