ಸುಳ್ಯ: ಸುಳ್ಯದ ರೋಟರಿ ಕ್ಲಬ್, ರೋಟರಿ ಕ್ಲಬ್ ಸುಳ್ಯ ಸಿಟಿ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಇಂಟರಾಕ್ಟ್ ಕ್ಲಬ್ ಗಳ ಜಿಲ್ಲಾ ಸಮಾವೇಶ-`ಚಿನ್ನಾರಿ’ ಡಿ.14 ಮತ್ತು 15 ರಂದು ಮಿತ್ತಡ್ಕದ ರೋಟರಿ ವಿದ್ಯಾಸಂಸ್ಥೆಗಳ ವಠಾರದಲ್ಲಿ ನಡೆಯಲಿದೆ.
ದ.ಕ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರೋಟರಿ ಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್‍ಗಳ ಸುಮಾರು 700 ರಷ್ಟು ರೊಟೇರಿಯನ್ನರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಳ್ಳಲಿರುವ ಈ ಸಮಾವೇಶದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. `ಮಿಸೆಸ್ ಕರ್ನಾಟಕ’ ಪ್ರಶಸ್ತಿ ವಿಜೇತೆ ದೀಪಿಕಾ ಅಡ್ತಲೆ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ ಸ್ಪೋರ್ಟ್ಸ್ ಚೇರ್‍ಮನ್ ವಿಶ್ವಾಸ್ ಶೆಣೈ ಮತ್ತು ಜಿಲ್ಲಾ ಇಂಟರಾಕ್ಟ್ ಸಭಾಪತಿ ಡಾ.ಸೂರ್ಯನಾರಾಯಣ ಕೆ ಅತಿಥಿಗಳಾಗಿರುತ್ತಾರೆ. ಬಳಿಕ ಅತಿಥೇಯ ರೋಟರಿ ವಿದ್ಯಾಸಂಸ್ಥೆಗಳ ಇಂಟರಾಕ್ಟ್ ಸದಸ್ಯರಿಂದ ಉದ್ಘಾಟನಾ ಸಾಂಸ್ಕ್ರತಿಕ ಪ್ರದರ್ಶನ, ಸಾಂಸ್ಕ್ರತಿಕ ಸ್ಪರ್ಧೆಗಳು ನಡೆಯಲಿವೆ.
ಡಿ.15ರಂದು ಬೆಳಿಗ್ಗೆ ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ ಸಮಾವೇಶವನ್ನು ಉದ್ಘಾಟಿಸುವರು. ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿ ತುಷಾರ್ ಕೆ , ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಮುಂದಿನ ಸಾಲಿನ ಜಿಲ್ಲಾ ಗವರ್ನರ್ ರವೀಂದ್ರ ಭಟ್, ವಲಯ 5 ರ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ ಕೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ವಿಚಾರ ಗೋಷ್ಟಿಗಳು ನಡೆಯಲಿದೆ. `ವ್ಯಕ್ತಿತ್ವ ವಿಕಸನ ಹಾಗೂ ಸಂವಹನ ಕಲೆ’ ವಿಷಯವಾಗಿ ರಾಷ್ಟ್ರೀಯ ತರಬೇತುದಾರರಾದ ಎಂ.ಬಿ. ಜಯರಾಮ ಮಾಹಿತಿ ನೀಡಲಿದ್ದಾರೆ. `ಯುವಜನತೆಯ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ’ ಈ ಕುರಿತು ಪತ್ರಕರ್ತ ಹರಿಪ್ರಸಾದ್ ಅಡ್ಪಂಗಾಯ, `ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸುವುದು ಹೇಗೆ’ ಎಂಬ ವಿಚಾರವಾಗಿ ಜೈ ಮನೋಜ್ ಗೌಡ ವಿಚಾರ ಮಂಡಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‍ನ ನಿರ್ದೇಶಕ ಅಕ್ಷಯ್.ಕೆ.ಸಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ಹಾಗೂ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ಸಮಾವೇಶದ ಸಂಯೋಜಕ ಎನ್.ಎ.ಜಿತೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…