ಪುತ್ತೂರು : ತಾಲೂಕು ಧ್ವನಿ ಮತ್ತು ಬೆಳಕು, ಶಾಮಿಯಾನ ಸಂಯೋಜಕರ ಸಂಘ ಇದರ ವಾರ್ಷಿಕ ಮಹಾಸಭೆಯು ಪುತ್ತೂರು ಮನೀಷಾ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಗೌರವಾಧ್ಯಕ್ಷರಾಗಿ ಹೆನ್ರಿ ಡಿಸೋಜ (ಎಂ.ಡಿ.ಎಸ್), ಅಧ್ಯಕ್ಷರಾಗಿ ಸುರೇಶ್ ರೈ ಸೂಡಿಮುಳ್ಳು (ಪದ್ಮಾಂಭ ಸರ್ವೀಸಸ್ ಸವಣೂರು), ಉಪಾಧ್ಯಕ್ಷರಾಗಿ ದಾವೂದ್ (ತಾಜ್ ಸೌಂಡ್ಸ್), ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ(ಮಹಾಲಿಂಗೇಶ್ವರ ಲೈಟಿಂಗ್ಸ್), ಸಹಕಾರ್ಯದರ್ಶಿಯಾಗಿ ನವೀನ್ (ಮಹಾಲಸ ಲೈಟ್ಸ್), ಕೋಶಾಧಿಕಾರಿಯಾಗಿ ಸಿಪ್ರಿಯನ್ ಮೊರಾಸ್ (ಸುಪ್ರಿಂ ಸರ್ವೀಸಸ್), ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ (ರೋಜಾ ಶಾಮಿಯಾನ), ಚಂದ್ರಹಾಸ ಆಳ್ವ ಶಿವಕೃಪಾ, ಸೀತಾರಾಮ ಬಲ್ನಾಡು, ಸುರೇಶ್ ಗುರುಜ್ಯೋತಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೀವು (ದುರ್ಗಾ ಲೈಟಿಂಗ್ಸ್), ಸುಧೀರ್ ಅಮ್ಚಿನಡ್ಕ, ಬಿಜು ನೆಲ್ಯಾಡಿ, ಜೀವನ್ ಕಿಶೋರ್ ಜೆ.ಬಿ.ಎಲ್, ಅಬ್ಬಾಸ್ ಈಶ್ವರ ಮಂಗಲ, ಎನ್.ಎಂ ಹೈದರ್ ರೆಂಜ, ದಿನಕರ ನೆಲ್ಯಾಡಿ, ಕೃಷ್ಣ ಪ್ರಸಾದ್ ರೆಂಜ, ದಿವಾಕರ ಬಸ್ತಿ ಸವಣೂರು, ನಾಗಪ್ಪ ಗೌಡ ಕುಂತೂರು, ಚಂದ್ರ ಪುರುಷರಕಟ್ಟೆ, ಸಂತೋಷ್ ಬೆಳಂದೂರು, ಗೋಪಾಲಕೃಷ್ಣ ಸುಳ್ಯಪದವು, ಗಣೇಶ್ ಪಂಚಾಕ್ಷರಿ, ಪ್ರಕಾಶ್ ಆಶೀರ್ವಾದ್, ಸುಧೀರ್ ಪ್ರೇಮ್, ಶ್ಯಾಮ ಮಂಜುನಾಥ ಮಂಜಲ್ಪಡ್ಪು, ರಫೀಕ್ ಬನ್ನೂರು, ದಿನೇಶ್ ನೆಕ್ಕಿಲಾಡಿ, ಯೋಗೀಶ್ ಕಾವು, ರತನ್ ರೈ ಕುಂಬ್ರ ಆಯ್ಕೆಯಾದರು. ಮಹಾಸಭೆಯನ್ನು ದುರ್ಗಾ ಲೈಟ್ ಮತ್ತು ಸೌಂಡ್ಸ್ನ ಕೃಷ್ಣಪ್ಪ ಅವರು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಎಂ.ಡಿ.ಎಸ್ ಸರ್ವೀಸ್ ಇದರ ಮಾಲಕ ಹೆನ್ರಿ ಡಿಸೋಜ ಅವರು ವಹಿಸಿದ್ದರು. ಸಭೆಯಲ್ಲಿ ಧ್ವನಿ ವರ್ದಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು, ಬಂಟ್ವಾಳ ತಾಲೂಕು ಒಕ್ಕೂಟದ ಅಧ್ಯಕ್ಷ ಶೇಖ್ ಸುಬಾನ್, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ರೋಹಿತ್ ಕುಮಾರ್, ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಗಿರಿಧರ್ ಉಪಸ್ಥಿತರಿದ್ದರು. ವಿಲಿಯಂ ಡಿಸೋಜ ಸ್ವಾಗತಿಸಿ, ತಾಲೂಕು ಧ್ವನಿ ಮತ್ತು ಬೆಳಕು, ಶಾಮಿಯಾನ ಸಂಯೋಜಕರ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ ವಂದಿಸಿದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…