ತಂಬಾಕು ತಿಂಬಾತನಿಗೊಂದು ಕಿವಿ ಮಾತು

June 7, 2019
10:00 AM

ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನುಆಚರಿಸಿದ್ದೇವೆ. ಪ್ರತಿವರ್ಷವೂ ಈ ಆಚರಣೆ ನಡೆಯುತ್ತಲೇ ಇದೆ. ಆದರೆ ತಂಬಾಕು ಸೇವಿಸುವವರ, ಹಾಗೂ ಅದರಿಂದ ಉಂಟಾದ ಕಾಯಿಲೆಗಳು ಇನ್ನೂ ಹೆಚ್ಚುತ್ತಲೇ ಇವೆ. ಹಾಗಾದರೆ ಇದಕ್ಕೆ ಕಾರಣವೇನು? ಇಷ್ಟೆಲ್ಲಾ ಪ್ರಯತ್ನಗಳ ಮಧ್ಯೆಯೂ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಜನರು ಅರಿತಿಲ್ಲವೇ? ಅಥವಾ ಅಸಡ್ಡೆ, ನಿರ್ಲಕ್ಷ್ಯವೇ?, ಯುವಕರು, ಮುದುಕರೆನ್ನದೆ ವಯಸ್ಸಿನ ಯಾವ ಭೇದವೂ ಇಲ್ಲದೆ, ಬಡವ ಶ್ರೀಮಂತ ನೆಂಬ ತಾರತಮ್ಯವಿಲ್ಲದೆ, ಜಾತಿಮತಗಳ ಪಕ್ಷಪಾತವಿಲ್ಲದೆ ಮೌನವಾಗಿ ದಾಂಗುಡಿ ಇಡುವ ಈ ಕಾಯಿಲೆ ಇಂದು ನಿನ್ನೆಯದಲ್ಲ. ಅತ್ಯಂತ ಪ್ರಾಚೀನವಾದ ಆಯುರ್ವೇದ ಗ್ರಂಥಗಳಲ್ಲಿ ಅರ್ಬುದ ಎಂದು ಉಲ್ಲೇಖಿತವಾದ, ಗ್ರೀಕ್ ವೈದ್ಯ ಹಿಪ್ಪಾಕ್ರಟಿಸ್ ನಿಂದ ಕಾರ್ಸಿನೋಮ ಎಂದು ಉಲ್ಲೇಖಿತವಾದ ಗಡ್ಡೆಯ ರೂಪದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯೇ ಕ್ಯಾನ್ಸರ್.

Advertisement
Advertisement
Advertisement

ತಂಬಾಕು ಸೇವನೆ ದೇಹದ ಎಲ್ಲ ಅಂಗಗಳ ಮೇಲೆ ದುಷ್ಪರಿಣಾಮ ಬೀರುವ ದುರ್ವ್ಯಸನ. ಮಧ್ಯಪಾನ ಮಾಡಿದಾಗ ಆ ಮದ್ಯವು ರಕ್ತಗತ ಆಗಬೇಕಾದರೆ ಹೆಚ್ಚುಕಡಿಮೆ ಅರ್ಧ ಗಂಟೆಯಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಈ ತಂಬಾಕಿನ ಕಥೆ ಕೇಳಿದರೆ ಆಶ್ಚರ್ಯ ಚಕಿತರಾಗುತ್ತಾರೆ! ಕೇವಲ ಹತ್ತು ಸೆಕೆಂಡುಗಳಲ್ಲಿ ಇದ ರಲ್ಲಿನ ನಿಕೋಟಿನ್ ಎಂಬ ಹಾನಿಕಾರಕ ಅಂಶವು ಬಾಯಿಯಲ್ಲಿನ ಶ್ಲೇಷ್ಮಲ ಪೊರೆಯ ಮೂಲಕ ರಕ್ತಕ್ಕೆ ಸೇರುತ್ತದೆ. ನಂತರ ದೇಹದಲ್ಲಿ ವ್ಯಾಪಿಸಿ ತನ್ನ ಕೆಲಸವನ್ನು ಶುರುಮಾಡುತ್ತದೆ.

Advertisement

ಜನರು ತಂಬಾಕನ್ನು ಯಾವುದೇ ರೂಪದಲ್ಲಿ ಸೇವಿಸುತ್ತಿರ ಬಹುದು. ಧೂಮಪಾನ, ನಶ್ಯ ಮತ್ತು ಹೊಗೆಸೊಪ್ಪನ್ನು ಬಾಯಿಯಲ್ಲಿ ಜಗಿ ಯುವುದರ ಮೂಲಕ ಉಪಯೋಗಿಸಿದರೂ ಆಯಾ ಅಂಗಗಳಲ್ಲಿ ಮಾತ್ರವಲ್ಲದೆ ಲಿವರ್, ಕರುಳು ಇತ್ಯಾದಿ ಅಂಗಗಳಲ್ಲೂ ಕ್ಯಾನ್ಸರ್ ರೋಗವನ್ನು ಉಂಟುಮಾಡಬಹುದು. ಕೆಲವರು” ಅದನ್ನು ನಾವು ಹೊಟ್ಟೆಗೆ ಸೇವಿಸುತ್ತಿಲ್ಲ “ಎಂದು ಸಮಾಧಾನ ಪಟ್ಟುಕೊಳ್ಳಬಹುದು, ಆದರೆ ಅದು ಹೊಟ್ಟೆಗೆ ಹೋಗದೆ ರಕ್ತಕ್ಕೆ ಸೇರುವ ವಿಷವಸ್ತು ಎಂದು ಮನವರಿಕೆ ಮಾಡಿಕೊಳ್ಳುವ ಅಗತ್ಯವಿದೆ. ಉಬ್ಬಸ ಇದ್ದವರಲ್ಲಿ ಉಬ್ಬಸವನ್ನು ಉಲ್ಬಣಗೊಳಿಸುವ, ಉಬ್ಬಸ ಇಲ್ಲದವರಲ್ಲಿ ಉಬ್ಬಸ ರೋಗವನ್ನು ಹುಟ್ಟುಹಾಕುವ ಮಹಾಮಾಯಾವಿ ಈ ನಿಮ್ಮ ತಂಬಾಕು. ಶ್ವಾಸನಾಳಗಳಲ್ಲಿ ಕಫದ ಸ್ರಾವವನ್ನು ಹೆಚ್ಚಿಸಿ ಗಾಳಿ ಆಡದಂತೆ ಮಾಡುವುದರಲ್ಲಿ ಇದು ನಿಸ್ಸೀಮ. ನಿಧಾನಕ್ಕೆ ಶ್ವಾಸ ಕೋಶಗಳ ಹಿಗ್ಗುವ ಕುಗ್ಗುವ ಸಾಮರ್ಥ್ಯವನ್ನು ಕುಂಠಿತಗೊಳಿಸುವುದು. ಧೂಮಪಾನಿಗಳಲ್ಲಿ ವಿಶೇಷವಾಗಿ ಕಂಡುಬರುವ ಕೆಮ್ಮಿಗೆ” ಧೂಮಪಾನಿಗಳ ಕೆಮ್ಮು” ಎಂದೇ ಹೆಸರು. ಪದೇ ಪದೇ ಬಾಧಿಸುವ ಈ ಕೆಮ್ಮು ಧೂಮಪಾನಿ ಯನ್ನು ತುಂಬಾ ತೊಂದರೆಗೆ ಒಳಪಡಿಸುವುದು. ರಕ್ತನಾಳಗಳ ಪೆಡಸು ಗಟ್ಟುವಿಕೆ ಉಂಟಾಗಿ ಹೃದಯ ಹಾಗೂ ರಕ್ತನಾಳಗಳ ಸಾಮರ್ಥ್ಯ ಕುಂಠಿತಗೊಳ್ಳುವುದು. ರಕ್ತ ನಾಳಗಳ ಒಳಗಿನ ಅವಕಾಶ ಕಡಿಮೆಯಾಗಿ ಪಾದದ ರಕ್ತನಾಳಗಳಲ್ಲಿ ರಕ್ತ ಸಂಚಾರ ಕಡಿಮೆಯಾಗುವುದರಿಂದ ನಿಧಾನವಾಗಿ ಕಾಲಿನ ಅಂಗಾಂಶಗಳು ಕೊಳೆಯುವುದಕ್ಕೆ ಆರಂಭವಾಗಬಹುದು. ಆಗ ಬೆರಳನ್ನು., ಪಾದವನ್ನು ಅಥವಾ ಕಾಲನ್ನು ಶಸ್ತ್ರಕ್ರಿಯೆಯ ಮುಖಾಂತರ ಕತ್ತರಿಸ ಬೇಕಾದ ಪ್ರಸಂಗ ಬರಬಹುದು. ಹೃದಯದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಕಾರಣದಿಂದ ಹೃದಯಾಘಾತ ಉಂಟಾಗಬಹುದು. ಜಠರದಲ್ಲಿ ಆಸಿಡ್ ಸ್ರವಿಸುವಿಕೆ ಹೆಚ್ಚುವುದರಿಂದ ಎಸಿಡಿಟಿ ಹಾಗೂ ಜಠರದ ಹುಣ್ಣು ಉಂಟಾಗಬಹುದು. ಮೆದುಳಿನಲ್ಲಿ ಉಂಟಾಗುವ ರಕ್ತನಾಳದ ಬದಲಾವಣೆಯಿಂದ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾದಲ್ಲಿ ಪಕ್ಷಾಘಾತವು ಉಂಟಾಗಬಹುದು. ಕಾಲಾಂತರದಲ್ಲಿ ರಕ್ತದೊತ್ತಡ ಹೆಚ್ಚುವುದರಿಂದ ಆಂತರಿಕ ರಕ್ತಸ್ರಾವ ಉಂಟಾಗಬಹುದು.

ಆದರೆ ವಿಚಿತ್ರವೆಂದರೆ ಬಹಳ ಸಣ್ಣ ಪ್ರಾಯದಲ್ಲಿಯೇ ಧೂಮಪಾನಿಗಳ ಅಲ್ಲದವರು ಕೂಡ ಶ್ವಾಸಕೋಶದ ಕ್ಯಾನ್ಸರಿಗೆ ಬಲಿಯಾದವರು ಇದ್ದಾರೆ. ಬಹಳಷ್ಟು ಜನ ತ ಕುಟುಂಬದ ಸದಸ್ಯರಿಗೆ ಕೂಡ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ವಿಷಯವನ್ನು ಆರ್ಥಿಕ, ಸಾಮಾಜಿಕ ಕ ಕಾರಣಗಳಿಗಾಗಿ ಅಥವಾ ಇನ್ನೊಬ್ಬರಿಗೆ ಹೊರೆಯಾಗುವುದು ಬೇಡ ಎಂಬ ಕಾರಣಕ್ಕಾಗಿ ಮರೆಮಾಚುತ್ತಾರೆ. ಪ್ರತಿಭಾನ್ವಿತ ವೈದ್ಯರಿಗೆ ಹಾಗೂ ವಿಜ್ಞಾನಿಗಳಿಗೂ ಸವಾಲಾಗಿ ಇದು ಇದೆ.

Advertisement

ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ದೇಹದಲ್ಲಿ ಪ್ರತಿಕ್ರಿಯಾತ್ಮಕ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ ವೀರ್ಯಾಣುವಿನ ಲ್ಲಿನ ಡಿ ಎನ್ ಎ ಯನ್ನು ಹಾನಿ ಗೊಳಿಸುವುದು. ಹೆಚ್ಚೆಚ್ಚು ಧೂಮಪಾನ ಮಾಡುವುದರಿಂದ ಈ ಹಾನಿಯು ಹೆಚ್ಚೆಚ್ಚು ಉಂಟಾಗುವುದು. ಒಂದು ವೇಳೆ ಈ ಹಾನಿಗೊಳಗಾದ ವೀರ್ಯಾಣು ಸ್ತ್ರೀ ಯಲ್ಲಿನ ಅಂಡಾಣುವನ್ನು ಫಲಿತ ಗೊಳಿಸಿದರೂ ಕೂಡಾ ಅವಧಿಪೂರ್ವ ಗರ್ಭಪಾತದ ಅಪಾಯವನ್ನು ಒಳಗೊಳ್ಳಬಹುದು. ಮತ್ತೆ ಮತ್ತೆ ಮರುಕಳಿಸುವ ಗರ್ಭಪಾತದ ಕಾರಣದ ಬಗ್ಗೆ ಎಷ್ಟೋ ಸಲ ವೈದ್ಯರಿಗೂ ಕಡಿಮೆ ಅರಿವು ಇರುವ ಸಂದರ್ಭಗಳು ಇಲ್ಲದಿಲ್ಲ. ಒಂದು ಶೇಕಡಾ ದಂಪತಿಗಳಲ್ಲಿ ಇದು ಬಂದರೂ, ಉಳಿದರ್ಧ ಜನರಲ್ಲಿ ರೋಗಜನಕ ಕಾರಣವು ಪತ್ತೆಯಾಗಿರುವುದಿಲ್ಲ. ಪ್ಯಾಸಿವ್ ಸ್ಮೋಕಿಂಗ್ ಎನ್ನುವ ಸಂಗತಿಯು ಧೂಮಪಾನ ಮಾಡದ ವ್ಯಕ್ತಿಗಳಿಗೂ ಹಾನಿಯನ್ನು ತರುತ್ತದೆ. ಧೂಮಪಾನಿಗಳ ಮನೆಯಲ್ಲಿ ಇರುವ ಗರ್ಭಿಣಿ ಸ್ತ್ರೀ ಯಲ್ಲಿ ಜನಿಸುವ ಮಕ್ಕಳಲ್ಲಿ ಶಿಶುಮರಣ, ಅಂಗ ವೈಕಲ್ಯ, ಬುದ್ಧಿ ಮಂದ್ಯ ಇತ್ಯಾದಿ ನ್ಯೂನತೆಗಳು ಕಂಡುಬರಬಹುದು. ಧೂಮಪಾನಿಗಳಿಗೆ ಹುಟ್ಟುವ ಮಕ್ಕಳಲ್ಲಿ ಕ್ಯಾನ್ಸರ್ ಹಾಗೂ ಇತರ ಆರೋಗ್ಯ ಸಮಸ್ಯೆಗಳು ತಲೆದೂರುವ ಸಾಧ್ಯತೆಗಳು ಹೆಚ್ಚು.

ವಿಶ್ವದಲ್ಲಿ 1 ವರ್ಷಕ್ಕೆ 6 ಮಿಲಿಯ ಸಾವುಗಳು ತಂಬಾಕು ಸೇವನೆಯಿಂದ ಉಂಟಾಗುವ ಸಮಸ್ಯೆಗಳಿಂದ ಸಂಭವಿಸುತ್ತವೆ. ಇದರಲ್ಲಿ ವರ್ಷಕ್ಕೆ ಒಂದು ಮಿಲಿಯನ್ ಸಾವುಗಳು ಭಾರತದಲ್ಲಿ ಸಂಭವಿಸುತ್ತವೆ. ತಂಬಾಕನ್ನು ಹೆಚ್ಚು ಉಪಯೋಗಿಸುವ ಪ್ರಪಂಚದ ಮೂರನೆಯ ರಾಷ್ಟ್ರ ಭಾರತ.35 ಶೇಕಡ ವಯಸ್ಕರು ಭಾರತದಲ್ಲಿ ತಂಬಾಕನ್ನು ಸೇವಿಸುತ್ತಾರೆ. ಸಿಗರೇಟ್, ಗುಟ್ಕಾ, ಬೀಡಿ, ನಶ್ಯ…. ಹೀಗೆ ನಾನಾ ರೂಪಗಳಲ್ಲಿ. ಭಾರತದಲ್ಲಿ ಕಂಡುಬರುವ ಕ್ಯಾನ್ಸರ್ ರೋಗಗಳಲ್ಲಿ 40 ಶೇಕಡಾದಷ್ಟು ಕುತ್ತಿಗೆ ಹಾಗು ತಲೆಯ ಭಾಗಕ್ಕೆ ಸಂಬಂಧಪಟ್ಟವು. ಪ್ರಪಂಚದಲ್ಲಿ ಕಂಡುಬರುವ ಒಟ್ಟು ಕ್ಯಾನ್ಸರ್ ರೋಗಗಳಲ್ಲಿ, 57 ಶೇಕಡದಷ್ಟು ಕುತ್ತಿಗೆ ತಲೆಯ ಕ್ಯಾನ್ಸರ್ ಗಳು ಭಾರತದಲ್ಲಿ ಕಂಡುಬರುತ್ತವೆ. ಜನರಲ್ಲಿ ಇದರ ಬಗ್ಗೆ ಅರಿವು ಇಲ್ಲದಿರುವ ಕಾರಣದಿಂದ, ಆರಂಭದ ಹಂತದಲ್ಲಿ ಇವು ಪತ್ತೆಯಾಗುವುದಿಲ್ಲ. ಒಳ ಮತ್ತು ಹೊರಭಾಗದ ಯಾವುದೇ ಗಡ್ಡೆ ಅಥವಾ ಗಂಟಿ ನಂತಹ ಬೆಳವಣಿಗೆಗಳು ಕುತ್ತಿಗೆಯಲ್ಲಿ, ಗಂಟಲು, ಧ್ವನಿಪೆಟ್ಟಿಗೆ, ಮೂಗು, ಬಾಯಿ ಅಥವಾ ಸೈನಸ್ ಭಾಗಗಳಲ್ಲಿ ಕಂಡುಬರಬಹುದು. ದೀರ್ಘಕಾಲ ಗುಣವಾಗದ ಹುಣ್ಣು ಇರಬಹುದು. ನೋವು ಇರಬಹುದು ಅಥವಾ ಇಲ್ಲದೇ ಇರಬಹುದು. ವೈದ್ಯರಿಂದ ತಪಾಸಣೆಗೆ ಒಳಗಾಗುವುದು ಸೂಕ್ತ. ಹೆಚ್ಚಿನ ರೋಗಿಗಳು ಕ್ಯಾನ್ಸರ್ ಉಲ್ಬಣಗೊಂಡ ಸ್ಥಿತಿಯಲ್ಲಿ ವೈದ್ಯರನ್ನು ಸಮೀಪಿಸುತ್ತಾ ರೆ. ಬೆಳೆದು ಇರುವ ಹಂತದ ಇಂತಹ ಕ್ಯಾನ್ಸರ್ ನ ಚಿಕಿತ್ಸೆಯು ಕಷ್ಟಸಾಧ್ಯ ಅಥವಾ ಅಸಾಧ್ಯ ಆಗಬಹುದು. ಇಂದಿನ ಪರಿ ಸ್ಥಿತಿಯಲ್ಲಿ ಆರಂಭದಲ್ಲಿ ಪತ್ತೆಹಚ್ಚುವ ತಂತ್ರಜ್ಞಾನದ ಆವಿಷ್ಕಾರಗಳಾದ ಬಯೋಪ್ಸಿ, ಎಂಡೋಸ್ಕೋಪಿ, ಎಕ್ಸ್ ರೇ, ಸಿಟಿ ಸ್ಕ್ಯಾನ್, ಎನ್ ಆರ್ ಐ ಸ್ಕ್ಯಾನ್, ಪೆಟ್ ಸಿಟಿ ಸ್ಕ್ಯಾನ್, ಅಣು ಜೈವಿಕ ಪರೀಕ್ಷೆಗಳು, ಜೀವರಾಸಾಯನಿಕ ಪ್ರಯೋಗಶಾಲೆಯ ಪರೀಕ್ಷೆಗಳು ಸುಲಭದ, ಶೀಘ್ರ ದ, ನಿಖರವಾದ, ಕೈಗೆಟಕುವ ಬೆಲೆಯಲ್ಲಿ ಲಭ್ಯವಿವೆ. ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಔಷಧ ಚಿಕಿತ್ಸೆ ಸಾಧ್ಯವಿದೆ. ಇತ್ತೀಚೆಗೆ ಕೇಂದ್ರ ಸರಕಾರವು ಕ್ಯಾನ್ಸರ್ ಚಿಕಿತ್ಸೆಯ ಔಷಧಗಳ ಬೆಲೆಯನ್ನು ಗಮನಾರ್ಹ ಪ್ರಮಾಣದಲ್ಲಿ ತಗ್ಗಿಸಿದೆ. ಆದರೆ ಬಂದ ಕ್ಯಾನ್ಸರ್ ರೋಗವನ್ನು ಶೀಘ್ರ ಪತ್ತೆ ಹಚ್ಚುವ, ಕ್ಯಾನ್ಸರ್ ರೋಗವನ್ನು ಆಗದಂತೆ ತಡೆಗಟ್ಟುವ ಮಾರ್ಗಗಳನ್ನು ಪ್ರತಿ ಒಬ್ಬನು ಅನುಸರಿಸಬೇಕಾದ ಅಗತ್ಯವಿದೆ.

Advertisement

ಆದುದರಿಂದ, ತಂಬಾಕನ್ನು ಸೇವಿಸಬೇಡಿ, ಯಾವುದೇ ರೂಪದಲ್ಲಾದರೂ.  ತಂಬಾಕು ತಿನ್ನಬೇಡಿ. ಒಂದು ವೇಳೆ ತಿಂದರೆ, ಅದು ನಿಮ್ಮನ್ನು ತಿನ್ನುತ್ತದೆ.
ಜೀವನಪೂರ್ತಿ ನಿಮ್ಮನ್ನು ತಿನ್ನುತ್ತಲೇ ಇರುತ್ತದೆ. ತಂಬಾಕು ಕೊಂಬಾತನಿಗೆ ಬುದ್ಧಿ ಹೇಳಿ.  ತಂಬಾಕು ತಿಂಬಾತನಿಗೆ ಮನದಟ್ಟು ಮಾಡಿ.
ಹಲ್ಲು ನೋವಿಗೆ ತಂಬಾಕು ಮದ್ದಲ್ಲ, ಪರಿಹಾರವೂ ಅಲ್ಲ. ! ದಂತವೈದ್ಯರನ್ನು ಸಂಪರ್ಕಿಸಿ. ಖುಷಿಗಾಗಿ ತಿನ್ನುವುದಕ್ಕೆ ಅದು ಚಾಕೊಲೇಟ್ ಅಲ್ಲ ಎಂಬ ಎಚ್ಚರ ಇರಲಿ.! ಭಾರತ ಮಾತೆಯ ಮಕ್ಕಳು ಶಕ್ತಿಹೀನರಾಗದಂತೆ ನೋಡಿಕೊಳ್ಳಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜನರಿಗೆ ದುಡಿದು ತಿನ್ನಲು ಬಿಡಿ, ಬೇಡ ಸಬ್ಸಿಡಿ
December 17, 2024
8:17 PM
by: ಡಾ.ಚಂದ್ರಶೇಖರ ದಾಮ್ಲೆ
ನಾಚಿಕೆ ಏತಕೆ?
December 11, 2024
9:57 PM
by: ಡಾ.ಚಂದ್ರಶೇಖರ ದಾಮ್ಲೆ
ವಿಶ್ವಾಸದ ಗ್ಯಾರಂಟಿ ಇಲ್ಲದ ಪ್ರೇಮ
December 3, 2024
9:17 PM
by: ಡಾ.ಚಂದ್ರಶೇಖರ ದಾಮ್ಲೆ
ಕೊಲ್ಲುವುದಕ್ಕೆ ವ್ಯಕ್ತಿಗಳೆಂದರೆ ಶರೀರಗಳಷ್ಟೇಯಾ..? ಬಂಧುಗಳಲ್ಲವಾ?
November 27, 2024
8:44 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror