ಡೆಂಗ್ಯೂ ಜಾಗೃತಿ| ಮಳೆ ಶುರುವಾಯ್ತು- ತಡೆಯಿರಿ ಡೆಂಗ್ಯೂ | ಇಲಾಖೆಗಳಿಂದ ಜಾಗೃತಿ ಅಭಿಯಾನ ಆರಂಭ

June 9, 2020
10:17 PM

ಮಳೆಗಾಲ ಆರಂಭವಾಗಿದೆ. ಈಗ ಕೊರೊನಾ ವೈರಸ್ ನಡುವೆಯೇ ಡೆಂಗ್ಯೂ ಭೀತಿ ಹಲವು ಕಡೆ ಇದೆ. ಹೀಗಾಗಿ ಈಗ ಕೊರೊನಾ ಜೊತೆಗೆ ಡೆಂಗ್ಯೂ ತಡೆಯುವ ಅಬಿಯಾನವೂ ಜೊತೆ ಜೊತೆಗೇ ನಡೆಯಬೇಕಿದೆ. ಗ್ರಾಮದಿಂದ ತೊಡಗಿ ನಗರದವರೆಗೆ ಈಗ ಡೆಂಗ್ಯೂ ಜ್ವರದ ಬಗ್ಗೆ ಕಟ್ಟೆಚ್ಚರ ಬೇಕಿದೆ.


ಮಳೆಗಾಲದ ಆರಂಭದಲ್ಲಿ ಪ್ರತೀ ವರ್ಷವೂ ಡೆಂಗ್ಯೂ ಜ್ವರ ವಿಪರೀತವಾಗಿ ಬಾಧಿಸುತ್ತದೆ. ಕಳೆದ ಎರಡು ವರ್ಷಗಳಿಂದ ದ ಕ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿದೆ. ಕಳೆದ ವರ್ಷವಂತೂ ಇಡೀ ಜಿಲ್ಲೆಯೇ ಡೆಂಗ್ಯೂ ಜ್ವರದಿಂದ ತತ್ತರಿಸಿತ್ತು. ಹೀಗಾಗಿ ಈ ಬಾರಿ ಕಟ್ಟೆಚ್ಚರ ಬೇಕಿದೆ. ಜ್ವರದ ಲಕ್ಷಣಗಳು ಇದ್ದರೆ ತಕ್ಷಣವೇ ಸೂಕ್ತ ತಪಾಸಣೆ, ಚಿಕಿತ್ಸೆ ಅಗತ್ಯವಾಗಿದೆ. ಈಗಾಗಲೇ ಅಲ್ಲಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ  ಜಾಗೃತಿ ಕೂಡಾ ನಡೆಯುತ್ತಿದೆ.

ಆರೋಗ್ಯ ಇಲಾಖೆಗೆ ಈ ಬಾರಿ ಸವಾಲಿನ ಕೆಲಸ ಇದೆ. ಒಂದು ಕಡೆ ಕೊರೊನಾ ವೈರಸ್ , ಇನ್ನೊಂದು ಕಡೆ ಡೆಂಗ್ಯೂ ಹರಡುವ ಭೀತಿ. ಹೀಗಾಗಿ ಇಲಾಖೆಯ ಜೊತೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಡೆಂಗ್ಯೂ ಹರಡದಂತೆ, ಬಾರದಂತೆ ಎಚ್ಚರಿಕೆ ವಹಿಸಬೇಕಿದೆ.

ಶಾಂತಿಗೋಡು ಪರಿಸರದ ವ್ಯಾಪ್ತಿಯಲ್ಲಿ ಕಲ್ಲುಕೋಟೆ ಮತ್ತು ಪಣಂಬು ಎಂಬಲ್ಲಿ ಸಂಶಯಾಸ್ಪದ ಡೆಂಗ್ಯೂ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಮೀನಾಕ್ಷಿ ಶಾಂತಿಗೋಡು ಇವರೊಂದಿಗೆ ತಾಲೂಕು ನೋಡಲ್ ಅಧಿಕಾರಿ ಡಾ. ಬದ್ರುದಿನ್ ಎಂ. ಎನ್, ತಾಲೂಕು ಆರೋಗ್ಯಾಧಿಕಾರಿ ಡಾ ಅಶೋಕ್ ಕುಮಾರ್ ರೈ, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಮಿತಾ ನಾಯಕ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆ ತಾಲೂಕು ಆಶಾ ಮೇಲ್ವಿಚಾರಕಿ ಸುಜಾತ ಇವರನ್ನೊಳಗೊಂಡ ತಂಡ ಭೇಟಿ ನೀಡಿ, ಡೆಂಗ್ಯೂ ಖಾಯಿಲೆ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದರ ಜೊತೆಗೆ ಲಾರ್ವಾ ಪ್ರಾತ್ಯಕ್ಷಿಕೆಯನ್ನು ಡೆಂಗ್ಯೂ ಭಾದಿತ ಮನೆಗಳ ಸದಸ್ಯರಿಗೆ ತೋರಿಸಿ ಅರಿವು ಮೂಡಿಸಲಾಯಿತು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ
July 28, 2026
11:25 PM
by: ಮಹೇಶ್ ಪುಚ್ಚಪ್ಪಾಡಿ
ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!
July 28, 2026
10:03 PM
by: ದ ರೂರಲ್ ಮಿರರ್.ಕಾಂ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
July 28, 2026
12:57 PM
by: ದ ರೂರಲ್ ಮಿರರ್.ಕಾಂ
ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು
July 28, 2026
12:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror