ತಹಶೀಲ್ದಾರ್ ವರ್ಗಾವಣೆಗೆ ಜನರಿಂದ ವಿರೋಧ : ಸುಳ್ಯದಲ್ಲೇ ತಹಶೀಲ್ದಾರ್ ಎನ್.ಎ ಕುಂಞಿ ಅಹಮ್ಮದ್ ಇರಬೇಕು

July 20, 2019
7:19 PM

ಸುಳ್ಯ: ಸುಳ್ಯ ತಹಶೀಲ್ದಾರ್ ಎನ್.ಎ ಕುಂಞಿ ಅಹಮ್ಮದ್  ವರ್ಗಾವಣೆಗೆ ಜನರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.  ಜನಪರ ತಹಶೀಲ್ದಾರ್ ವರ್ಗಾವಣೆ ತಡೆಹಿಡಿದು ಮತ್ತೆ ಸುಳ್ಯದಲ್ಲೇ ಅವರು ಮುಂದುವರಿಯಬೇಕು ಎಂಬ ಒತ್ತಾಯ ಕೇಳಿಬಂದಿದೆ. ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕ ವತಿಯಿಂದ  ಜಿಲ್ಲಾಧಿಕಾರಿಯವರಿಗೆ ಮನವಿಯನ್ನೂ ಮಾಡಲಾಗಿದೆ.

Advertisement
Advertisement
Advertisement

ಸುಳ್ಯ ತಾಲೂಕು ರಾಜ್ಯ ರೈತ ಸಂಘ ವತಿಯಿಂದ ದಕ್ಷ ಹಾಗೂ ಪ್ರಾಮಾಣಿಕ ಸುಳ್ಯ ತಾಲೂಕು ತಹಶೀಲ್ದಾರ್  ಎನ್.ಎ ಕುಂಞಿ ಅಹಮ್ಮದ್ ಇವರಿಗೆ ವರ್ಗಾವಣೆ ಆಗಿರುವುದನ್ನು ಕೂಡಲೇ ತಡೆ ಹಿಡಿಯುವಂತೆ ಮತ್ತು ಸುಳ್ಯದಲ್ಲೇ ಕರ್ತವ್ಯ ನಿರ್ವಹಿಸುವಂತೆ ಮಾನ್ಯ ದ ಕ ಜಿಲ್ಲಾಧಿಕಾರಿಯವರಿಗೆ ಸಂಘದ ಅದ್ಯಕ್ಷ ಲೋಲಜಾಕ್ಷ ಭೂತಕಲ್ಲು , ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು , ಜಿಲ್ಲಾ ಕಾರ್ಯದರ್ಶಿ ದಿವಾಕರ ಪೈ , ಸದಸ್ಯರಾದ ಸುಳ್ಯಕೋಡಿ ಮಾಧವ ಗೌಡ , ವಕೀಲರಾದ ಧರ್ಮಪಾಲ ಕೊಯಿಂಗಾಜೆ ಮನವಿಯನ್ನು ಸಲ್ಲಿಸಿದರು.

Advertisement

ಕಳೆದ ಫೆಬ್ರವರಿಯಲ್ಲಿ ಸುಳ್ಯಕ್ಕೆ ಆಗಮಿಸಿದ ತಹಶೀಲ್ದಾರ್ ಎನ್.ಎ ಕುಂಞಿ ಅಹಮ್ಮದ್ ಅವರು ಜನರಪರ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಸಾಮಾಜಿಕವಾದ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹಾರ ಮಾಡುತ್ತಿದ್ದರು. ಹೀಗಾಗಿ ಜನರಿಗೆ ಹತ್ತಿರವಾಗಿದ್ದರು. ಇದೀಗ ದಿಢೀರ್ ವರ್ಗಾವಣೆ ಆದೇಶ ಬಂದಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದು ಸುಳ್ಯದಲ್ಲೇ ಎನ್.ಎ ಕುಂಞಿ ಅಹಮ್ಮದ್  ಅವರು ಇರಬೇಕು ಎಂದು ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲೂ ವ್ಯಾಪಕವಾಗಿ ಅಸಮಾಧಾನ ವ್ಯಕ್ತವಾಗಿದ್ದು ಸುಳ್ಯದಲ್ಲೇ ಎನ್.ಎ ಕುಂಞಿಅಹಮ್ಮದ್  ಅವರು ಇರಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಈ ಬಗ್ಗೆ ವ್ಯಾಟ್ಸಪ್ ಸ್ಟೇಟಸ್ ಹಾಕಿದ ಸಾಮಾಜಿಕ ಕಾರ್ಯಕರ್ತರೊಬ್ಬರು,

Advertisement

ಎಲ್ಲಾ ಅಧಿಕಾರಿಗಳ ಬಳಿಗೆ ಸಾಮಾಜಿಕ ಕೆಲಸಕ್ಕೆ ಹೋದರೆ ನಾವೇ ಅವರ ನಂಬರ್ ಪಡೆದು ಫಾಲೋ ಅಪ್ ಮಾಡಬೇಕು.ಆದರೆ ಎನ್.ಎ ಕುಂಞಿ ಅಹಮ್ಮದ್  ಅವರೇ ನಮ್ಮ ನಂಬರ್ ಪಡೆದು ಕೆಲಸವಾದ ಕೂಡಲೇ ಅವರೇ ಕರೆ ಮಾಡಿ ಹೇಳುತ್ತಾರೆ. ಇಂತಹ ಪ್ರಾಮಾಣಿಕ, ದಕ್ಷ ಅಧಿಕಾರಿ ಸುಳ್ಯಕ್ಕೆ ಬೇಕು ಎಂದಿದ್ದಾರೆ.

ಇನ್ನೊಬ್ಬರು,

Advertisement

ಇನ್ನೊಂದು ದಕ್ಷ ಅಧಿಕಾರಿಯನ್ನು ಕಳೆದುಕೊಳ್ಳುತ್ತಿರುವ ಸುಳ್ಯ. ಕಳೆದ ಆರು ತಿಂಗಳಿನಿಂದ ಸುಳ್ಯ ನಗರವನ್ನು ಸ್ವಚ್ಛತಾ ಆಂದೋಲನದ ಮೂಲಕ ಸುಂದರ ನಗರವನ್ನಾಗಿಸಿ ಹಾಗೂ ಬಡವರ್ಗದ ಜನರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಶ್ರಮಿಸುತ್ತಿದ್ದ ಅಧಿಕಾರಿ ಹಾಗೂ ತನ್ನ ಕರ್ತವ್ಯದಲ್ಲಿ ಕಾರ್ಯದಕ್ಷತೆಯ ಮೂಲಕ ತಾಲೂಕಿನ ಚಿತ್ರಣವನ್ನೇ ಬದಲಿಸಿದ ದಕ್ಷ ಪ್ರಾಮಾಣಿಕ ಅಧಿಕಾರಿಯಾದ ಸುಳ್ಯ ತಹಶೀಲ್ದಾರ್ ಕುಂಞ್ ಅಹಮ್ಮದ್  ಅವರನ್ನುಇವತ್ತು ನಾವು ಕಳೆದುಕೊಂಡಿದ್ದೇವೆ ಎಂದಿದ್ದಾರೆ.

ಮತ್ತೊಬ್ಬರು,

Advertisement

ಸುಳ್ಯದಲ್ಲಿ ಜನರಿಗೆ ತಹಶೀಲ್ದಾರರು ಎಂದರೆ ಜನಸಾಮಾನ್ಯರ, ರೈತರ ,ಶ್ರಮಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯ. ಮಾತ್ರವಲ್ಲ ಅವರ ಕೊಠಡಿಗೆ ಯಾರು ಬೇಕಾದರೂ ಅಹವಾಲು ತೆಗೆದುಕೊಂಡು ಹೋದಾಗ ಅದನ್ನು ಆಲಿಸಿ ಸೂಕ್ತ ಮಾರ್ಗದರ್ಶನ ಅಥವಾ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ನಿರ್ದೇಶನ ಕೊಡುವ ಅತ್ಯಂತ ಪಾರದರ್ಶಕ ವ್ಯವಸ್ಥೆ ಎಲ್ಲರ ಕಣ್ಣ ಮುಂದೆ ವಾಸ್ತವವಾಗಿ ನಡೆಯುತ್ತಿದ್ದ ನಿಜವಾದ ಸ್ವರಾಜ್ಯದ ಆಡಳಿತವನ್ನು ಆರಂಭಿಸಿದ್ದರು. ಕಳೆದ 3-4 ವರ್ಷದ ಗ್ರಾಮೀಣ ಡಿಪೋ ಇದ್ದರೂ ಗ್ರಾಮೀಣ ಭಾಗದಲ್ಲಿ ಬಸ್ಸು ಸಂಚಾರ ಆರಂಭವಾಗಲೂ ಈ ತಹಶೀಲ್ದಾರರಿಗೆ ಮನವಿ ನೀಡಿದಾಗ ಮಾತ್ರ ಕಾರಣವಾಯಿತು. ಅಲ್ಲದೆ ಹಲವಾರು ರಸ್ತೆಗಳ ಕಾಮಗಾರಿ ಯಾವುದೇ ಹಣದ ಅಡತಡೆ ಇಲ್ಲದೇ ಚುರುಕಿನ ಕಾರ್ಯಗಳು ನಡೆಯಲು ಆರಂಭ ವಾಯಿತು. ರಿಜಿಸ್ಟ್ರಾರ್ ಒಬ್ಬರ ಮೇಲಿನ ಭ್ರಷ್ಟಾಚಾರ ವೀಡಿಯೋ ತನಿಖೆ ಕೂಡ ಆರಂಭವಾಯಿತು.

ಇದರ ಜೊತೆ ಗ್ರಾಮ ಪ್ರವಾಸಗಳು ಹಾಗೂ ಜನಪ್ರತಿನಿಧಿ ಸಭೆಯಲ್ಲಿ ಜನಪರವಾಗಿ ನಿಯಮ ಅನುಸಾರ ಕಠಿಣ ನಿಲುವು ತಳೆಯುವ ಕಾರ್ಯವೈಖರಿಗೆ ಮುನ್ನುಡಿ ಹಾಕಿದ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಜನಮಾನಸದಲ್ಲಿ ಗುರುತಿಸುವಷ್ಟು ಕಾರ್ಯಗಳನ್ನು ಈಗಾಗಲೇ ಮಾನ್ಯ ತಹಶೀಲ್ದಾರರು ಅಲ್ಪಾವಧಿಯಲ್ಲಿ ಕೈಗೊಂಡಿದ್ದಾರೆ.

Advertisement

ಇಷ್ಟು ಬೇಗನೇ ತಾಲೂಕಿನ ಜನತೆಗೆ ಪ್ರಯೋಜನಕಾರಿ ತಹಶೀಲ್ದಾರರ ವರ್ಗಾವಣೆ ಇತ್ತೀಚೆಗೆ ಶಾಸಕರೊಂದಿಗೆ ಸಭೆಯೊಂದರಲ್ಲಿ ನಡೆದ ಚಕಮಕಿ ಬಗ್ಗೆ ಮಾಧ್ಯಮ ವರದಿಯಂತೆ ಕಾಣಬಹುದೇ ಅಥವಾ ಆಡಳಿತ ಸಹಜ ವರ್ಗಾವಣೆಯೇ ಎಂಬುದು ಜನತೆಯ ಜಿಜ್ಞಾಸೆ. ಆದಾಗ್ಯೂ ಜನಪ್ರತಿನಿಧಿ ನಿರ್ಲಕ್ಷ್ಯಕ್ಕೆ ಒಳಗಾದ ಈ ಸುಳ್ಯಕ್ಕೆ ವರ್ಗಾವಣೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 25-11-2024 | ಒಣ ಹವೆ ಮುಂದುವರಿಕೆ | ನವೆಂಬರ್ ಕೊನೆಯ ತನಕವೂ ಮಳೆಯ ಸಾಧ್ಯತೆ ಇಲ್ಲ |
November 25, 2024
2:57 PM
by: ಸಾಯಿಶೇಖರ್ ಕರಿಕಳ
ಗದಗದ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ
November 25, 2024
7:33 AM
by: The Rural Mirror ಸುದ್ದಿಜಾಲ
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ
November 25, 2024
7:26 AM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror