ಸುಳ್ಯ: ಇಬ್ಬನಿ ಸುಳ್ಯ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಡೆಂಘೆ ಹಾಗೂ ಚಿಕುನ್ ಗುನ್ಯಾ ಖಾಯಿಲೆ ಬಗ್ಗೆ ಜನಜಾಗೃತಿ ಅಭಿಯಾನಕ್ಕೆ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಚಾಲನೆ ನೀಡಿದರು.
ಅಭಿಯಾನದ ಭಾಗವಾಗಿ ಕೊಡಿಯಾಲಬೈಲು ಕಾಲನಿಗೆ ಭೇಟಿ ನೀಡಿ ಮನೆ ಮನೆಗಳಿಗೆ ಕರಪತ್ರ ವಿತರಿಸಿ ಮಾಹಿತಿ ನೀಡಲಾಯಿತು. ನಂತರ ಕೊಡಿಯಾಲಬೈಲು ಸ.ಕಿ.ಪ್ರಾ ಶಾಲೆಯಲ್ಲಿ ಡೆಂಘೆ ತಡೆಗಟ್ಟುವ ಬಗ್ಗೆ ಪ್ರಾತ್ಯಕ್ಷತೆ ತೋರಿಸಿ ಕರಪತ್ರ ಹಂಚಲಾಯಿತು. ಬಳಿಕ ಕೊಡಿಯಾಲಬೈಲು ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಢ ಶಾಲೆಯಲ್ಲಿ ಭೇಟಿ ಕೊಟ್ಟು ಕರ ಪತ್ರ ಹಂಚಲಾಯಿತು.ಜಟ್ಟಿಪಳ್ಳದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕರಪತ್ರ ನೀಡಲಾಗಿದೆ.
ಈ ಸಂಧರ್ಭದಲ್ಲಿ ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ, ಇಬ್ಬನಿಯ ಮಾರ್ಗದರ್ಶಕ ರಶೀದ್ ಜಟ್ಟಿಪಳ್ಳ, ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಜಟ್ಟಿಪಳ್ಳ ಅಧ್ಯಕ್ಷ ನಾಸಿರ್ ಸಿ.ಎ ಸಿ.ಎಫ್ ಸಿ ಸಾಮಾಜಿಕ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೆ.ಎ, ಸಂಘಟನಾ ಕಾರ್ಯದರ್ಶಿ ಶಿಹಾಬ್ ಜೆ.ಎಂ , ಇಬ್ಬನಿ ಸುಳ್ಯ, ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಹಾಗೂ ಸಿ.ಎಫ್.ಸಿ ಪಧಾಧಿಕಾರಿಗಳಾದ ಸತ್ಯನಾರಾಯಣ, ಫವಾಝ್ ಎನ್ ಎ , ಹಜರತ್ ಖಲೀಲ್, ರಿಯಾಜ್ ಸಿ.ಎ, ಅಲ್ತಾಫ್ ಜಟ್ಟಿಪಳ್ಳ, ಶಾನವಾಸ್ ಶೇಖ್ ಜ್ಯೋತಿ, ನಾಸಿರ್ ಪೈಚಾರ್ ಮುಂತಾದವರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…