ತಲಕಾವೇರಿ: ತಲಕಾವೇರಿ ತೀರ್ಥೋದ್ಭವ ಶುಕ್ರವಾರ ಮುಂಜಾನೆ 12.57 ಕ್ಕೆ ನಡೆಯಿತು. ಮೊದಲು ನಿಶ್ಚಯವಾದ ಸಮಯಕ್ಕಿಂತ ಎರಡು ನಿಮಿಷ ಮೊದಲು ಅಂದರೆ 12.57 ರ ಕರ್ಕಾಟಕ ಲಗ್ನ ರೋಹಿಣಿ ನಕ್ಷತ್ರದಲ್ಲಿ ಬ್ರಹ್ಮಗಿರಿಯ ಬ್ರಹ್ಮ ಕುಂಡಿಕೆಯಿಂದ ಕಾವೇರಿ ನದಿ ಉದ್ಭವಿಸಿ ತೀರ್ಥ ರೂಪಿಣಿಯಾಗಿ ಹರಿದು ಭಕ್ತರಿಗೆ ದರ್ಶನ ನೀಡಿದಳು. ತೀರ್ಥೋದ್ಭವದ ಬಳಿಕ ನೆರೆದ ಸಾವಿರಾರು ಮಂದಿ ಭಕ್ತರು ಕೊಳದಲ್ಲಿ ಪುಣ್ಯ ಸ್ನಾನ ಮಾಡಿದರು. ಕಾವೇರಿ ತೀರ್ಥವನ್ನು ಸಾವಿರಾರು ಮಂದಿ ಕೊಡಗಳಲ್ಲಿ ಸಂಗ್ರಹಿಸಿದರು. ತಡ ರಾತ್ರಿ ತೀರ್ಥೋದ್ಭವ ನಡೆದರೂ ಕರ್ನಾಟಕ, ಕೇರಳ, ತಮಿಳು ನಾಡು ಮತ್ತು ಆಂಧ್ರ ಪ್ರದೇಶದಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel