Advertisement
ಮಾಹಿತಿ

ತಡವಾಗಿ ಬಂದ ಮುಂಗಾರು : ಇಂದಿನಿಂದ “ಮುಂಗಾರು ಮಳೆ” ಯ ವೈಭವ ಶುರುವಂತೆ…!

Share

ಸುಳ್ಯ: ನಿಜವಾದ ಮಳೆಗಾಲ ಇಂದಿನಿಂದ ಶುರುವಾಗುತ್ತದೆ..!. ಹೀಗೆ ಹೇಳಿದಾಗಲೇ ಅನೇಕರು ಈ ಬಾರಿ ಸಂಶಯ ಪಡುತ್ತಾರೆ. ಈ ವರ್ಷ ಮಳೆಗಾಲದ, ಹವಾಮಾನದ ಎಲ್ಲಾ ನಿರೀಕ್ಷೆಗಳೂ ಶೇ.100 ಸರಿಯಾಗಿಲ್ಲ. ಕಾರಣ ಹವಾಮಾನದಲ್ಲಿನ ದಿಢೀರ್ ಏರುಪೇರು.

ಹವಾಮಾನದ ಬದಲಾವಣೆಯ ವೀಕ್ಷಣೆ, ಮಳೆ ಲೆಕ್ಕ, ವಾತಾವರಣ ಬದಲಾವಣೆಯ ವೀಕ್ಷಣೆ ಬಹಳ ಕುತೂಹಲವಾಗಿರುತ್ತದೆ.  ಮಳೆಗಾಲವು ನಿರೀಕ್ಷೆಯಂತೆ ಜೂ.7 ರಂದು ಕೇರಳ ತಲಪಿ ಕರಾವಳಿ ಮೂಲಕ ಜೂ.10 ಕ್ಕೆ ರಾಜ್ಯಕ್ಕೆ ಪ್ರವೇಶ ಮಾಡಬೇಕಾಗಿತ್ತು. ಆದರೆ ತೀರಾ ವಿಳಂಬವಾಗಿಯೂ ಸರಿಯಾಗಿ ಮಳೆಗಾಲ ಆರಂಭವಾಗಿಲ್ಲ. ಕಾರಣ ನೈರುತ್ಯ ಮುಂಗಾರು ಆರಂಭವಾದ ಹೊತ್ತಿನಲ್ಲೇ ವಾಯು ಚಂಡಮಾರುತ ಆರಂಭವಾಯಿತು. ಮುಂಗಾರು ಬಲಕಳೆದುಕೊಂಡಿತು.

ಇದೀಗ ಮಳೆಗಾಲ ತನ್ನ ಮೂಲಸ್ವರೂಪ ಪಡೆದುಕೊಂಡಿದೆ. ಒಂದೆರಡು ಮಳೆ ಜೋರಾಗುತ್ತದೆ. ಮಂಗಳೂರು ಕಾಸರಗೋಡು ಭಾಗಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ.
ನಾಳೆಯಿಂದ  24 ರವರೆಗೆ ಮಡಿಕೇರಿ ಹಾಗೂ ಆಗುಂಬೆ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಇಡೀ ದ. ಕ. ಹಾಗೂ ಉಡುಪಿ ಭಾಗಗಳಲ್ಲೂ ಹೆಚ್ಚಿನ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಚಿತ್ರ ಸೂಚಿಸುತ್ತದೆ.

ಈ ಬಾರಿ ಮಳೆಯ ಮುನ್ಸೂಚನೆ ಆಗಾಗ ತಪ್ಪಾಗಿದೆ. ಇದುವರೆಗೆ ಹೀಗೆ ಆಗುತ್ತಿರಲಿಲ್ಲ. ಹವಾಮಾನ ಇಲಾಖೆಯ ಉಪಗ್ರಹ ಆಧಾರಿತ ಚಿತ್ರ ಬಹುತೇಕ ಸರಿಯಾಗಿರುತ್ತಿತ್ತು ಎಂದು  ಹೇಳುತ್ತಾರೆ ಸಾಯಿಶೇಖರ್ ಕರಿಕಳ. ಇದೀಗ ಮಳೆಗಾಲ ಇಂದಿನಿಂದ ಶುರುವಾಗುತ್ತದೆ ಎಂದು ಉಪಗ್ರಹ ಚಿತ್ರ ಹೇಳುತ್ತದೆ ಎಂದು ಅವರು ಹೇಳುತ್ತಾರೆ.

 

ಇನ್ನೊಂದು ಶಾಕಿಂಗ್ ಅಂಶವೆಂದರೆ 1972 ರ ನಂತರ ಅತ್ಯಂತ ವಿಳಂಬವಾಗಿ ಮಳೆ ಬಂದ ವರ್ಷ 2019..!. ಈ ದಾಖಲೆಯನ್ನು  ಬಾಳಿಲದ ಪಿಜಿಎಸ್ ಎನ್ ಪ್ರಸಾದ್ ಹೇಳುತ್ತಾರೆ. ಅವರೇ ಹೇಳುವ ಹಾಗೆ,

 

ನನ್ನ ತಂದೆಯವರ ಡೈರಿಯಲ್ಲಿ ಕಂಡುಬಂದಂತೆ 1972 ರ ಬಳಿಕ (1972 ಜೂನ್ 20) ನಮ್ಮಲ್ಲಿ ಅತ್ಯಂತ ತಡವಾಗಿ (19/06/2019) ಮುಂಗಾರು ಮಳೆ ಆರಂಭವಾದ ವರ್ಷವಿದು. ಅಂದು ಜೂನ್ 20… ಈ ಬಾರಿ 19 ಜೂನ್…!. ಅತ್ಯಂತ ಗೊಂದಲದ ನೈರುತ್ಯ ಮುಂಗಾರು ಈ ಬಾರಿಯದು ಎಂದು ಪ್ರಸಾದ್ ಹೇಳುತ್ತಾರೆ.

 

ಪ್ರಸಾದ್ ಅವರ ಮಳೆ ಲೆಕ್ಕದ ಪ್ರಕಾರ

ವಾಡಿಕೆಗಿಂತ ( ಜೂನ್ 6 ) ತಡವಾಗಿ ಮಳೆಗಾಲ ಆರಂಭವಾದ ವರ್ಷಗಳು… ಹಾಗೂ ಆಯಾ ವರ್ಷ ವಾರ್ಷಿಕವಾಗಿ ಸುರಿದ ಒಟ್ಟು ಮಳೆ ಹೀಗಿದೆ

15/06/1979…. …3579 ಮಿ.ಮೀ
16/06/1983……..5119 ಮಿ.ಮೀ
11/06/1995……..4037 ಮಿ.ಮೀ
10/06/1996……..4562 ಮಿ.ಮೀ
12/06/1997……..4769 ಮಿ.ಮೀ
08/06/1998……..5443 ಮಿ.ಮೀ
10/06/2003……..4046 ಮಿ.ಮೀ
08/06/2005……..4253 ಮಿ.ಮೀ
12/06/2007……..4868 ಮಿ.ಮೀ
08/06/2012……..4314 ಮಿ.ಮೀ
09/06/2014……. 4450 ಮಿ.ಮೀ.
19/06/2019……..????

ಅತ್ಯಂತ ಗೊಂದಲದ ನೈರುತ್ಯ ಮುಂಗಾರು ಈ ಬಾರಿಯದು. ಹವಾಮಾನ ಇಲಾಖೆಯನ್ನೇ ಗೊಂದಲಕ್ಕೀಡು ಮಾಡಿದ ನೈರುತ್ಯ ಮುಂಗಾರು ಮಾರುತ ಈಗ ಸ್ವಲ್ಪ ಮಟ್ಟಿನ ವೇಗ ಪಡಕೊಂಡಂತಿದೆ. ಮುಂದಿನ ಬೆಳವಣಿಗೆ ಏನು ಗೊತ್ತಿಲ್ಲ…!

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

18 hours ago

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…

18 hours ago

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ

ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…

18 hours ago

ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…

1 day ago

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

1 day ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

2 days ago