ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಂಶುದ್ದೀನ್ ಸಂಪ್ಯ ಆಯ್ಕೆಯಾಗಿದ್ದಾರೆ. ನ 2 ರಂದು ಪತ್ರಿಕಾ ಭವನದಲ್ಲಿ ಮಹಾಸಭೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನಿಕಟ ಪೂರ್ವ ಅಧ್ಯಕ್ಷ ಸುಧಾಕರ್ ಸುವರ್ಣ ತಿಂಗಳಾಡಿ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾಧಿಕಾರಿಯಾಗಿ ಬಿ ಟಿ ರಂಜನ್, ಉಪಚುನಾವಣಾಧಿಕಾರಿಗಳಾಗಿ ಮೇಘಾ ಪಾಲೆತ್ತಡಿ ಮತ್ತು ಬಾಲಕೃಷ್ಣ ಕೊಯಿಲ ಕಾರ್ಯನಿರ್ವಹಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಕನ್ನಡ ಪ್ರಭ ಮತ್ತು ವಾರ್ತಾಭಾರತಿಯ ಪುತ್ತೂರು ವರದಿಗಾರ ಸಂಶುದ್ದೀನ್ ಸಂಪ್ಯ, ಕಾರ್ಯದರ್ಶಿಯಾಗಿ ಉದಯವಾಣಿಯ ಕಡಬ ವರದಿಗಾರ ಎನ್.ಕೆ.ನಾಗರಾಜ್, ಉಪಾಧ್ಯಕ್ಷರಾಗಿ ಉದಯವಾಣಿ ಉಪ್ಪಿನಂಗಡಿ ವರದಿಗಾರ ಸರ್ವೇಶ್ ಕುಮಾರ್ ಮತ್ತು ವಿಜಯ ಕರ್ನಾಟಕ ಪುತ್ತೂರು ಗ್ರಾಮಾಂತರ ವರದಿಗಾರ ಸಿದ್ದಿಕ್ ಕುಂಬ್ರ, ಕೋಶಾಧಿಕಾರಿಯಾಗಿ ಕೃಷ್ಣಪ್ರಸಾದ್ ಬಲ್ನಾಡು, ಜೊತೆಕಾರ್ಯದರ್ಶಿಯಾಗಿ ಜಯಕಿರಣ ಉಪ್ಪಿನಂಗಡಿ ವರದಿಗಾರ ನಜೀರ್ ಕೊಯಿಲ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿದ್ದು ಉಳಿದ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಆಯ್ಕೆಯಾದರು.
ಶ್ರವಣ್ ಕುಮಾರ್ ನಾಳ,ಶಶಿಧರ ರೈ ಕುತ್ಯಾಳ, ಕುಮಾರ್ ಕಲ್ಲಾರೆ, ಸುಧಾಕರ ಪಡೀಲ್, ಹರೀಶ್ ಕೃಷ್ಣ ಸ್ಟುಡಿಯೊ, ಉಮಾಶಂಕರ್ ಪಾಂಗ್ಲಾಯಿ, ರಾಜೇಶ್ ಪಟ್ಟೆ, ರಾಮಚಂದ್ರ ಬರೆಪ್ಪಾಡಿ, ಲೋಕೇಶ್ ಬನ್ನೂರು, ಅನೀಶ್ ಕುಮಾರ್ ಮರೀಲ್, ಪ್ರವೀಣ್ ಬೊಳುವಾರು, ಕಿರಣ್ ಪ್ರಸಾದ್ ಕುಂಡಡ್ಕ, ಸಿಶೇ ಕಜೆಮಾರ್, ಕರುಣಾಕರ್ ರೈ ಸಿ ಹೆಚ್ ,ಶೇಖ್ ಜೈನುದ್ದೀನ್, ದೀಪಕ್ ಉಬಾರ್, ಸಂತೋಷ್ ಕುಮಾರ್ ಶಾಂತಿನಗರ, ನಾರಾಯಣ ನಾಯ್ಕ್ ಅಮ್ಮುಂಜ, ಉದಯ ಕುಮಾರ್ ಯು ಎಲ್, ಹರೀಶ್ ಬಾರಿಂಜ, ಯತೀಶ್ ಉಪ್ಪಳಿಗೆ, ಉಮಾಪ್ರಸಾದ್ ರೈ ನಡುಬೈಲು ಉಪಸ್ಥಿತರಿದ್ದರು.