ಮಂಗಳೂರು: ಡಿ. 26 ರಂದು ಬಹು ಅಪರೂಪದ ಸೂರ್ಯಗ್ರಹಣಕ್ಕೆ ಖಗೋಳ ವಿಜ್ಞಾನ ಸಾಕ್ಷಿಯಾಗಲಿದೆ. ಬೆಳಿಗ್ಗೆ 8.6 ಕ್ಕೆ ಪ್ರಾರಂಭವಾಗುವ ಕಂಕಣ ಸೂರ್ಯಗ್ರಹಣ ಬೆಳಿಗ್ಗೆ 11.11 ಕ್ಕೆ ಮುಕ್ತಾಯವಾಗಲಿದೆ. ಬೆಳಗ್ಗೆ 9.30ರ ಹೊತ್ತಿಗೆ ಗ್ರಹಣ ಪೂರ್ಣ ಪ್ರಮಾಣದಲ್ಲಿ ಗೋಚರಿಸಲಿದೆ. ಈ ಸಮಯದಲ್ಲಿ ರಾಜ್ಯದ ದೇವಾಲಯಗಳಲ್ಲಿ ಎಂದಿನಂತೆ ಪೂಜೆ-ಪುನಸ್ಕಾರಗಳು ನಡೆಯುವುದಿಲ್ಲ. ಬೆಳಗ್ಗೆಯೇ ದೇವಸ್ಥಾನ ಬಾಗಿಲು ಹಾಕಲಾಗುತ್ತದೆ. ವಿವಿದೆಡೆ ಶಾಂತಿ ಹವನ ನಡೆಯಲಿದೆ.
ಇನ್ನು ನಡೆಯುವುದು 2064 ರಲ್ಲಿ…!! ಇದೊಂದು ಕಂಕಣ ಸೂರ್ಯಗ್ರಹಣವಾಗಿದ್ದು, ಈ ರೀತಿಯ ಸೂರ್ಯಗ್ರಹಣ ಆಕಾಶದಲ್ಲಿ ಕಾಣುವುದು ಮುಂದೆ 2064 ನೇ ವರ್ಷದಲ್ಲಿ. ಈ ಸೂರ್ಯಗ್ರಹಣ ಭಾರತದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಕಾಣಿಸಿಕೊಳ್ಳಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಶೇ 90 ರಷ್ಟು ಕಂಡರೆ, ಉಳಿದ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮಂಗಳೂರು, ಉಡುಪಿ ಮತ್ತು ಕೊಡಗುಗಳಲ್ಲಿ ಸೂರ್ಯ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ಎಂದಿನಂತೆ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ
ಕಂಕಣ ಸೂರ್ಯಗ್ರಹಣ ಎಂದರೇನು? : ಸೂರ್ಯನಿಗೆ ಎದುರಾಗಿ ಚಂದ್ರ ಮತ್ತು ಭೂಮಿ ಒಂದೇ ನೇರದಲ್ಲಿ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆಗ ಸೂರ್ಯಗ್ರಹಣ ಉಂಟಾಗುತ್ತದೆ. ಗ್ರಹಣವನ್ನು ಭೂಮಿಯಿಂದ ನೋಡುವಾಗ ಅದು ಎಷ್ಟು ಭಾಗ ಚಂದ್ರನನ್ನು ಮರೆ ಮಾಡುತ್ತದೆ ಎಂಬುದನ್ನಾಧರಿಸಿ ಗ್ರಹಣ ಖಗ್ರಾಸವೊ, ಪಾರ್ಶ್ವವೊ ಅಥವಾ ಕಂಕಣವೊ ಎಂದು ಹೇಳಲಾಗುತ್ತದೆ. ಪ್ರಸಕ್ತ ಗ್ರಹಣದ ವಿದ್ಯಮಾನದಲ್ಲಿ ವೃತ್ತದೊಳಗಿನ ವೃತ್ತದಂತೆ ಗೋಚರಿಸುತ್ತದೆ. ಸೂರ್ಯನ ಪರಿಧಿಯ ಭಾಗ ಬೆಂಕಿಯ ಬಳೆಯಂತೆ ಕಾಣಿಸುತ್ತದೆ. ಹೀಗಾಗಿ ಇದನ್ನು ಖಗೋಳ ವಿಜ್ಞಾನ ಭಾಷೆಯಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ.
ಗ್ರಹಣ ಸಮಯದಲ್ಲಿ ಹೀಗಿರಬೇಕು : ಗ್ರಹಣ ಸಮಯದಲ್ಲಿ ಪ್ರಾಕೃತಿಕವಾಗಿ ಹಲವು ಬದಲಾವಣೆಗಳಾಗುತ್ತವೆ. ಹೀಗಾಗಿ ಈ ಸಮಯದಲ್ಲಿ ಆಹಾರ ಸೇವಿಸಬಾರದು ಎಂದು ಹೇಳಲಾಗುತ್ತದೆ.
Advertisement