ಡೆಂಘೆ ಜ್ವರ ಬಂದರೆ ಏನು ಮಾಡಬಹುದು ?

July 12, 2019
9:00 PM
ಡಾ.ಆದಿತ್ಯ ಚಣಿಲ BHMS(Intern)

 

 

 

 

 

ಡೆಂಘೆ…! ಹೆಸರು ಕೇಳಿದಾಗಲೇ ದಂಗಾಗುವ ಮಂದಿ ಹಲವಾರು.

ಹಾಗಿದ್ದರೆ ಏನಿದು ಡೆಂಘೆ ಜ್ವರ ?. ಸರಳವಾಗಿ ಹೇಳುವುದಾದರೆ ಇಂದೊಂದು ಸೋಂಕು ರೋಗ . ಈಡೀಸ್ ಎಂಬ ಸೋಂಕು ಪೀಡಿತ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಇದು ಹರಡುತ್ತದೆ . ಈ ಸೊಳ್ಳೆಯ ಜೀವಾವಧಿ 2 ವಾರ ಮಾತ್ರ . ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ.  ಮುಖ್ಯವಾಗಿ ನೀರಿನಲ್ಲಿ ಕೊಳಚೆ ಅಥವಾ ಶೇಖರಣೆಯಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ .

ಹೇಗೆ ಹರಡುವುದು?: ಇದು ಈ ರೋಗ ಸೋಂಕಿತ ವ್ಯಕ್ತಿಯ ರಕ್ತವನ್ನು ಆಹಾರಕ್ಕಾಗಿ ಕಚ್ಚಿದಾಗ ತನಗೆ ಹರಡುತ್ತದೆ ಇದು ಯಾರಿಗೆಲ್ಲ ಕಚ್ಚುತ್ತದೋ ಅವರಿಗೆಲ್ಲ ಈ ರೋಗ ಹರಡುತ್ತದೆ.
ಇದನ್ನ ತಡೆಯೋದು ಹೇಗೆ ಎಂಬ ಪ್ರಶ್ನೆಗೆ, ಸೊಳ್ಳೆ ಕಚ್ಚದಂತೆ ತಡೆಯುವುದೇ ತಡೆಯುವ ಮೊದಲ ಸೂತ್ರ. ಇದಕ್ಕಾಗಿ   ಪೂರ್ತಿ ತೋಳಿರುವ ಉಡುಪು ಧರಿಸುವುದು
ಸೊಳ್ಳೆ ಪರದೆ, ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು , ಸೊಳ್ಳೆ ಬತ್ತಿಯ ಬಳಕೆ ಇತ್ಯಾದಿಗಳೇ ಮೊದಲ ರಕ್ಷಣೆ.

ಡೆಂಘೆ ಲಕ್ಷಣಗಳು ಏನು ?

2-7 ದಿನಗಳು ಜ್ವರ , ತಲೆನೋವು , ಕಣ್ಣು ಗುಡ್ಡೆ ನೋವು, ಮೈಕೈ ನೋವು, ಕೆಂಪಾದ ಚರ್ಮ , ಸುಸ್ತಾಗುವುದು ಮೊದಲ ಲಕ್ಷಣ.

ಡೆಂಘೆ ಕಂಡುಬಂದಲ್ಲಿ ಏನು ಮಾಡಬೇಕು?:

ಮೊದಲ ಸೂತ್ರ ವಿಶ್ರಾಂತಿ. ವೈದ್ಯರ ಸಲಹೆ ಅಥವಾ ಭೇಟಿಯಾಗುವುದು.

 

ಚಿಕಿತ್ಸೆ ಬಳಿಕ ನಾವು ಏನೆಲ್ಲಾ ಮಾಡಬಹುದು ?:

1.ಪಪ್ಪಾಯಿ ಎಲೆ ಮದ್ದು : ಪಪ್ಪಾಯಿ ಎಲೆ ತೊಳೆದು ಅದರ ಸ್ವಲ್ಪ ರಸವನ್ನು ಹಿಂಡಿ ಅರ್ಧ ಗ್ಲಾಸ್ ನೀರಿನೊಡನೆ ಸೇರಿಸಿ ಕುಡಿಯಿರಿ ಇದು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಪ್ಲೇಟ್ಲೆಟ್ ಅಂಶವನ್ನು ಹೆಚ್ಚು ಮಾಡುತ್ತದೆ ( ಮಿತಿಗಿಂತ ಜಾಸ್ತಿ ಪಪ್ಪಾಯಿ ಎಲೆಯ ರಸ ಕುಡಿಯಬಾರದು)

2 ಅರಸಿನ,  ಕಾಳುಮೆಣಸು ಗಳನ್ನು ಬಿಸಿ ಹಾಲಿಗೆ ಇದನ್ನು ಮಿಶ್ರಮಾಡಿ ಕುಡಿಯುವುದು . ಅರಸಿನ- ಬೆಲ್ಲ ತಿಂದರೂ ಉತ್ತಮ

3.ತುಳಸಿ-ಕಾಳುಮೆಣಸು (ತುಳಸಿ-ಕಾಳುಮೆಣಸು ನೀರಲ್ಲಿ ಬೆರೆಸಿ ಕುಡಿಯುವುದು)

4.ದಾಳಿಂಬೆ-ಪಪ್ಪಾಯಿ ತಿನ್ನುವುದು

5.ಬೀಟ್ರೋಟ್- ನಿಂಬೆ ರಸ

ಈ ಸೂತ್ರಗಳು ಮೈ ಕೈ ನೋವನ್ನು ದೂರಗೊಳಿಸುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್
ಹೊಸರುಚಿ | ಎಳೆಯ ಹಲಸಿನ ಕಾಯಿ 65 – ಕರಕರಾ, ರುಚಿಕರ ಸ್ನ್ಯಾಕ್ ರೆಸಿಪಿ
February 22, 2026
9:09 AM
by: ದಿವ್ಯ ಮಹೇಶ್
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror